PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಕೊಪಳ ತಾಲೂಕಿನ ಇರಕಲಗಡಾ ಗ್ರಾಮದಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯು ಶ್ರೀ ರುದ್ರಮುನಿಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರುಗಿತು. ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಶ್ರೀಮತಿ ಶಿವಮ್ಮ ಶೇಕಪ್ಪ ಲಮಾಣಿ ಉದ್ಘಾಟಿಸಿದರು.ಗ್ರಾಮ ಪಂಚಾಯತಿ ಪಿ.ಡಿ.ಒ, ಕಾರ್ಯದರ್ಶಿ ಹನುಮಂತಪ್ಪ ನಾಯಕ ಶಿಕ್ಷಣ ಪ್ರೇಮಿ ವೀರಬಸಪ್ಪ ಪಟ್ಟಣಶೆಟ್ಟಿ ಇವರು ಮಕ್ಕಳ ಗ್ರಾಮಸಭೆ ಕುರಿತು ಮಾತನಾಡಿ ಪ್ರತಿಯೊಬ್ಬರು ತಮ್ಮ ಇಲಾಖೆಯಿಂದ ಆಗುವ ಕೆಲಸಗಳನ್ನು ಶ್ರದ್ದಾ ಪೂರ್ವಕವಾಗಿ ಮಾಡಿದರೆ ಮಕ್ಕಳಿಗೆ ಸಿಗುವ ಸೌಲಬ್ಯವನ್ನು ಒದಗಿಸುವುದರ ಜೊತೆಗೆ ದೇಶ ಉದ್ದಾರವಾಗುವುದು ಎಂದರು.
        ಮಕ್ಕಳ ಬೇಡಿಕೆಯ ಪ್ರಶ್ನೇಗಳಿಗೆ ಪಿ.ಡಿ.ಒ ಲಲಿತಾ ಸುರಳಾ ಮಾತನಾಡಿ ಸಮಸ್ಯಗಳ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಕಾರ್ಯದರ್ಶಿ ಹನುಮಂತಪ್ಪ ನಾಯಕ ಅವರು ಮಕ್ಕಳ ಪ್ರಶ್ನೇಗಳಿಗೆ ಉತ್ತರಿಸಿ ಸಂಬಂದಿಸಿದ ಇಲಾಖೆಗೆ ತಿಲಸಿ ಪತ್ರದ ಮೂಲಕ ಉತ್ತರವನ್ನು ನೀಡುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಗ್ರಾಮಪಂಚಾಯತಿ ಸರ್ವ ಸದ್ಸಯರು, ಅಂಗನವಾಡಿ ಸಾಹಕರು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು, ಯನೆಸೆಪ್ ಸಯೋಜಕರಾದ ಹರಿಶ ಜೋಗಿ, ಸೋಮಶೇಖರ, ಜಗದೇಶ ಕಿರೇಮಠ, ಮಾರುತಿ ಚಾಮಲಾಪೂರ, ಶಾಲಾಮುಖ್ಯಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top