PLEASE LOGIN TO KANNADANET.COM FOR REGULAR NEWS-UPDATES

ಬೆಂಗಳೂರು,  :  ಹದಿನಾಲ್ಕನೇ ವಿಧಾನಸಭೆಯ ಅಧಿವೇಶನವು  ಫೆಬ್ರವರಿ 2 ರಿಂದ ಫೆಬ್ರವರಿ 13 ರವರೆಗೆ ವಿಧಾನಸೌಧದಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ಒಟ್ಟು 10 ದಿನಗಳ ಕಾಲ ಸಮಾವೇಶಗೊಳ್ಳಲಿದೆ ಎಂದು ರಾಜ್ಯ ವಿಧಾನಸಭೆ ಅಧ್ಯಕ್ಷ   ಕಾಗೋಡು ತಿಮ್ಮಪ್ಪ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಿನಾಂಕ 2-02-2015 ರಂದು ಮಧ್ಯಾಹ್ನ
12-00 ಗಂಟೆಗೆ  ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.  ನಂತರಸದನವು ಸೇರಿ ಕೆಲವು ಔಪಚಾರಿಕ ಕಾರ್ಯಕಲಾಪಗಳನ್ನು ನಡೆಸಿ ನಂತರ ಮುಂದೂಡಲಾಗುವುದು.
ಅಗಲಿದ ಗಣ್ಯರುಗಳಿಗೆ ದಿನಾಂಕ 3-02-2015 ರಂದು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಪ್ರಶ್ನೋತ್ತರ,   ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಹಾಗೂ ಇತರೆ ಕಾರ್ಯಕಲಾಪಗಳನ್ನು ನಡೆಸಲಾಗುವುದು.  ದಿನಾಂಕ: 4-02-2015 ರಿಂದ 13-02-2015 ರವರೆಗಿನ ಕಾರ್ಯಕಲಾಪ ದಿನಗಳಲ್ಲಿ  ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ಹಾಗೂ ನಿರ್ಣಯದ ಅಂಗೀಕಾರ, ಪ್ರಶ್ನೋತ್ತರ ಕಲಾಪ ಹಾಗೂ ಇನ್ನಿತರೆ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ 2014 ಮಂಡನೆಗೆ ಬಾಕಿ ಇದೆ ಎಂದ ಅವರು ಕರ್ನಾಟಕ ಕಾಕಂಬಿ ನಿಯಂತ್ರಣ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2014, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2014 ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2014, ಅಂಗೀಕಾರಕ್ಕೆ ಬಾಕಿ ಇದೆ ಎಂದು ತಿಳಿಸಿದರು.
ಈ ಅಧಿವೇಶನದಲ್ಲಿ ಪ್ರಸ್ತುತ ಈವರೆಗೆ ಸ್ವೀಕೃತವಾಗಿರುವ ಒಟ್ಟು 2256 ಪ್ರಶ್ನೆಗಳ ಪೈಕಿ ದಿನಾಂಕ : 30-01-2015 ರವರೆಗೆ 2181 ಪ್ರಶ್ನೆಗಳು ಅಂಗೀಕೃತವಾಗಿದೆ.  ಇದುವರೆವಿಗೂ 5 ಬ್ಯಾಲೆಟ್‍ಗಳು ನಡೆದಿದ್ದು, ಆ ಪೈಕಿ 75 ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು 2106 ಚುಕ್ಕೆ ರಹಿತ ಪ್ರಶ್ನೆಗಳಾಗಿರುತ್ತವೆ.  29 ಗಮನ ಸೆಳೆಯುವ ಸೂಚನೆಗಳು ಹಾಗೂ ನಿಯಮ 351 ರಡಿಯಲ್ಲಿ 22 ಸೂಚನೆಗಳನ್ನು ಸ್ವೀಕರಿಸಲಾಗಿದೆ.  ಖಾಸಗಿ ಸದಸ್ಯರುಗಳ ನಿರ್ಣಯ ಹಾಗೂ ವಿಧೇಯಕಗಳಿಗೆ ಸಂಬಂಧಿಸಿದಂತೆ ಒಂದು ಸೂಚನೆಯನ್ನು ಸ್ವೀಕರಿಸಲಾಗಿದೆ ಎಂದು ಹೇಳಿದ  ಸಭಾಧ್ಯಕ್ಷರು  ಪ್ರಸಕ್ತ ಅಧಿವೇಶನದಲ್ಲಿ ಒಟ್ಟಾರೆಯಾಗಿ ಸಾರ್ವಜನಿಕ ಮಹತ್ವದ ಪ್ರಮುಖ ವಿಷಯಗಳು ಚರ್ಚೆಯಾಗಲಿದೆ ಎಂದು  ತಿಳಿಸಿದರು.

Advertisement

0 comments:

Post a Comment

 
Top