ಕೊಪ್ಪಳ : ಇದೇ ದಿನಾಂಕ ೨೧/೧೨/೨೦೧೪ ರಂದು ನಗರದ ಕಿನ್ನಾಳ ರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ಲಿಂಗಾಯತ ಧರ್ಮ ಮಹಾಸಭಾ ಟ್ರಸ್ಟ್ (ರಿ) ನಾಮಫಲಕ ಉದ್ಘಾಟಿಸಿದ ಶರಣ ಬಿ.ಎಸ್.ಪಾಟೀಲ್ ಸರಕಾರಿ ಅಭಿಯೋಜಕರು ಈ ಮೇಲಿನಂತೆ ಅಭಿಪ್ರಾಯಪಟ್ಟರು
ಮಾನವನು ಶರಣರ ತತ್ವ ಸಿದ್ದಾಂತದ ತಳ ಹದಿಯ ಮೇಲೆ ಸಮಾಜದಲ್ಲಿ ಸಾಂಘೀಕವಾಗಿ ಕೆಲಸ ಮಾಡುತ್ತಾ ಸಾಗಿದರೇ ೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಕಲ್ಯಾಣ ರಾಜ್ಯವನ್ನು ಮರುಸ್ಥಾಪಿಸಬಹುದಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಅಲ್ಲಮಗಿರಿಯ ಅಲ್ಲಮಪ್ರಭು ಶೂನ್ಯಪೀಠದ ಪೀಠಾದೀಶರಾದ ಪ.ಪೂ ಜಗದ್ಗುರು ಬಸವ ಕುಮಾರ ಸ್ವಾಮಿಗಳು, ಶರಣರಾದ ಕೊಟ್ರಪ್ಪ ಶೇಡದ್, ಬಸವನಗೌಡ ಪಾಟೀಲ್, ಸುಂಕಪ್ಪ ಅಮರಾಪೂರ ಸತೀಶ ಮಂಗಳೂರು, ಈಶಪ್ರಭು ಅಂಗಡಿ, ಶಿವಬಸವಯ್ಯ ವೀರಾಪೂರ, ಲಿಂಗನಗೌಡ ಪಾಟೀಲ್, ಈಶ್ವರ ಕೊರ್ಲಹಳ್ಳಿ, ಮಂಜುನಾಥ ಹಾದಿಮನಿ, ಹನುಮಂತಪ್ಪ ಸಂಗೇನಹಳ್ಳಿ, ಶರಣೆಯರಾದ ವಿಜಯಲಕ್ಷ್ಮಿ ಲಿಂಗಾಯತ ಬಸವಮ್ಮ ವೀರಾಪೂರ, ಪಾಲಕ್ಷ್ಮವ್ವ ಅಂಗಡಿ, ಡಾ.ಪೂರ್ಣಿಮಾ ಹಿರೇಮಠ, ರತ್ನಮ್ಮ ಹಡಪದ, ಸುವರ್ಣಮ್ಮ ಕಡೆಮನಿ, ಇನ್ನೂ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಶರಣ ಸುಂಕಪ್ಪ ಅಮರಾಪೂರವರು ಮಾಡಿದರು. ನಿರೂಪಣೆಯನ್ನು ಶರಣ ಶಿವಬಸವಯ್ಯ ವೀರಾಪೂರ, ಶರಣು ಸಮರ್ಪಣೆಯನ್ನು ಶರಣ ಕೊಟ್ರಪ್ಪ ಶೇಡದ್ ಮಾಡಿದರು. ಇದೇ ಸಂದರ್ಭದಲ್ಲಿ ಶರಣರಾದ ಬಿ.ಎಸ್ ಪಾಟೀಲ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
0 comments:
Post a Comment