PLEASE LOGIN TO KANNADANET.COM FOR REGULAR NEWS-UPDATES

ಮನುಷ್ಯನು ಸ್ವಾರ್ಥ ಸಾಧನೆಯನ್ನು ಬಿಟ್ಟು ದೇಶ ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಮಾಡಿದಾಗ ಮಾನವ ಜನ್ಮ ಸಾರ್ಥಕವಾಗುತ್ತದೆ. ಮತ್ತು ಗೃಹಸ್ಥಾಶ್ರಮಕ್ಕೆ ಕಾಲಿಡುವ ನವದಂಪತಿಗಳು ಸಾಮೂಹಿಕ ಜವಾಬ್ದಾರಿಯನ್ನು ಅರಿತು ಜೀವನ ಮಾಡುವದು ಒಳಿತು ಎಂದು ನೇಗಳೂರಿನ ಶ್ರೀಶ್ರೀ೧೦೮ ಷ|| ಬ್ರ|| ಗುರುಶಾಂತ ಶಿವಾಚಾರ್ಯ ಮಹಾ ಸ್ವಾಮಿಗಳು ತಿಳಿಸಿದರು.
ಅಳವಂಡಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯವ್ನನು ವಹಿಸಿ ಶ್ರೀಗಳು ಮಾತನಾಡುತ್ತ ಅಳವಂಡಿಯ ಶ್ರೀ ಸಿದ್ದೇಶ್ವರ ಮಠವು ಲಕ್ಷಾಂತರ ಭಕ್ತರನ್ನು ಹೊಂದಿದ್ದು ಉಜೈನಿ ಪೀಠದ ಮತ್ತೊಂದು ವೈಭವವನ್ನು ಈ ಗ್ರಾಮದಲ್ಲಿ ಕಾಣಬಹುದು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅಳವಂಡಿ ಶ್ರೀಮಠದ ಶ್ರೀಶ್ರೀ ೧೦೮ ಷ||ಬ್ರ|| ಸಿದ್ದಲಿಂಗ ಶಿವಾಚಾರ್ಯರು ನಮ್ಮ ಮಠದ ಆಶ್ರಯದಲ್ಲಿ ಜರುಗುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅಳವಂಡಿ ಮತ್ತು ಎಲ್ಲಾ ಗ್ರಾಮಗಳ ಭಕ್ತರ ಹೃದಯ ಶ್ರೀಮಂತಿಕೆಯೇ ಕಾರಣ, ಶ್ರೀ ಸಿದ್ದೇಶ್ವರನು ಸಕಲ ಭಕ್ತರಿಗೆ ಒಳ್ಳೆಯದನ್ನು ಮಾಡಲಿಯಂದು ಆಶಿರ್ವಚನ ನೀಡಿದರು, ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಅಳವಂಡಿಯ ಶ್ರೀ ಸಿದ್ದೇಶ್ವರ ಮಠದ ಧಾರ್ಮಿಕ ಮತ್ತು
ಶೈಕ್ಷಣಿಕ ಪ್ರಗತಿ ಅತ್ಯಂತ ಆದರ್ಶಪ್ರಾಯವಾಗಿದೆ. ಪ್ರತಿವರ್ಷದಂತೆ ಈ ವರ್ಷವು ಜಾತ್ರೆಯು ಸಾವಿರಾರು ಭಕ್ತರೊಂದಿಗೆ ವಿಜ್ರಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಉಜೈನಿ ಪೀಠದ ಸಿಂಹಾಸನಾಧೀಶ್ವರಾದ ಶ್ರೀಶ್ರೀಶ್ರೀ ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಗಮಿಸಿ ಆರ್ಶಿವದಿಸಿ ತೆರಳಿದರು. ಈ ಕಾರ್ಯಕ್ರಮದಲ್ಲಿ ಶ್ರೀಶ್ರೀ ೧೦೮ ಷ|| ಬ್ರ|| ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಳವಂಡಿ. ಶ್ರೀಶ್ರೀ ೧೦೮ ಷ|| ಬ್ರ|| ಮಲ್ಲಿಕಾರ್ಜುನ್ ಶಿವಾಚಾರ್ಯ ಮಹಾಸ್ವಾಮಿಗಳು ನರೇಗಲ್. ಶ್ರೀಶ್ರೀ ೧೦೮ ಷ|| ಬ್ರ|| ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೈನಳ್ಳಿ-ಬಿಕನಳ್ಳಿ ಶ್ರೀಗಳು ದಿವ್ಯಸಾನಿಧ್ಯವನ್ನು ವಹಿಸಿದ್ದರು. ಈ ಸಂಧರ್ಭದಲ್ಲಿ ೧೩ ಜೋಡಿ ದಂಪತಿಗಳು ನವ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸಿದ್ದೇಶ್ವರ ಮಠದ ಸಾವಿರಾರು ಭಕ್ತರು ಸಾಮೂಹಿಕ ವಿವಾಹ ಹಾಗೂ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top