PLEASE LOGIN TO KANNADANET.COM FOR REGULAR NEWS-UPDATES

  ಹಿಂದುಳಿದ ವರ್ಗಗಳ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಒದಗಿಸಲಾಗುವ ಸಾಲ ಸೌಲಭ್ಯದ ಮಂ


ಜೂರಾತಿಯನ್ನು ಸರಳೀಕರಣಗೊಳಿಸಲು ಯತ್ನಿಸಲಾಗುವುದು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಚಂದ್ರಪ್ಪ ಅವರು ಹೇಳಿದರು.
  ನಗರದ ಪ್ರವಾಸಿ ಮಂದಿರದಲ್ಲಿ ನಿಗಮದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆಗೊಳಿಸಿ, ಅವರು ಮಾತನಾಡಿದರು.
  ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಮಹತ್ವವಿದ್ದು, ನಿಗಮವು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಚೇರಿಯನ್ನು ಹೊಂದಿದ್ದರೂ, ಬಹಳಷ್ಟು ಕಡೆ ಅಧಿಕಾರಿಗಳ ಹುದ್ದೆ ಖಾಲಿ ಉಳಿದಿದೆ. ಹಲವಾರು ಅಧಿಕಾರಿಗಳಿಗೆ ಎರಡೆರಡು ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ ನಿಗಮವು ಸಿಬ್ಬಂದಿಗಳ ಕೊರತೆಯನ್ನೂ ಸಹ ಎದುರಿಸುತ್ತಿರುವುದರಿಂದ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ.  ಇಂತಹ ಕೊರತೆಗಳ ನಡುವೆಯೂ ನಿಗಮವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.  ಇತ್ತೀಚೆಗೆ ನಿಗಮದಿಂದ ದೊರೆಯುವ ಸವಲತ್ತುಗಳನ್ನು ಮಂಜೂರು ಮಾಡಲು ಪಾರದರ್ಶಕ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದರೂ, ಮಧ್ಯವರ್ತಿಗಳ ಹಾವಳಿಯ ಬಗ್ಗೆ ಹಲವೆಡೆ ದೂರುಗಳು ಕೇಳಿ ಬರುತ್ತಿವೆ.  ನಿಗಮದಲ್ಲಿ ಅಕ್ರಮ ಹಾಗೂ ಫಲಾನುಭವಿಗಳಿಗೆ ಉಂಟಾಗುತ್ತಿರುವ ತೊಂದರೆಗಳನ್ನು ತಪ್ಪಿಸಲು, ಫಲಾನುಭವಿಗಳಿಗೆ ಇನ್ನು ಮುಂದೆ ಆನ್‌ಲೈನ್ ಮೂಲಕ ನೇರವಾಗಿ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಾಲ ಸೌಲಭ್ಯದ ಮೊತ್ತವನ್ನು ಜಮಾ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದರು.   ಸಾಂಪ್ರದಾಯಕ ಯೋಜನೆಯಡಿ ಲೇಬಗೇರಾದ ಸೋಮಶೇಖರ ಎಂಬುವವರಿಗೆ ೩೫ ಸಾವಿರ ರೂ., ನೇರ ಸಾಲ ಸೇವಾ ಯೋಜನೆಯಡಿ ಕಿನ್ನಾಳದ ರತ್ನಮ್ಮ- ರೂ. ೨೮೫೦೦, ಮಸಬಹಂಚಿನಾಳದ ಹುಚ್ಚೀರಪ್ಪ- ರೂ. ೨೩೭೫೦, ಬಸಾಪಟ್ಟಣದ ಲಕ್ಷ್ಮಮ್ಮ- ರೂ. ೩೩೨೫೦, ಅಯ್ಯಮ್ಮ- ೨೮೫೦೦ ಮತ್ತು ಹೊಸಳ್ಳಿಯ ಎಂ. ಲಕ್ಷ್ಮಿ ಅವರಿಗೆ ೨೮೫೦೦ ರೂ.ಗಳ ಸಾಲ ಮೊತ್ತದ ಚೆಕ್‌ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
  ರಾಜ್ಯ ಭೂಸೇನಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಶೈಲ ಎಂ. ದಳವಾಯಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ್, ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top