ಕೊಪ್ಪಳ: ವಿಜಯನಗರ ಶ್ರೀ ಕೃಷ್ಠದೇವರಾಯ ವಿ ವಿ ವ್ಯಾಪ್ತಿಯ ಸ್ನಾತಕೋತ್ತರ ವಿಭಾಗದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕ ಪಡೆಯಿತ್ತಿರುವುದನ್ನು ನಿಲ್ಲಿಸುವಂತೆ ಕೊಪ್ಪಳ ಜಿಲ್ಲಾ ಎಸ್ ಫ್ ಐ ಇಂದು ವಿವಿ ಕುಲಪತಿಗಳಿಗೆ ಒತ್ತಾಯಿಸಿತು.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ವಿಜಯನಗರ ವಿ.ವಿ ವ್ಯಾಪ್ತಿಯ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸ್ನಾತಕೋತ್ತರ ವಿಭಾಗದಲ್ಲಿ ಕಲಿಯುತ್ತಿರುವ ಎಂ.ಎ., ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕನ್ನಡ, ಹಾಗೂ ಎಂ.ಕಾಂ. ಎಂ.ಎಸ್.ಡಬ್ಲ್ಯೂ, ಎಂ.ಎಸ್.ಸಿ. ವಿವಿಧ ಕೋರ್ಸುಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ದಾಖಲಾತಿ ಸಂದರ್ಭದಲ್ಲಿ ಮಾತ್ರ ಶುಲ್ಕವನ್ನು ತೆಗೆದುಕೊಳ್ಳಲಾಗಿದೆ. ಈಗ ಈ ಶೈಕ್ಷಣಿಕ ವರ್ಷದಲ್ಲಿ ಮತ್ತೆ ೨ ಮತ್ತು ೪ನೇ ಸೆಮಿಸ್ಟರಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ರೂ.೩೫೦/- ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರೂ.೩೫೦೦/- ಪಡೆಯುವಂತೆ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕು. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಮಾಡುತ್ತಿದ್ದು, ದಾಖಲಾತಿ ಮತ್ತು ಪರೀಕ್ಷಾ ಶುಲ್ಕ ಸಂದರ್ಭದಲ್ಲಿಯೂ ಸಹ ಹೀಗೆ ಹೆಚ್ಚಳ ಮಾಡಿದ್ದಿರಿ. ಕೊನೆಗೆ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಶುಲ್ಕವನ್ನು ಕೈಬಿಟ್ಟಿರಿ. ಹಾಗೂ ಪದವಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿವಿ ಯ ಬೇಜವಾಬ್ದಾರಿತನದಿಂದಾಗಿ ಅನೇಕ ಪ್ರಶ್ನೆ ಪತ್ರಿಕೆಗಳು ಪರೀಕ್ಷೆ ನಡೆಯುವದಕ್ಕಿಂತ ಮೊದಲೇ ಬಹಿರಂಗವಾಗಿದ್ದವು. ಎಂದು ಎಸ್ ಎಫ್ ಐ ಮನವಿಯಲ್ಲಿ ಆಗ್ರಹಿಸಿದೆ.
ಹೈ.ಕ. ದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲರಿಗೂ ಉನ್ನತ ಶಿಕ್ಷಣ ಸಿಗಲಿ ಎಂಬ ಆಶಯದೊಂದಿಗೆ ಈ ವಿಶ್ವವಿದ್ಯಾಲಯವು ಪ್ರಾರಂಭಗೊಂಡಿದ್ದು ಈ ಭಾಗದ ಅನೇಕ ವಿದ್ಯಾರ್ಥಿಗಳು ಪಾರ್ಟ ಟೈಂ ಕೆಲಸ ಮಾಡುತ್ತಾ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ರೀತಿವಿ.ವಿ ಪದೇ ಪದೇ ದೀಢಿರನೆ ಶುಲ್ಕ ಹೆಚ್ಚಳ ಮಾಡುವುದರಿಂದ ವಿದ್ಯಾರ್ಥಿಗಳು ಆರ್ಥಿಕವಾಗಿ ಜರ್ಜತಿರಾಗಿರುತ್ತಾರೆ. ಶುಲ್ಕ ಕಟ್ಟಲಾಗದೇ ಶಿಕ್ಷಣ ಮೊಟಕುಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಕಾರಣ ಅನೇಕ ಸ್ನಾತಕೋತ್ತರ ವಿಭಾಗದಲ್ಲಿ ವಿದ್ಯಾರ್ಥಿಗಳು ಬರಲಾರದೇ ಸೀಟುಗಳು ಕೂಡ ಖಾಲಿ ಇದ್ದು, ಕೆಲ ಕೋರ್ಸುಗಳನ್ನು ಮುಚ್ಚಿದ್ದೀರಿ. ಯಾವುದೇ ವಿಶ್ವವಿದ್ಯಾಲಯದಲ್ಲಿ ತೆಗೆದುಕೊಳ್ಳದ ಶುಲ್ಕವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ಹೊರೆ ಮಾಡಲಾಗುತ್ತಿದೆ. ಕಾರಣ ಕೂಡಲೆ ವಿ.ವಿ ಈ ಸುತ್ತೋಲೆಯನ್ನು ವಾಪಸ್ ಪಡೆದು ಈ ಹಿಂದಿನಂತೆ ಯಥಾ ರೀತಿ ಕಾಲೇಜುಗಳನ್ನು ಪ್ರಾರಂಭಿಸಬೇಕು. ತಪ್ಪಿದಲ್ಲಿ ಎರಡೂ ಜಿಲ್ಲೆಗಳಲ್ಲಿ ಹೋರಾಟದ ಮೂಲಕ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆಂದು ಎಸ್.ಎಫ್.ಐ ಜಿಲ್ಲಾ ಸಮಿತಿಯು ಮನವಿಯಲ್ಲಿ ಎಚ್ಚರಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಮುಖಂಡರಾದ ಶಿವುಕುಮಾರ, ಕೃಷ್ಣ ರಾಠೋಡ, ಹನುಮಂತ ರಾಠೋಡ, ಮುಖ್ತಾರ್, ಅಜಯಕುಮಾರ, ಹೊನ್ನೂರ ಅಲಿ ಇನ್ನಿತರರು ಇದ್ದರು.
0 comments:
Post a Comment