PLEASE LOGIN TO KANNADANET.COM FOR REGULAR NEWS-UPDATES

ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ದಿ ಕಾರ್ಯಕ್ರಮ ಅನುಧಾನ ಯೋಜನೆ
ಕೊಪ್ಪಳ : ದಿನಾಂಕ :೦೩-೧೨-೨೦೧೪ ರಂದು  ಭಾಗ್ಯನಗರದ ಕರಿಬಸವೇಶ್ವರ ದೇವಸ್ಥಾನದಲ್ಲಿ ಶ್ರೀಗುರು ಕರಿಬಸವೇಶ್ವರ ದೇವಸ್ಥಾನ ಸೇವಾ ಸಮಿತಿಯವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ದಿ ಕಾರ್ಯಕ್ರಮ ಅನುಧಾನ ಯೋಜನಾ ಅಡಿಯಲ್ಲಿ   ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಂದ ೧೦೦೦೦೦ (ಒಂದು ಲಕ್ಷ) ರೂಪಾಯಿಗಳ ಡಿ.ಡಿಯನ್ನು ವಿತರಿಸಲಾಯಿತು               ಈ ಸಂದರ್ಭದಲ್ಲಿ ಶ್ರೀನಿವಾಸ ಗುಪ್ತಾ ಅಧ್ಯಕ್ಷತೆಯನ್ನು ವಹಿಸಿದ್ದರು ಶ್ರೀಮತಿ ಲಕ್ಷ್ಮಮ್ಮ ಗಂಗ
ನಗೌಡ್ರು ಸ್ವಾಗಿ ದಿವ್ಯ ಸಾನಿದ್ಯ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಪ್ಪಳ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಉಪಸ್ಥಿತರಿದ್ದರು ಮತ್ತು ಕೊಪ್ಪಳ ತಾಲೂಕ ಯೋಜನಧಿಕಾರಿ ದರಣಪ್ಪ್, ಶಿಲ್ಪಾ, ಪ್ರಕಾಶ, ಸಂಸ್ಥೆಯ ಎಲ್ಲಾ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು. ಚನ್ನಪ್ಪ ತಟ್ಟಿಯವರು ನಿರೂಪಿಸಿದರು, ನಿಲಕಂಠಪ್ಪ ಮೈಲಿ ಸ್ವಾಗತಿಸಿದರು, ರಮೇಶ ಹ್ಯಾಟಿ ವಂಧನಾರ್ಪಣೆಯನ್ನು ಮಾಡಿದರು. 

Advertisement

0 comments:

Post a Comment

 
Top