PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಮಾದಿಗ ದಂಡೋರ ಸಮಿತಿಯು ಶೇ.೧೫ ಮೀಸಲಾತಿಯಲ್ಲಿ ಮಾದಿಗ ಜನಾಂಗಕ್ಕೆ ಸಂಪೂರ್ಣವಾಗಿ ಅನ್ಯಾಯವಾಗಿದೆ ಎಮದು ತಿಳಿದು ಉಗ್ರ ಸ್ವರೂಪದ ಹೋರಾಟ ಮಾಡುತ್ತಾ ಬಮದಿರುವುದು ತಮಗೆಲ್ಲಾ ತಿಳಿದ ವಿಷಯವಾಗಿದೆ. ೧೯೭೬ ರಲ್ಲಿ ಅಂದಿನ ಮುಕ್ಯಮಂತ್ರಿಗಳಾದ ಡಿ.ದೇವರಾಜ ಅರಸರವರು ಪರಿಶಿಷ್ಟ ಜಾತಿಯಲ್ಲಿ ಯಾವ ಜಾತಿ ಎಷ್ಟು ಸವಲತ್ತು ಪಡೆದಿವೆ ಯಾವ ಯಾವ ಜಾತಿ ಸೌಲಭ್ಯದಿಂದ ವಂಚಿತವಾಗಿವೆ ಪರಿಶಿಷ್ಟಜಾತಿಯಲ್ಲಿ ಯಾವ ಜಾತಿ ಎಷ್ಟು ಜನಸಂಖ್ಯೆ ಹೊಂದಿದೆ ಎಮದು ಸಂಪೂರ್ಣವಾಗಿ ತಿಳಿಯಲು ಎಲ್.ಜಿ. ಹಾವನೂರು ಆಯೋಗ ರಚಿಸಿತ್ತು. ಆಯೋಗವು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ದಲಿತರಲ್ಲಿಯೇ ಅತೀ ಹೆಚ್ಚಿನ ಜನಸಂಖ್ಯೆ ಮಾದಿಗ ಜನಸಂಖ್ಯೆ ಶೇ.೫೭.೬% ರಷ್ಟು ಇದ್ದು ಶೇ.೧೫ರ ಮೀಸಲಾತಿಯಲ್ಲಿ ಸಂಪೂರ್ಣ ಸೌಲಭ್ಯ ವಂಚಿತರಾಗಿರುತ್ತಾರೆ ಎಮದು ತಿಳಿಸಲಾಗಿತ್ತಾದರೂ ಮಾದಿಗರಿಗೆ ಎಲ್.ಜಿ.ಹಾವನೂರು ವರದಿಯ ಪ್ರಕಾರ ಶೈಕ್ಷಣಿಕ, ಔದ್ಯೋಗಿಕ ರಾಜಕೀಯ, ಆರ್ಥಿಕ, ಇನ್ನಿತರ ರಂಗಗಲ್ಲಿ ಸಂಪೂರ್ಣವಾಗಿ ಅನ್ಯಾಯವಾಗಿರುವುದರಿಂದ ಮಾದಿಗರಿಗೆ ಜನಸಂಖ್ಯೆಯ ಅನುಗುಣವಾಗಿ ಪ್ರತ್ಯಕ ಮೀಸಲಾತಿ ಜಾತಿ ಪುನರ ಸಮೀಕ್ಷೆ ನಡೆಸಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ನೇಮಿಸಿತ್ತು. ಆಯೋಗವು ಆಮೆಗತಿಯಲ್ಲಿ ೬ವರ್ಷ ೮ ತಿಂಗಳು ಸಮಗ್ರ ತನಿಖೆ ನೆಡಸಿ ದಿನಾಂಕ ; ೧೬-೦೬-೨೦೧೧ ರಮದು ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು ಆದರೆ ವರದಿ ಪಡೆದ ಸರ್ಕಾರ ೩ ವರ್ಷ ೫ ತಿಂಗಳು ಗತಿಸಿದರೂ ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೇ ಇರುವುದು ದಲಿತರ ಹಕ್ಕುಗಳನ್ನು ಕಸಿದುಕೊಳ್ಳುವ ರಾಜಕೀಯ ಕುತಂತ್ರವಾಗಿದೆ.
ದಿನಾಂಕ ೧೫-೧೨-೨೦೧೪ ರಮದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸಿ ಕೇಮದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಒತ್ತಾಯಿಸಿ ಸುವರ್ಣಸೌಧ ಮುತ್ತಿಗೆ ಕನಾಟಕ ರಾಜ್ಯದಲ್ಲಿ ದಲಿತರಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮಾದಿಗ ಜನಾಂಗಕ್ಕೆ ನೂರಾರು ವರ್ಷಗಳಿಂದ ಆದ ಅನ್ಯಾಯವನ್ನು ಸರಿಪಡಿಸಲು ತಮಗಾದ ಅನ್ಯಾಯವನ್ನು ಸರಿಪಡಿಸಲು ತಮಗಾದ ಜನಾಂಗದ ಸುಮಾರು ೧೦ ಸಾವಿರ ಜನ ಈ ಹೋರಾಟದಲ್ಲಿ ಪಾಲ್ಗೊಂಡು ರಾಜ್ಯ ಸಮಿತಿಯ ನೇತೃತ್ವದಲ್ಲಿ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತೇವೆ. ಕಾರಣ ಮುಖ್ಯಮಂತ್ರಿಗಳು ನಮ್ಮ ಜಿಲ್ಲಗೆ ಆಗಮಿಸಿದ್ದು ಮಾನ್ಯರಿಗೆ ಕೊಪ್ಪಳ ಜಿಲ್ಲಾ ಮಾದಿಗ ದಂಡೋರ ಪದಾಧಿಕಾರಿಗಳು ಹಾಗೂ ರಾಜ್ಯಾದ್ಯಕ್ಷರಾದ ಬಿ.ಹುಸೇನಪ್ಪಸ್ವಾಮಿ ಮಾದಿಗ ಇವರೊಡನೆ ಪುಟಗೋಸಿ ಚಳುವಲಿಯ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.

Advertisement

0 comments:

Post a Comment

 
Top