೫೯ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ 'ಕನ್ನಡ, ಕರ್ನಾಟಕ ರೂಪಗೊಂಡ ಬಗೆ ಒಂದು ಅವಲೋಕನ' ಎಂಬ ವಿಚಾರವಾಗಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಡಾ. ಗವಿಸಿದ್ದಪ್ಪ ಹಂದ್ರಾಳ ಅವರು ಮಾತನಾಡಿ ಕನ್ನಡ. ನಾಡಿನ ಚರಿತ್ರೆಯನ್ನು ಕ್ರಿ.ಪೂ.೩ನೇ ಶತಮಾನದ ಸಂಸ್ಕೃತ ಮಹಾಭಾರತದಲ್ಲಿ ಬರುವ ಕರ್ಣಾಟ ಪಧಿಂದ ಹಿಡಿದು ಪ್ರಾಕೃತ, ಅಪಭ್ರಂಶ, ಮರಾಠಿ, ತಮಿಳು, ಗುಜರಾತಿ ಮುಂತಾದ ಭಾಷೆಗಳಲ್ಲಿ ಕನ್ನಡದ ಬಳಕೆಯನ್ನು ಗುರುತಿಸುತ್ತ ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಹೇಗೆ ಕನ್ನಡ ನಾಡನ್ನು ಅವರವರ ಕಾಲದಲ್ಲಿ ಆಳುತ್ತ ಕನ್ನಡದ ಕಂಪು ಮತ್ತು ಕನ್ನಡಿಗರ ಹೃದಯ ಶ್ರೀಮತಿಕೆ ತೋರಿಸಿಕೊಟ್ಟಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪತನ ನಂತರ ಮೈಸೂರು, ಕೆಳದಿ ಸಂಸ್ಥಾನಗಳಾದವು. ಇವು ಬ್ರಿಟಿಷರ ವಶವಾದವು. ಸ್ವತಂತ್ರ ಚಳವಳಿ ಆರಂಬವಾಯಿತು ಇದರ ಜೊತೆಗೇ ಕನ್ನಡ ಏಕೀಕರಣದ ಕೂಗೂ ಆರಂಭವಾಯಿತು. ೧೮೫೬ರಲ್ಲೊ ಡ್ಯೆಪುಟಿ ಚನ್ನಬಸಪ್ಪರಿಂದ ಹಿಎಇದು ಜಾನ್ ಬ್ರೈಟ್, ರಿಸಲಿ, ವೈಸ್ರಾಯ್, ಬೆನಗಲ್ ರಾಮರಾಯ, ಕಡಪ ರಾಘವೇಂದ್ರರಾವ್, ಅಲೂರು ವೆಂಕಟರಾಯರು, ಮುದವೀಡು ಕೃಷ್ಣರಾವ್, ಎಸ್. ನಿಜಲಿಂಗಪ್ಪ, ಕುವೆಂಪು, ಬೇಂದ್ರೆ, ಕಾರಂತ, ಅನಕೃ, ಬುದ್ಧಿಜೀವಿಗಳು, ಪತ್ರಕರ್ತರು, ಕೌಇಗಳು ಸೇರಿ ಕರ್ನಾಟಕ ಏಕೀಕರಣ ಹೋರಾಟ ಕೈಗೊಂಡು ಆಮೂಲಕ ೧೯೫೬ ನವಂಬರ್ ೧ ರಂದು "ವಿಶಾಲ ಮೈಸೂರು ರಾಜ್ಯ"ವೆಂದು ನಾಮಕರಣವಾಯಿತು. ನಂತರ ದೇವರಾಜ ಅರಸರು ಮುಖ್ಯಮತ್ರಯಾಗಿದ್ದ ಅವಧಿಯಲ್ಲಿ ಅಂದರೆ ೧೯೭೩ ನವಂಬರ್ ೧ ರಂದು 'ಕರ್ನಾಟಕ ' ಎಂದು ಮರುನಾಮಕರಣ ಮಾಡಿದರು ಎಂದು ಕನ್ನಡದ ಆರಂಭದಿಂದ ಹಿಡಿದು ಕರ್ನಾಟಕದ. ನಾಮಕರಣದವರೆಗೆ ಎಲ್ಲ ಸಂಗತಿಗಳನ್ನು ಉಪನ್ಯಾಸದಲ್ಲಿ ವಿವರಿಸಿದರು
. ಪ್ರಾಸ್ತವಿಕವಾಗಿ ಶ್ರೀ ಶರಣಬಸಪ್ಪ ಬಿಳಿಎಲಿ ಮಾತಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲದ ಪ್ರಾಚಾರ್ಯರಾದ ಪ್ರೊ. ಎಸ್.ಎಸ್. ಮಾಲೀಪಾಟೀಲರು ಕನ್ನಡವನ್ನು ಸಮರ್ಥವಾಗಿ ಕಟ್ಟಿ ಬಳಸಿ ಬೆಳಸೋಣ ಎಂಬ ಮಾತುಗಳನ್ನು ಅಧ್ಯಕ್ಷಿಯ ಮಾತುಗಳಲ್ಲಿ ಹೇಳಿದರು. ಮುಖ್ಯ. ಅತಿಥಿಗಳಾಗಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಪರೀಕ್ಷಿತರಾಜ ವಹಿಸಿದ್ದರು. ಬಿ.ಎ. ಮೂರನೆ ಸೆಮಿಸ್ಟರ್ ವಿದ್ಯಾರ್ಥಿ ವಿರೂಪಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಬೆ.ಎ. ಐದನೇ ಸೆಮಿಸ್ಟರ್ ವಿದ್ಯಾರ್ಥಿ ಗವಿಸಿದ್ದಪ್ಪ ಸ್ವಾಗತಿಸಿದರು. ಬಿ.ಕಾಂ. ಐದನೇ ಸೆಮಿಸ್ಟರ್ ವಿದ್ಯಾರ್ಥಿ ನವೀನ್ ಕುಲಕರ್ಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
.
0 comments:
Post a Comment