ಕೊಪ್ಪಳ: ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಸವರಾಜ ಹೊಳೆಯಾಚೆ ವಹಿಸಿದ್ದರು. ಉದ್ಘಾಟಕರಾಗಿ ಗ್ರಾ. ಪಂ. ಅಧ್ಯಕ್ಷಿಣಿ ಶ್ರೀಮತಿ ಗಂಗಮ್ಮ ಬೆಣ್ಣಿ, ಜ್ಯೋತಿ ಬೆಳಗಿಸಲು ಗ್ರಾ.ಪಂ ಸದಸ್ಯ ಶಂಕ್ರಪ್ಪ ಕೊಪ್ಪಳ ಆಗಮಿಸಿದ್ದರು. ಉಪನ್ಯಾಸಕರಾಗಿ ಶರಣಬಸವೇಶ್ವರ ಇಂಗ್ಲೀಷ ಮಾಧ್ಯಮ ಶಾಲೆಯ ಶಿಕ್ಷಕ ಜಗದೀಶ ವಾಯ್ ಬಜೆಂತ್ರಿ ಆಗಮಿಸಿ ಮಾತನಾಡುತ್ತಾ, ದೇಶದ ಏಳಿಗೆಯಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ನೈತಿಕ ಮೌಲ್ಯ ಮತ್ತು ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ್ದರು.
ಈ ಕಾರ್ಯಕ್ರಮದ ಅಂಗವಾಗಿ ಸುತ್ತ ಮುತ್ತಲಿನ ೯ ಶಾಲೆಗಳ ೧ ರಿಂದ ೪ ನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನವನ್ನು ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಗುಳದಳ್ಳಿ, ದ್ವೀತಿಯ ಸ್ಥಾನ ಸ.ಹಿ.ಪ್ರಾ. ಶಾಲೆ ಇಂದರಗಿ, ತೃತಿಯಸ್ಥಾನ ಸ.ಹಿ.ಪ್ರಾ. ಶಾಲೆ ಗಬ್ಬೂರ, ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಬಸವರಾಜ ಗೊಲ್ಲರ, ಶಿವಪ್ಪ ಕಾತರಕಿ, ಅಂದಿಗಾಲಪ್ಪ ಹೊಳೆಯಾಚೆ, ಪಂಪಣ್ಣ ಮೇಟಿ, ಹನಮಂತಪ್ಪ ಹುಲಿಗಿ, ವಿರೇಶ ಮೇಟಿ, ವಿನಾಯಕ ಜೋಶಿ, ಎಸ್.ಡಿ.ಎಮ್. ಅಧ್ಯಕ್ಷ ಕನಕಪ್ಪ ಮುದ್ಲಾಪೂರ, ಪ್ರಬಾಕರ ಬಡಿಗೇರ, ವೀರಣ್ಣ, ವಿಜಯಲಕ್ಷ್ಮಿ ಹಾಗೂ ಮುಖ್ಯ ಶಿಕ್ಷಕ ಮಹೇಶ ಬಡಿಗೇರ, ಶಿಕ್ಷಕರಾದ ವೀರಣ್ಣ , ಶಿವಾನಂದ, ದಯಾನಂದ ಮೇದಿಕೆ ಮೇಲೆ ಉಪಸ್ಥಿತರಿದ್ದರು.
0 comments:
Post a Comment