PLEASE LOGIN TO KANNADANET.COM FOR REGULAR NEWS-UPDATES

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ’ಯುವ ಸೌರಭ’ ಕಾರ್ಯಕ್ರಮವನ್ನು ಜ.೩೧ ರಂದು ಸಂಜೆ ೫ ಗಂಟೆಗೆ ಗಂಗಾವತಿಯ ನೀಲಕಂಠೇಶ್ವರ ವೃತ್ತದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಇಕ್ಬಾಲ್ ಅನ್ಸಾರಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಶರಣಪ್ಪ ಮಟ್ಟೂರು, ಅಮರನಾಥ ಪಾಟೀಲ್, ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ನಾಗಪ್ಪ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ.ಅಧ್ಯಕ್ಷೆ ಈರಮ್ಮ ಮುದಿಯಪ್ಪ, ತಾ.ಪಂ. ಉಪಾಧ್ಯಕ್ಷ ಶರಣಪ್ಪ ಸಾಹುಕಾರ, ನಗರಸಭೆ ಅಧ್ಯಕ್ಷ ಶಾಮೀದ್ ಮನಿಯಾರ, ಉಪಾಧ್ಯಕ್ಷ ಶರಣಪ್ಪ ಹುಡೇಜಾಲಿ, ತಹಶೀಲ್ದಾರ್ ವೆಂಕನಗೌಡ ಪಾಟೀಲ್, ಡಿವೈಎಸ್‌ಪಿ ವಿನ್ಸೆಂಟ್ ಶಾಂತಕುಮಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್.ಮಠ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬಾರಿಕರ್ ಅವರು ಭಾಗವಹಿಸುವರು.
ಶಿವಪ್ಪ ಬಸವಂತಪ್ಪ ಅಳವಂಡಿ ಅವರು ಸುಗಮ ಸಂಗೀತ ನಡೆಸುವರು. ಚಂದ್ರಮ್ಮ ಮತ್ತು ತಂಡ ಹಾಗೂ ನೀಲಮ್ಮ ತಂಡ ಕಂಪ್ಲಿ ಇವರಿಂದ ಜಾನಪದ ಕಲಾ ಪ್ರದರ್ಶನಗಳು ಜರುಗಲಿವೆ. ಯುವರಾಜ ಹಿರೇಮಠ ಮತ್ತು ತಂಡ ಹಂಚಿನಾಳ-ಜಾನಪದ ಗೀತೆಗಳು, ಸಾಯಿರಾ ಮತ್ತು ತಂಡ ಬಳ್ಳಾರಿ-ಸಮೂಹ ನೃತ್ಯ, ಹೆಚ್.ಅಶ್ವೀನಿ ಮತ್ತು ತಂಡ ಗಂಗಾವತಿ-ಭರತನಾಟ್ಯ, ಶಕುಂತಲಾ ಬಿನ್ನಾಳ ಕೊಪ್ಪಳ-ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಜಲೀಲಪಾಷಾ ಮುದ್ದಾಬಳ್ಳಿ ಗಂಗಾವತಿ-ಹಿಂದೂಸ್ತಾನಿ ವಾದ್ಯ ಸಂಗೀತ, ತಬಲಾ ಸೋಲೋ, ಎಂ.ಸಂತೋಷ ಮುಧೋಳ-ಕಥಾ ಕೀರ್ತನ, ಮಹಮ್ಮದ್ ಫಜಲ್ ಮತ್ತು ತಂಡದಿಂದ ಬೆಳಕಿನೆಡೆಗೆ-ನಾಟಕ ನಡೆಸಿಕೊಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top