PLEASE LOGIN TO KANNADANET.COM FOR REGULAR NEWS-UPDATES

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾಲೇಜು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಆತ್ಮಸ್ಥೈರ್ಯ ತುಂಬಲು ಕಾಲೇಜು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ರಂಗೋತ್ಸವವನ್ನು ಏರ್ಪಡಿಸಲು ಉದ್ದೇಶಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ.
  ಸ್ಪರ್ಧಾತ್ಮಕ ರಂಗೋತ್ಸವವು ಮೂರು ಹಂತಗಳದ್ದಾಗಿದ್ದು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.  ಪ್ರಥಮ ಹಂತವಾಗಿ ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಜನವರಿ ಮಾಸಾಂತ್ಯದಲ್ಲಿ ನಾಟಕೋತ್ಸವವನ್ನು ಏರ್ಪಡಿಸಲಾಗುವುದು.  ಜಿಲ್ಲಾ ಮಟ್ಟದ ನಾಟಕ ಹಾಗೂ ಜಾನಪದ ಉತ್ಸವದಲ್ಲಿ ಪಾಲ್ಗೊಂಡ ತಂಡಗಳಲ್ಲಿ ತಲಾ ೦೨ ನಾಟಕ ತಂಡ ಮತ್ತು ೦೨ ಜಾನಪದ ತಂಡಗಳನ್ನು ವಿಭಾಗೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಒಂದು ಕಾಲೇಜಿಗೆ ಒಂದು ಜಾನಪದ ಮತ್ತು ಒಂದು ನಾಟಕಕ್ಕೆ ಮಾತ್ರ ಅವಕಾಶವಿದೆ.  ಜಾನಪದ ಪ್ರಕಾರಗಳಲ್ಲಿ ಡೊಳ್ಳು, ಕಂಸಾಳೆ, ತಮಟೆ, ಕೋಲಾಟ, ಜಗ್ಗಲಿಗೆ ಇತ್ಯಾದಿಯಂತಹ, ಪ್ರದರ್ಶನ ಜಾನಪದ ಕಲೆಗಳಾಗಿರಬೇಕು.  ಪ್ರತಿ ಕಾಲೇಜಿನಿಂದ ೧೫ ನಾಟಕ ಕಲಾವಿದರು ಮತ್ತು ಜಾನಪದ ಕಲಾವಿದರು ಸೇರಿದಂತೆ ಗರಿಷ್ಠ ೩೦ ಜನ ಕಲಾವಿದರು ಭಾಗವಹಿಸಬಹುದು.  ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು, ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜ. ೨೦ ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗೆ ೦೮೫೩೯-೨೨೧೪೧೭ ಕ್ಕೆ ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ತಿಳಿಸಿದ್ದಾರೆ.

Advertisement

0 comments:

Post a Comment

 
Top