PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಪ್ರಾದೇಶಿಕ ಸಾರಿಗೆ ಕಛೇರಿಗೆ ಈಗಾಗಲೇ ನಿವೇಶನ ಖರೀದಿಸಿದ್ದು, ಸದರಿ ನಿವೇಶನದಲ್ಲಿ ಕಛೇರಿ ಕಟ್ಟಡ ಕಾಮಗಾರಿ ಕೆಲಸ ಪ್ರಾರಂಭಿಸುವ ಕುರಿತು ಮಾನ್ಯ ಸಾರಿಗೆ ಆಯುಕ್ತರಿಗೆ ಕೊಪ್ಪಳದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ, ಸದರಿ ಪತ್ರದ ನಕಲು ಪ್ರತಿ-ಲಗತ್ತಿಸಲಾಗಿದೆ. ದಯಮಾಡಿ ಕೊಪ್ಪಳ ಆರ್‌ಟಿಓ ಕಛೇರಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಕ್ರಮ ತೆಗೆದುಕೊಂಡು ಶೀಘ್ರವಾಗಿ ಕಛೇರಿ ಕಟ್ಟಡ ಒದಗಿಸಲು ಕೋರಿದೆ.
ನಗರದ ತಹಶೀಲ ಕಛೇರಿಯ ಆವರಣದಲ್ಲಿ ಜಿಲ್ಲಾ ವಿಜ್ಞಾನ ಭವನ ಕಟ್ಟಡವು ನಿರ್ಮಾಣ ಪ್ರಾರಂಭಕೊಂಡು ದಶಕದ ಹಿಂದೆ ಕಾಮಗಾರಿ ಸ್ಥಗಿತಗೊಂಡಿದೆ. ಸದರಿ ಕಟ್ಟಡವನ್ನು ಶೀಘ್ರವಾಗಿ ಪುನಃ ಕಾಮಗಾರಿ ಪ್ರಾರಂಭಿಸಿ ಕಟ್ಟಡವನ್ನು ಪೂರ್ತಿಗೊಳಿಸಿ ಕೊಡಲು ವಿನಂತಿ.
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಜನರಿಕ್ ಔಷಧಿ ಸ್ಟೋರ್ ಪ್ರಾರಂಭಿಸಲು ಸೂಕ್ತ ಕ್ರಮ ತೆಗೆದುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ವಿನಂತಿ.
ಜಿಲ್ಲಾ ಆಡಳಿತ ಭವನದ ಎದುರುಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎ. ಗಫಾರ್, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ  ಒಕ್ಕೂಟದ ಅಧ್ಯಕ್ಷ ಬಸವರಾಜ ಶೀಲವಂತರ್, ದಲಿತ ವಿಮೋಚನೆಯ ಮಾನವ ಹಕ್ಕುಗಳ 
ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಎಂ.ಡಿ.ಗೌಸ್ ನೀಲಿ ಮತ್ತಿತರರು ಅರ್ಪಿಸಿದರು.

Advertisement

0 comments:

Post a Comment

 
Top