PLEASE LOGIN TO KANNADANET.COM FOR REGULAR NEWS-UPDATES

ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳದ ಸಹಾಯಕ ಔಷಧ ನಿಯಂತ್ರಕರಾದ ಹೆಚ್.ಎಂ. ರೇಣುಕಾಸ್ವಾಮಿ ಅವರು ತಿಳಿಸಿದ್ದಾರೆ.
ಕ್ಲಾವಿಜೆಟ್-೬೨೫, ಅಮಾಕ್ಸಿಸಿಲಿನ್ ಹಾಗೂ ಪೊಟಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ, ಜಿಪಿಬಿ-೧೩೫೧೦, ಮೆ|| ಗ್ನೋಸಿಸ್ ಫಾರ್ಮಾಸ್ಯುಟಿಕಲ್ಸ್ ಪ್ರೈ.ಲಿ., ಹಿಮಾಚಲ ಪ್ರದೇಶ. ಪೈರ (ಪ್ಯಾರಸಿಟಮೋಲ್ ಟ್ಯಾಬ್ಲೆಟ್ಸ್ ಐಪಿ ೫೦೦ ಎಮ್‌ಜಿ), ೧೪೦೧, ಮೆ|| ವಿನ್‌ಕೊಟೆಮ್ ಫಾರ್ಮಾಸ್ಯುಟಿಕಲ್ಸ್, ಉಜ್ಜೈನ್. ಅಸೆಕ್ಲೊಫಾಸ್ಟ್-ಪಿ (ಅಸೆಕ್ಲೋಫೆನಾಕ್ ಅಂಡ್ ಅಸೆಟಮಿನೊಫೆನ್ ಟ್ಯಾಬ್ಲೆಟ್ಸ್), ಡಿ೩೦೪೫, ಮೆ|| ವಿಟಾನೆ ಫಾರ್ಮಾಸ್ಯುಟಿಕಲ್ಸ್ ಪ್ರೈ.ಲಿ. ಹೈದರಾಬಾದ್.  ಹೆಲ್‌ಸಿಪ್ರೊ-೨೫೦ (ಸಿಪ್ರೊಫ್ಲೋಕ್ಸಾಸಿನ್ ಟ್ಯಾಬ್ಲೆಟ್ಸ್ ಐಪಿ), ಎಂಎಸ್‌ಟಿ-೧೩೪೨೦, ಮೆ|| ಸೀ ಫಾರ್ಮಾಸ್ಯುಟಿಕಲ್ಸ್ ಸೂರಜ್‌ಪುರ. ಸೆಫಾಲೆಕ್ಸ್-೫೦೦ (ಸೆಫಾಲೆಕ್ಸಿನ್ ಕ್ಯಾಪ್ಸೂಲ್ಸ್ ಐ.ಪಿ.) ೫೦೦ ಎಂ.ಜಿ, ೧೩೦೩, ಮೆ|| ಅಕೇಶಿಯ ಬಯೋಟೆಕ್ ಲಿ.,  ಉತ್ತರಖಂಡ್.  ನಾರ್‌ಕಿನ್-ಟಿಜೆಡ್ (ನಾರ್‌ಫ್ಲೊಕ್ಸಾಸಿನ್ ಹಾಗೂ ಟಿನಿಡಾಜೋಲ್ ಟ್ಯಾಬ್ಲೆಟ್ಸ್), ಟಿ-೧೩೦೮೨೦೯, ಮೆ|| ಇಂಡ್ಕಸ್ ಬಯೋಟೆಕ್ ಇಂಡಿಯ ವಿಲ್. ಹಿಮಾಚಲ ಪ್ರದೇಶ. ಮೆಟ್‌ಫಾರ್ಮಿನ್ ಟ್ಯಾಬ್ಲೆಟ್ಟ್ ಐಪಿ ೫೦೦ ಎಂಜಿ, ಎಂಎಫ್-೧೧೧, ಮೆ|| ಮಿನೊಫಾರ್ಮ ಲ್ಯಾಬೊರೇಟೊರೀಸ್ ಪ್ರೈ.ಲಿ., ಫರ್ನಾಮಿಟ್ಟ. ಅಸೆಕ್ಲೊಫೆನಾಕ್ ಪ್ಯಾರಸಿಟಮೊಲ್ ಹಾಗೂ ಕ್ಲೊರ್‌ಜೊಕ್ಸಾ ಜೋನ್ ಟ್ಯಾಬ್ಲೆಟ್ಸ್ (ಟ್ರೊಯ್‌ಫೆನಾಕ್ ಎಂಆರ್) ಎಟಿ-೦೦೧೨೦, ಮೆ|| ಅಲಿಯಾನ್ಸ್ ಬಯೋಟೆಕ್, ಹಿಮಾಚಲ ಪ್ರದೇಶ. ಪಾಸ್ಪೇಟ್ ಎನೆಮ ಬಿಪಿ (ಎನೆಮ ಬಿಪಿ), ೧೪೦೧, ಮೆ|| ಹರ್ಷ ಹೆಲ್ತ್ ಕೇರ್ ೧೦೦-೧೦೧.  ಬಿ-ಸೆಫ್ ಡಿಎಸ್ ಸೆಫಿಕ್ಸೈಮ್ ಓರಲ್ ಸಸ್ಪೆನ್‌ಷನ್ ಐಪಿ), ಜೆಕೆಎಲ್-೧೪೧೭, ಮೆ|| ಜಪ್ಸಿ ಕೆಎಮ್ ಫಾರ್ಮಾಸ್ಯುಟಿಕಲ್ಸ್, ಹಿಮಾಚಲ ಪ್ರದೇಶ. (ಅನ್‌ರೋಸ್) ರೊಸುವಸ್ಟಟಿನ್ ಟ್ಯಾಬ್ಲೆಟ್ಸ್ ಐಪಿ, ಎಹೆಚ್‌ಟಿ೧೪೦೭೦೦೫, ಮೆ|| ಆನ್‌ತೆಮ್ ಸೆಲ್ಯುಶನ್ಸ್ (ಇಂಡಿಯಾ) ಲಿ., ಉತ್ತರಾಖಂಡ್, ಸೈಕ್ಲೊಹಾಟ್ ಟ್ಯಾಬ್ಲೆಟ್ಸ್, ೧೭೧೩, ಮೆ|| ಜೆನಿಫೆರ್ ಫಾರ್ಮಾಸ್ಯುಟಿಕಲ್ಸ್ ದಾರ್ ಮಧ್ಯಪ್ರದೇಶ.
ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- ೦೮೫೩೯-೨೨೧೫೦೧ ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ 

Advertisement

0 comments:

Post a Comment

 
Top