PLEASE LOGIN TO KANNADANET.COM FOR REGULAR NEWS-UPDATES



ಶ್ರೀ ಸಾಯಿ ಅಭಿವೃದ್ಧಿ ಹಾಗೂ ಶಿಕ್ಷಣ ಸಂಘ (ರಿ) ಕೊಪ್ಪಳದ ವತಿಯಿಂದ ಸಾಯಿ ಬುಡೋಕಾನ್ ಕರಾಟೆ ಕ್ಲಬ್‌ನಲ್ಲಿ ಕರಾಟೆ ಕಲೆಯನ್ನು ಬೆಳೆಸಿದ ಕರಾಟೆ ಪಿತಾಮಹ ಬ್ರುಸ್ಲಿಯವರ ಜನ್ಮದಿನಾಚರಣೆಯನ್ನು ಕರಾಟೆ ಪಟುಗಳಿಂದ ಸಾಹಸ ಪ್ರದರ್ಶನ ತೋರಿಸುವುದರ ಮೂಲಕ ಆಚರಿಸಲಾಯಿತು. ಎಲ್ಲಾ ಕರಾಟೆ ಪಟುಗಳಿಗೆ ಸಂಘದ ವತಿಯಿಂದ ಹಾಲು ಸೀರಾ ಮತ್ತು ಉಪ್ಪಿಟ್ ವಿತರಿಸಲಾಯಿತು. ಈ ಸಮಾರಂಭದಲ್ಲಿ ಕರಾಟೆ ಶಿಕ್ಷಕರದಾದ ಶ್ರೀಕಾಂತ್.ಪಿ.ಕಲಾಲ ಬ್ರುಸ್ಲಿಯವರ ಜೀವನದ ಬಗ್ಗೆ ಹಾಗೂ ಕರಾಟೆ ಇತ್ತೀಚಿನ ದಿನಗಳಲ್ಲಿ ಎಷ್ಟು ಮಹತ್ವ ಪಡೆದಿದೆ ಎಂಬುದರ ಬಗ್ಗೆ ತಿಳಿಸಿದರು. ಇನ್ನೊಬ್ಬ ಶಿಕ್ಷಕರಾದ ಚಿರಂಜೀವಿ ಗಿಣಗೇರಿ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿನಿಯರು ತಮ್ಮ ದೇಹದ ರಕ್ಷಣೆಗೆ ಕರಾಟೆ ಅವಶ್ಯಕವಾಗಿ ಕಲಿಯಬೇಕು ಎಂದು ತಿಳಿಸಿದರು. ಈ ಸಮಾರಂಭದಲ್ಲಿ ಫಯಾಜ್ ಪಾಶಾ ಎಂ.ಯತ್ನಟ್ಟಿ, ಮುತ್ತುರಾಜ್ ಬಂಡಿ, ಚಂದ್ರು ಪೂಜಾರಿ, ಅಭಿಷೇಕ್ ಆರ್.ಡಿ, ರುಕ್ಮಿಣಿ ಡಿ.ಬಂಗಾಳಿಗಿಡದ, ಶೃತಿ ಎಂ ಕೊಂಡನಹಳ್ಳಿ, ವಸೀಂ ಕವಲೂರ, ಯಮನೂರಪ್ಪ ನಾಯಕ್, ಕೃಷ್ಣ ಭಜಂತ್ರಿ, ಎಂ.ಆರ್ ಅಲ್ತಾಫ್ ಉಪಸ್ಥಿತರಿದ್ದರು,

Advertisement

0 comments:

Post a Comment

 
Top