ಕೊಪ್ಪಳ: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಡಿ.೨೫ ರಂದು ತಾಲೂಕಿನ ಇರಕಲ್ಲಗಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಏರ್ಪಡಿಸಲಾಗಿದೆ.
ಟನಕನಕಲ್ ವಿರೇಶ್ವರ ಮಠದ ಕಾಲಜ್ಞಾನಿ ಬ್ರಹ್ಮ ಸದ್ಗುರು ಶ್ರೀಶರಣಬಸವ ಮಹಾಸ್ವಾಮಿಗಳು ಹಿರೇಮಠ ದಿವ್ಯ ಸಾನಿಧ್ಯವಹಿಸುವರು. ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಸದಸ್ಯೆ ಕಸ್ತೂರಮ್ಮ ಬಸವನಗೌಡ ಪಾಟೀಲ್ ಉದ್ಘಾಟಿಸುವರು. ಶಿವಮ್ಮ ಶೇಖರಪ್ಪ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.
ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಲಕ್ಷ್ಮವ್ವ ನೂರೇಶ್ ಪವಾರ, ಕೊಪ್ಪಳ ಇಎಸ್‌ಐ ಚರ್ಚ ಫಾದರ್ ವಸಂತರಾಜ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶರಣಪ್ಪ ಪಟ್ಟಣಶೆಟ್ಟರ, ಶ್ರೀಕಾಂತ ಬಾಸೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಹುಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ.ಎಂ.ಎಂ ಜೋಷಿ, ಎಸ್.ಕೆ ದೇಸಾಯಿ ವ್ಯವಸ್ಥಾಪಕರು ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಡಾ.ರಾಮಾಂಜನೇಯ ತಾಲೂಕು ಆರೋಗ್ಯ ಅಧಿಕಾರಿ,
ವೀರಬಸಪ್ಪ ಶೆಟ್ಟರ್, ವೀರಣ್ಣ ಹನ್ಸಿ, ವೀರಬಸಪ್ಪ ಪಟ್ಟಣಶೆಟ್ಟರ್, ಲಲಿತಾ ಶರಣಪ್ಪ ಸೂರಳ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಇರಕಲ್ಲಗಡಾ,ರವೀಂದ್ರ ಪಟ್ಟಣಶೆಟ್ಟರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಶಿಬಿರ ಆಯೋಜಕ ಬಸವರಾಜ ಪಲ್ಲೇದ ತಿಳಿಸಿದ್ದಾರೆ.
0 comments:
Post a Comment