ಕಳೆದ ಬಹುದಶಕಗಳಿಂದ ಈ ಬೇಡಿಕೆ ಸರ್ಕಾರದ ಮುಂದಿಟ್ಟು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದು, ಅದರಂತೆ ಮುಖ್ಯಮಂತ್ರಿಯವರು ಆಚರಣೆಗೆ ಮಾತ್ರ ಸರ್ಕಾರ ಸಿದ್ದವಿದೆ. ಅಂದು ರಜೆ ಘೋಷಿಸುವುದಿಲ್ಲ. ಜಯಂತಿ ಆಚರಣೆ ಮಾತ್ರ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಭರವಸೆಗೆ ಬೆಂಬಲಿಸಿ ಕೊಪ್ಪಳದಲ್ಲಿ ಮುಸ್ಲಿಂ ಸಂಘಟನೆ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಟಿಪ್ಪು ಸುಲ್ತಾನ್ ಕಮೀಟಿ ತಾಲೂಕ ಅಧ್ಯಕ್ಷ ಶೌಖತ್ ಅಲಿ, ಸರ್ಕಲ್ ಕಮೀಟಿ ಅಧ್ಯಕ್ಷ ಚಾಂದಪಾಷಾ ಬೂದಿ, ಕಾರ್ಯದರ್ಶಿ ಖಾಜಿ ಸದ್ದಾಂ, ಮಹೆಬೂಬ ಮಚ್ಚಿ, ಶಬ್ಬೀರ್ ಕರ್ಕಿಹಳ್ಳಿ, ಆಜಂ ಹುಸೇನಿ, ಅಬ್ಬಾಸ್ ಅಲಿ, ಎಂ.ಡಿ.ಜಹೀರ್ ಅಲಿ, ಇಬ್ರಾಹಿಂ, ಅಯುಬ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
0 comments:
Post a Comment