
ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ನಡೆಸಲಾಗುವ ಸಾಮಾನ್ಯ ಜ್ಞಾನ ಪ್ರತಿಭಾ ರಾಜ್ಯ ಮಟ್ಟದ ಸ್ಪರ್ಧೆಗೆ ಕೊಪ್ಪಳದ ಶಿವಶಾಂತವೀರ ಪಬ್ಲಿಕ್ ಶಾಲೆಯ ಅನುಶ್ರೀ, ಸಹನಾ, ಹೃಷಿಕೇಶ್, ಆದರ್ಶ, ಬಸವರಾಜ್, ಗುರುಪ್ರಸಾದ್, ಆಕಾಶ್ ಜೆ. ಪಾಟೀಲ್, ಗ್ರೀಷ್ಮಾ ಹಾಗೂ ಅಂಜಲಿ ಸೇರಿದಂತೆ ಒಟ್ಟು ೦೯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಕಳೆದ ಜ. ೨೪ ರಂದು ಬೆಂಗಳೂರಿನ ಶಿಕ್ಷಣ ಸದನದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗ್ರೀಷ್ಮಾ ವಿದ್ಯಾರ್ಥಿನಿ ಉತ್ತಮ ಸಾಧನೆ ತೋರಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿನಿಗೆ ಗವಿಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವದಿಸಿದ್ದು, ಬಾಲಕಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಮುಖ್ಯೋಪಾಧ್ಯಾಯರಾದ ಕೆ. ರೋಜ್ ಮೇರಿ, ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment