
ನೈತಿಕ ಪೊಲೀಸ್‌ಗಿರಿ ವಿರೋಧಿಸಿ ನಗರದ ಟೌನ್‌ಹಾಲ್ ಬಳಿ ಹಮ್ಮಿಕೊಂಡಿದ್ದ ಕಿಸ್ ಆಫ್ ಲವ್ ಆಚರಣೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು ಇದೀಗ ಕೆಲವು ಸ್ವಯಂಸೇವಕ ಸಂಘಟನೆಗಳು ನ.30ರಂದು ಆಚರಣೆಯ ಬದಲಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿವೆ.
ಪ್ರತಿಭಟನೆಗೆ ಸುಮಾರು 500 ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ರವಿವಾರ ಸಂಜೆ 4 ರಿಂದ 5ಗಂಟೆಯವರೆಗೆ ಈ ಪ್ರತಿಭಟನೆ ನಡೆಯಲಿದೆ. ಪರಸ್ಪರ ಚುಂಬಿಸಿ ನೈತಿಕ ಪೊಲೀಸ್‌ಗಿರಿ ಖಂಡಿಸುವಂತೆ ಎಲ್ಲಿಯೂ ಸೂಚಿಸಿಲ್ಲ. ಆದರೆ ಪ್ರತಿಭಟನೆ ವೇಳೆ ಅವರೇ ಸ್ವಯಂಪ್ರೇರಿತವಾಗಿ ಚುಂಬಿಸಿಕೊಂಡರೆ ತಡೆಯುವುದಿಲ್ಲ ಎಂದು ವಿಜಯನ್ ಹೇಳಿದ್ದಾರೆ.

‘‘ನಗರದಲ್ಲಿ ಕಿಸ್ ಆಫ್ ಲವ್ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದು ಕಾರ್ಯಕ್ರಮದ ಆಯೋಜಕರಿಗೆ ಲಿಖಿತ ಪತ್ರ ಕಳುಹಿಸಿರುವುದಲ್ಲದೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಲಾಗಿದೆ. ಕಾರ್ಯಕ್ರಮದ ಆಯೋಜಕರು ಈ ಆಚರಣೆ ಮಾಡೇ ಮಾಡುತ್ತೇವೆಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆಯೇ ವಿನಾ ನಮ್ಮ ಬಳಿ ಬಂದು ಹೇಳಿಲ್ಲ. ಅದಕ್ಕೂ ಮೀರಿದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ.’’ -ಅಲೋಕ್‌ಕುಮಾರ್, ಹೆಚ್ಚುವರಿ ಪೊಲೀಸ್ ಕಮಿಷನರ್
0 comments:
Post a Comment