PLEASE LOGIN TO KANNADANET.COM FOR REGULAR NEWS-UPDATES



 ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಬಿಡುಗಡೆಗೊಳಿಸುವ ಅವಧಿಯನ್ನು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
  ಮುನಿರಾಬಾದಿನ ಕಾಡಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೧೦೦ ನೇ ಸಭೆಯ ಅಧ್ಯಕ್ಷತೆ ವಹಿಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
  ಹಿಂಗಾರು ಹಂಗಾಮಿಗೆ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಹಿಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯದೆ ಮಿ ಬೆಳೆ ಮಾಗತ್ರ ಬೆಳೆಯಲು ವಿವಿಧ ಕಾಲುವೆಗಳಡಿ ಹರಿಸಬಹುದಾದ ನೀರಿನ ಪ್ರಮಾಣವನ್ನು ನಿರ್ಧರಿಸಲಾಗಿದೆ ಎಂದು ತಿಳಿಸಿದ ಸಚಿವರು.  ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. ೦೧ ರಿಂದ ೧೫ ರವರೆಗೆ ೨೫೦ ಕ್ಯೂಸೆಕ್‌ನಂತೆ, ಡಿ. ೧೬ ರಿಂದ ಡಿ. ೩೧ ರವರೆಗೆ ೪೦೦ ಕ್ಯೂಸೆಕ್‌ನಂತೆ, ೨೦೧೫ ರ ಜ. ೦೧ ರಿಂದ ಮಾ. ೩೧ ರವರೆಗೆ ೫೭೫ ಕ್ಯೂಸೆಕ್‌ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಬಿಡುಗಡೆ ಮಾಡಲಾಗುವುದು.  ರಾಯ-ಬಸವಣ್ಣ ಕಾಲುವೆಗಳಿಗೆ ಡಿ. ೧೦ ರಿಂದ ೨೦೧೫ ರ ಜ. ೧೦ ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಜ. ೧೧ ರಿಂದ ಮೇ. ೩೧ ರವರೆಗೆ ೧೬೦ ಕ್ಯೂಸೆಕ್‌ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ನೀರು ಬಿಡುಗಡೆ ಮಾಡಲಾಗುವುದು.  ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ. ೦೧ ರಿಂದ ಡಿ. ೨೫ ರವರೆಗೆ ೨೨೦೦ ಕ್ಯೂಸೆಕ್‌ನಂತೆ.  ಡಿ. ೨೬ ರಿಂದ ೩೧ ರವರೆಗೆ ೩೦೦೦ ಕ್ಯೂಸೆಕ್‌ನಂತೆ.  ೨೦೧೫ ರ ಜ. ೦೧ ರಿಂದ ಮಾ. ೩೧ ರವರೆಗೆ ೩೧೦೦ ಕ್ಯೂಸೆಕ್‌ನಂತೆ.  ಎಡದಂಡೆ ವಿಜಯನಗರ ಕಾಲುವೆಗಳಿಗೆ ವಿತರಣಾ ಕಾಲುವೆ ೧ ರಿಂದ ೧೧ಎ ವರೆಗೆ ಏ. ೦೧ ರಿಂದ ಮೇ. ೧೦ ರವರೆಗೆ ೧೦೦ ಕ್ಯೂಸೆಕ್‌ನಂತೆ ಮುಂದುವರೆಸಲಾಗುವುದು ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಹರಿಸಲಾಗುವುದು.  ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. ೦೧ ರಿಂದ ಡಿ. ೧೦ ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಡಿ. ೧೧ ರಿಂದ ೨೧‘ ರವರೆಗೆ ೪೦೦ ಕ್ಯೂಸೆಕ್‌ನಂತೆ.  ಡಿ. ೨೧ ರಿಂದ ಡಿ. ೩೧ ರವರೆಗೆ ನೀರು ನಿಲುಗಡೆಗೊಳಿಸಲಾಗುವುದು.  ೨೦೧೫ ರ ಜ. ೦೧ ರಿಂದ ಜ. ೧೦ ರವರೆಗೆ ೪೦೦ ಕ್ಯೂಸೆಕ್‌ನಂತೆ ಹಾಗೂ ಬಳ್ಳಾರಿ ನಗರಕ್ಕೆ ಕುಡಿಯುವ ಸಲುವಾಗಿ ಮಾತ್ರ ನೀರು ಹರಿಸಲಾಗುವುದು. 
  ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇರುವುದರಿಂದ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಬೆಳೆದು ನಿಂತ ಬೆಳೆಗಳಿಗೆ ಹಾಗೂ ಹಿಂಗಾರು ಹಂಗಾಮಿನಲ್ಲಿ ಮಿತ ಬೆಳೆ ಮಾತ್ರ ಬೆಳೆಯಲು ಮತ್ತು ಅನಧಿಕೃತವಾಗಿ ಕಾಲುವೆಗಳಿಂದ ಪೈಪ್, ಸೈಫನ್, ಪಂಪ್‌ಸೆಟ್‌ಗಳ ಮೂಲಕು ನೀರು ಎತ್ತಿ ನೀರಾವರಿ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಅವರು ಹೇಳಿದರು.
  ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಶಾಸಕರುಗಳಾದ ಹಂಪನಗೌಡ ಬಾದರ್ಲಿ, ಎನ್.ಎಸ್. ಭೋಸರಾಜ್, ಕೆ. ರಾಘವೇಂದ್ರ ಹಿಟ್ನಾಳ್, ಹಂಪಯ್ಯ ನಾಯಕ್, ಇಕ್ಬಾಲ್ ಅನ್ಸಾರಿ, ಶಿವರಾಜ ಪಾಟೀಲ್, ಮೃತ್ಯುಂಜಯ್ಯ ಜಿನಗ ಮುಖ್ಯ ಇಂಜಿನಿಯರ್ ಮಲ್ಲಿಕಾರ್ಜುನ, ಅಧೀಕ್ಷಕ ಅಭಿಯಂತರ ಭೋಜನಾಯ್ಕ ಕಟ್ಟಿಮನಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top