ಮಹಿಳೆಯರ ಮೂಲಭೂತ ಹಕ್ಕಾದ ಶೌಚಾಲಯ ನಿರ್ಮಿಸಲು ಮತ್ತು ೫ನೇ ವಾರ್ಡ್‌ನಲ್ಲಿ ಶೌಚಾಲಯ ಜಾಗದ ಆಕ್ರಮಣಗಳನ್ನು ತೆರುವುಗೊಳಿಸಲು ಅಖಿಲ ಭಾರತ ಮಹಿಳಾ ಸಂಘ ನಗರಸಭೆ ಮುಂದೆ ಧರಣಿ ಮಾಡಿ ಧಿಕ್ಕಾರದ ಮುಖಾಂತರ ಹೊಸ ವರ್ಷವನ್ನು ಸ್ವಾಗತಿಸಿದೆ ಎಂದು ಐಪ್ವಾ ಜಿಲ್ಲಾಧ್ಯಕ್ಷಿಣಿ ಶಾಂತಕುಮಾರಿ ತಿಳಿಸಿದ್ದಾರೆ.
ತಾರಿಖಿನಂದು ಓಣಿಯ ಜನ ನಗರದ ಕಾರ್ಮಿಕ ಸಂಘಟನೆಯೊಂದಿಗೆ ಕೂಡಿಕೊಂಡು ತಾವೇ ಸ್ವತಃ ಅತಿಕ್ರಮಣಗಳನ್ನು ತೆರುವುಗೊಳಿಸುವುದಾಗಿ ಹೇಳಿದರು. ಶಾಂತಕುಮಾರಿ ಮಾತನಾಡುತ್ತಾ ಪೌರಾಯುಕ್ತರಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿ ೫ನೇ ತಾರೀಖಿನ ಒಳಗಾಗಿ ಅತಿಕ್ರಮಣ ತೆರುವುಗೊಳಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರೇ ತೆರುವುಗೊಳಿಸುತ್ತಾರೆ ಎನ್ನುತ್ತಾ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬೇಡಿ, ಮಾತಿನಂತೆ ೫ನೇ ತಾರೀಖಿನಿಂದ ತೆರುವು ಕಾರ್ಯವನ್ನು ಆರಂಭಿಸುವಂತೆ ಪೌರಾಯುಕ್ತರಿಗೆ ಒತ್ತಾಯಿಸಿದ್ದಾರೆ.
ಈ ಧರಣಿಯಲ್ಲಿ ಫಾತಿಮಾ ಬೇಗಂ, ಖಾಸೀಂಬೀ, ಹುಲಿಗೆಮ್ಮ, ಯಮನಮ್ಮ, ರಾಧಾ, ಯಂಕಮ್ಮ, ನಾಗರತ್ನ, ಅಂಬಮ್ಮ, ಬುಡ್ಡಿಮಾ, ಹುಸೇನಬೀ, ಶಾಂತಮ್ಮ, ಶಾರದಮ್ಮ, ಉಷಾ ಜೊತೆಗೆ ನೂರಾರು ೫ನೇ ವಾರ್ಡ್‌ನ ಮಹಿಳೆಯರು ಪಾಲ್ಗೊಂಡಿದ್ದರು.
0 comments:
Post a Comment