ಕೊಪ್ಪಳ: ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮವನ್ನು ಗ್ರಾಮ ಪಂಚಾತಿ ಕೇಂದ್ರಸ್ಥಾನವನ್ನಾಗಿ ಮಾಡಬೇಕೆಂದು ಅರಸಿನಕೇರಿ ಹಾಗೂ ಅರಿಸಿನಕೇರಿ ತಾಂಡ, ಜಿನ್ನಾಪೂರ, ಜಿನ್ನಾಪೂರ ತಾಂಡ, ಚಿಕ್ಕತಾಂಡ ಗ್ರಾಮದ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಮೂದಲು ಮೆತಗಲ್ ಗ್ರಾಮವು ಹಾಸಗಲ್ ಗ್ರಾಮ ಪಂಚಾಯತಿಗೆ ಒಳ್ಳಪಟ್ಟಿತ್ತು ಗ್ರಾಮ ಪಂಚಾಯತಿ ಪುನರ ವಿಂಗಡಣಾ ಸಮಿತಿಯು ಪ್ರಕಾರ ಒಣಬಳ್ಳಾರಿಗೆ ಸೇರಿಸಿದ್ದಾರೆ ಕಾರಣ ನಮ್ಮಗೆ ಅಲ್ಲಿಗೆ ಹೊಗಲು ಬರಲು ೮ ಕೀ.ಮೀ ದೂರವಾಗುತ್ತದೆ, ಮತ್ತು ಅಲ್ಲಿ ಯಾವುದೇ ರೀತಿಯ ಸೌಲಭ್ಯಗಳಿಲ್ಲ ಇರುವುದಿಲ್ಲಾ ಮೆತಗಲನಿಂದ ಅರಶೀನಕೇರಿತಾಂಡ ಗೆ ೨ ಕೀ.ಮೀ ಇರುತ್ತದೆ. ಮೆತಗಲನಿಂದ ಒಣಬಳ್ಳಾರಿ ೬ ಕೀ.ಮೀ ದೂರವಿರುತ್ತದೆ, ಜಿನ್ನಾಪೂರ ಮತ್ತು ಜಿನ್ನಾಪೂರ ತಾಂಡ ೧.೨ ಕೀ.ಮೀ ಇದ್ದು ಮೆತಗಲ್ ನಿಂದ ಒಣಬಳ್ಳಾರಿಗೆ ೬ ಕೀ.ಮೀ ದೂರವಿರುತ್ತದೆ. ಅರಶಿನಕೇರಿ ಗ್ರಾಮಸ್ಥರು ಮೆತಗಲಿಗೆ ಬಂದು ಒಣಬಳ್ಳಾರಿಗೆ ಹೋಗಬೇಕು. ಮತ್ತು ಮೆತಗಲ್ ಗ್ರಾಮವು ಕೊಪ್ಪಳ ತಾಲೂಕಿಗೆ ಸಮಿಪ ಇದ್ದು ಜನರಿಗೆ ಬಸ್ಸಿನ ಅನೂಕೂಲವಾಗಿದ್ದು ಇಲ್ಲಿ ೮ನೇ ತರಗತಿಯವರೆಗಿ ಶಾಲೆ ಇರುತ್ತದೆ ಸುತ್ತಮುತ್ತಲಿನ ೫ ಗ್ರಾಮದ ಪ್ರತಿಯೊಂದು ಗ್ರಾಮದಿಂದ ೨೫ ರಿಂದ ೩೦ ಜನ ವಿದ್ಯಾರ್ಥಿಗಳಿಗೆ ಮೆತಗಲ್ ಶಾಲೆಗೆ ಬರುತ್ತಾರೆ ಆದ್ದರಿಂದ ಆದ್ದರಿಂದ ಈ ಮೇಲೆ ತಿಳಿಸಿದ ಎಲ್ಲಾ ಗ್ರಾಮಸ್ಥರು ಮತ್ತು ಸ್ವ ಸಹಾಯ ಸಂಘದವರು ಮತ್ತು ಊರಿನ ಎಲ್ಲಾ ಹಿರಿಯರು ಜಿಲ್ಲಾಧಿಕಾರಿಗಳಿಗೆ ಮೆತಗಲ್ ಗ್ರಾಮವನ್ನು ಗ್ರಾಮ ಪಂಚಾಯಿಯನ್ನಾಗಿ ಮಾಡಬೇಕೆಂದು ಮನವಿ ಕೊಟ್ಟಿರುತ್ತಾರೆ.
0 comments:
Post a Comment