PLEASE LOGIN TO KANNADANET.COM FOR REGULAR NEWS-UPDATES

ತಾ. ಪಂ. ಸದಸ್ಯ ಮಲ್ಲನಗೌಡ್ರ ಕೋನನಗೌಡ್ರ  

ಯಲಬುರ್ಗಾ: ದೇಹದ ಅಂಗಾಗಳಲ್ಲಿ ಕಣ್ಣುಗಳು ಬಹಳ ಮುಖ್ಯವಾದವುಗಳು ಕಾರಣ ಸಾರ್ವಜನಿಕರು ತಮ್ಮ ಕಣ್ಣುಗಳನ್ನು ಪ್ರತಿ ಆರು ತಿಂಗಳಿಗೋಮ್ಮೆ ನೇತ್ರ ತಜ್ಞರಲ್ಲಿ ತಪಾಸಣೆ ಮಾಡಿಸಿಕೋಳ್ಳಬೇಕು ಎಂದು ತಾ. ಪಂ. ಸದಸ್ಯ ಮಲ್ಲನಗೌಡ್ರ ಕೋನನಗೌಡ್ರ ಶಿಬಿರಾರ್ಥಿಗಳಿಗೆ ಸೂಚನೆ ನೀಡಿದರು.
ಯಲಬುರ್ಗಾ ತಾಲೂಕಿನ  ಶ್ರೀಗೂತ್ತುರ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧುವಾರ ರಂದು ಸಮೀಪದ ಬೇವೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಡು ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು ಕಾರಣ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೋಳ್ಳಬೇಕು ಎಂದು ಹೇಳಿದರು.
ನಂತರ ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಶಾಂತ ಬಾಬು ಮಾತನಾಡಿ ಸಾಮನ್ಯವಾಗಿ ೩೫ ವರ್ಷಗಳ ಮುಂಚೆ ಕಣ್ಣಿನ ಸಮಸ್ಯೆಗಳು ಉಂಟಾಗುವುದು ಸಾಮಾನ್ಯ ಕಾರಣ ಸಾರ್ವಜನಿಕರು ವಿಶೇಷವಾಗಿ ಆಹಾರದಲ್ಲಿ ಎ ವಿಟಮಿನ್ ಇರುವ ಪದಾರ್ಥಗಳನ್ನು ಸೇವಿಸಬೇಕು. ಆರೋಗ್ಯ ಇಲಾಖೆಗಳು ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಆರು ತಿಂಗಳಿಗೋಮ್ಮೆ ಕಡ್ಡಾಯವಾಗಿ ವಿಟಮಿನ್ ಎ ದ್ರಾವಣವನ್ನು ಹಾಕಲಾಗುತ್ತದೆ ಎಂದು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಸಜ್ಜನ್ ಮಾತನಾಡಿ ಈ ಮುಂಚೆ ತಾಲೂಕಿನ ವ್ಯಾಪ್ತಿಯಗಳಲ್ಲಿ ಬೃಹತ ಪ್ರಮಾಣ ಪ್ರಚಾರಕೈಗೊಂಡು ೧೧೧ ರಕ್ತಾ ದಾನಿಗಳಿಂದ ರಕ್ತವನ್ನ ಸೇಕರಿಸಿ ಬೃಹತ ಪ್ರಮಾಣ ರಕ್ತ ದಾನ ಶಿಬಿರವನ್ನು ಯಶಸ್ವಿಗೊಳಿಸಿದ ಹೆಮ್ಮಯ ಗರಿ ಈ ಆಸ್ಪತ್ರೆ ಮೂಡಿಗೇರಿಸಿಕೊಂಡಿದೆ ಎಂದು ಹೇಳಿದರು.
ನಮ್ಮ ಪ್ರಾಥಮಿಕ ಆಸ್ಪತ್ರೆಯಲ್ಲಿ ಈ ತಿಂಗಳ ೭೦ಕ್ಕು ಅತೀ ಹೆಚ್ಚು ಹೆರಿಗೆಯಾಗಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು. ರಕ್ತದಾನ ದಂತೆ ನೇತ್ರದಾನವು ಕುಡಾ ಒಂದು ಶ್ರೇಷ್ಠದಾನ ಸಾರ್ವಜನಿಕರು ತಮ್ಮ ಕಣ್ಣುಗಳನ್ನು ಮೊತ್ತಬ್ಬರಿಗೆ ದಾನ ಮಾಡಿ ಅಂಧರ ಬಾಳಿಗೆ ಬೆಳಕು ನೀಡಬೇಕು ಎಂದು ಮನವಿ ಮಾಡಿದರು.
ಡಾ.ಜಯಲಕ್ಷ್ಮೀ ನೇಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹುಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ನೇತ್ರ ತಜ್ಞರಾದ ಡಾ.ಸುಶೀಲ್ ಕಾಖಂಡಕಿ, ಎಸ್.ಕೆ ದೇಸಾಯಿ ವ್ಯವಸ್ಥಾಪಕರು ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಗ್ರಾ. ಪಂ. ಅಧ್ಯಕ್ಷ ಬಸವರಾಜ ಪೂಜಾರ, ಗ್ರಾ. ಪಂ. ಉಪಾಧ್ಯಕ್ಷೆ ದೇವಮ್ಮ ಕರಡಿ, ಎ.ಪಿ.ಎಮ್.ಸಿ. ಅಧ್ಯಕ್ಷ ಮಾನಪ್ಪ ಪೂಜಾರ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶರಣಗೌಡ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಭೀಮೆಶಪ್ಪ ಹಳ್ಳಿ, ಬಾ.ಸ.ಪ.ಪೂ. ಕಾಲೇಜ್ ಚಂದ್ರಶೇಖರ ಮಂಗಳೂರ, ವಿನಾಯಕ ಆಪ್ಟಿಕಲ್ಸ್‌ನ ಬಸವರಾಜ ಪಲ್ಲೇದ ಸ್ವಾಗತಿಸಿದರು. ಸಿಆರ್‌ಸಿ ಅಮರೇಶ ತಲ್ಲೂರ ನಿರೂಪಿಸಿ, ವಂದಿಸಿದರು.


Advertisement

0 comments:

Post a Comment

 
Top