ಅ) ಹೈದರಾಬಾದ್-ಕರ್ನಾಟಕ ವಿಭಾಗಕ್ಕೆ ಸಂಬಂಧಿಸಿದ ನಿರ್ಣಯಗಳು :
ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖೆ.
1. 2013-14ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದಿತ ಕಾಮಗಾರಿಗಳನ್ನು ಕೈಗೊಳ್ಳಲು ರೂ.120 ಕೋಟಿಗಳನ್ನೊಳಗೊಂಡಂತೆ ರೂ.400 ಕೋಟಿಗಳ ಹೆಚ್ಚುವರಿ ಅನುದಾನವನ್ನು ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮಂಜೂರಾತಿ ನೀಡಲು ತಿರ್ಮಾನಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.
2. ಸಂವಿಧಾನದ ಅನುಚ್ಛೇಧ 371(ಜೆ)ಯ ಅನುಷ್ಟಾನದ ಬಗ್ಗೆ ಸಂಪೂಟ ಸಭೆ ಚರ್ಚಿಸಿತ್ತು. ಹೈದ್ರಾಬಾದ ಕರ್ನಾಟಕ ಭಾಗದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಡಿಸೆಂಬರ-2014ರ ಒಳಗಡೆ ಗುರುತಿಸಬೇಕು. ಜೂನ-2015ರ ಒಳಗಡೆ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ಸಚಿವ ಸಂಪೂಟ ಸಭೆಯಲ್ಲಿ ನಿರ್ಧರಿಸಿತ್ತು.
3. 2014-15ನೇ ಸಾಲಿನಿಂದ ಹೈದ್ರಾಬಾದ್-ಕರ್ನಾಟಕ ಭಾಗದ ಆಯ್ದ 250 ಗ್ರಾಮ ಪಂಚಾಯಿತಿಗಳಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ರೂ.50.00 ಕೋಟಿಯ ಅನುದಾನದಿಂದ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿ ಜ್ಞಾನ ಕೇಂದ್ರಗಳನ್ನು ತೆರೆಯಲಾಗುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
4. ಕಲಬುರಗಿ ಜಿಲ್ಲೆಯ ಸೇಡಂನಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಮಟ್ಟದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರೂ. 696.50 ಲಕ್ಷಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
5. ಬಳ್ಳಾರಿಯ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 7.04 ಕೋಟಿಗಳ ಪರಿಷ್ಕೃತ ಹೆಚ್ಚುವರಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
6. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹಿಪ್ಪರಗಾ-ಕೋನಾ-ಸರಡಗಿ(ಬಿ) ಮಧ್ಯದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ರೂ. 52.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
7. ಯಾದಗಿರಿ ನಗರದಲ್ಲಿ ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ರೂ. 550.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಮಾಡಲು ತಯಾರಿಸಿರುವ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
8. ಯಾದಗಿರಿ ನಗರದಲ್ಲಿ ಗ್ರೂಪ್-ಸಿ ವೃಂದದ ಸಿಬ್ಬಂದಿ ವರ್ಗದವರಿಗೆ ರೂ. 800.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಮಾಡಲು ತಯಾರಿಸಿರುವ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
9. ಯಾದಗಿರಿ ನಗರದಲ್ಲಿ ಗ್ರೂಪ್-ಡಿ ವೃಂದದ ಸಿಬ್ಬಂದಿ ವರ್ಗದವರಿಗೆ ರೂ. 600.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಮಾಡಲು ತಯಾರಿಸಿರುವ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
10. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ, ಹಟ್ಟಿ, ರಾಯಚೂರು ಜಿಲ್ಲೆ ಇವರಿಗೆ ರಾಯಚೂರು ಜಿಲ್ಲೆ, ದೇವದುರ್ಗ ತಾಲ್ಲೂಕು, ಊಟಿ ಗ್ರಾಮದ ಸ.ನಂ. 38/3 ರಲ್ಲಿ 6.38 ಹೆಕ್ಟೇರ್ (15.31 ಎಕರೆ) ಜಮೀನನ್ನು ಗಣಿ ಅನ್ವೇಷಣೆಗಾಗಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಯಿತು.
11. ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಯಾದಗಿರಿ ಇವರಿಗೆ ಉದ್ದೇಶಿತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕಾಗಿ ಯಾದಗಿರಿ ಜಿಲ್ಲೆ, ಯಾದಗಿರಿ ತಾಲ್ಲೂಕಿನ ಮುದ್ನಾಳ ಗ್ರಾಮದ ಸ.ನಂ. 24ರಲ್ಲಿ 17.20 ಎಕರೆ ಹಾಗೂ ಸ.ನಂ. 28/1ರಲ್ಲಿ 13.18 ಎಕರೆ (ಒಟ್ಟು 30.38 ಎಕರೆ) ಜಮೀನನ್ನು ಮಂಜೂರು ಮಾಡಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ
12. ಕಲಬುರಗಿಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ರೂ. 7.05 ಕೋಟಿಗಳ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ಮೂಲಕ ನಿರ್ಮಿಸಲು ಅನುಮೋದನೆ ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆ
13. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ರೂ. 9.23 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣವನ್ನು ನಿರ್ಮಿಸಲು ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
14. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣವನ್ನು ರೂ. 9.17 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾ ತಾಲ್ಲೂಕಿನ ಕುದುರೆಮೋತಿ ಗ್ರಾಮದಲ್ಲಿ ನಿರ್ಮಿಸಲು ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
15. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾ ತಾಲ್ಲೂಕಿನ ಬೆಳ್ಳೋಟಗಿ ಗ್ರಾಮದಲ್ಲಿ ರೂ. 9.98 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕಿರ್ಣವನ್ನು ನಿರ್ಮಾಣ ಮಾಡಲು ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
16. ಕಲಬುರಗಿಯ ಸೇಡಂ ರಸ್ತೆಯಲ್ಲಿ ನಿರ್ಮಿಸಲಿರುವ ಡಾ::ಬಿ.ಆರ್.ಅಂಬೇಡ್ಕರ್ ಭವನದ ರೂ.650 ಲಕ್ಷಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಮತ್ತು ಕಲಬುರಗಿ ವಿಶ್ವವಿದ್ಯಾಲಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಡಾ:ಬಿ.ಆರ.ಅಂಬೇಡ್ಕರ ಭವನದ ಪೂರಕ ಕಾಮಗಾರಿಗಳನ್ನು ಕೈಗೊಳ್ಳಲು ರೂ.100 ಲಕ್ಷಗಳನ್ನು ಬಿಡುಗಡೆ ಮಾಡಲಾಯಿತು.
17. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮಸ್ಕಿ ಗ್ರಾಮದಲ್ಲಿ ರೂ.8.10 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೋರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
18. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲ್ಲೂಕು, ಕವಲೂರು ಗ್ರಾಮದಲ್ಲಿ ರೂ. 8.70 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
19. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು, ವಡ್ಡರಹಟ್ಟಿ (ಮಲಕನಕರಡಿ) ಗ್ರಾಮದಲ್ಲಿ ರೂ. 8.74 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
20. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕಲಬುರಗಿ ಜಿಲ್ಲೆ, ಚಿತ್ತಾಪುರ ತಾಲ್ಲೂಕು, ಕೆ.ಚಿತ್ತಾಪುರ ಗ್ರಾಮದಲ್ಲಿ ರೂ. 9.42 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
21. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕಲಬುರಗಿ ಜಿಲ್ಲೆ, ಆಳಂದ ತಾಲ್ಲೂಕು, ಸವಳೇಶ್ವರ ಗ್ರಾಮದಲ್ಲಿ ರೂ. 9.28 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
22. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕು, ಹುಲಸೂರು ಗ್ರಾಮದಲ್ಲಿ ರೂ. 8.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
23. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು, ಹೆಮ್ಮಿಗುಡ್ಡ ಗ್ರಾಮದಲ್ಲಿ ರೂ. 8.57 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
24. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕಲಬುರಗಿ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಕೋಡ್ಲಿ ಗ್ರಾಮದಲ್ಲಿ ರೂ. 9.21 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ನಗರಾಭಿವೃದ್ಧಿ ಇಲಾಖೆ
25. ದಿ|| ಮಲ್ಲಿಕಾರ್ಜುನ ಬಂಡೆ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸೇಷನ್ ಬಜಾರ ಪೊಲೀಸ್ ಠಾಣೆ, ಕಲಬುರಗಿ ಇವರ ಪತ್ನಿ ಶ್ರೀಮತಿ ಮಲ್ಲಮ್ಮ ಇವರಿಗೆ ಗುಲ್ಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಎಂ.ಎಸ್.ಕೆ.ಮಿಲ್. ಹಂತ-1ರಲ್ಲಿ ರೂ. 11,50,385/- ಬೆಲೆ ಬಾಳುವ 2234 ಚದರ ಅಡಿ ವಿಸ್ತೀರ್ಣದ ಬಿಡಿ ನಿವೇಶನ ಸಂಖ್ಯೆ. 254ನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಉಚಿತವಾಗಿ ನೀಡಲಾಯಿತು.
ಜಲಸಂಪನ್ಮೂಲ ಇಲಾಖೆ
26. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಹೆರೂರ (ಕೆ) ಗ್ರಾಮದ ಬಳಿ ನಿರ್ಮಿಸಲಾಗಿರುವ ಬೆಣ್ಣೆತೊರಾ ಜಲಾಶಯದ ಹೆಸರನ್ನು ಹುತಾತ್ಮ ಶ್ರೀ ಅಪ್ಪಾರಾವ ಪಾಟೀಲ ಸಾಗರ ಎಂದು ಪುನರ್ ನಾಮಕರಣ ಮಾಡಲು ತೀರ್ಮಾನಿಸಲಾಯಿತು.
27. ಕಾರಂಜಾ ಯೋಜನೆಯ ರೂ. 635.18 ಕೋಟಿಗಳ ಮರು ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
28. ಚಿತ್ತಾಪೂರ ತಾಲೂಕಿನಲ್ಲಿ ಮಿನಿ ವಿಧಾನಸೌಧವನ್ನು ರೂ.10.00 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವನೆಯನ್ನು ಒಪ್ಪಲಾಯಿತು.
29. ಬಳ್ಳಾರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 2,65,229 ಎಕರೆ (48,381 ಎಕರೆ ಪ್ರದೇಶಕ್ಕೆ ಹರಿ ನೀರಾವರಿ ಮತ್ತು 2,16,848 ಎಕರೆ ಪ್ರದೇಶದಕ್ಕೆ ಸೂಕ್ಷ್ಮ ನೀರಾವರಿ) ನೀರಾವರಿ ಸೌಲಭ್ಯವನ್ನು ಒದಗಿಸಲು ಯೋಜಿಸಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ರೂ.5768.04 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
30. ಬೀದರ್ ಜಿಲ್ಲೆ, ಹುಮನಾಬಾದ ತಾಲ್ಲೂಕಿನ ಬೋರಂಪಳ್ಳಿ ಗ್ರಾಮದ ಸ.ನಂ.116 ರಲ್ಲಿ 34 ಎಕರೆ 06 ಗುಂಟೆ ಜಮೀನನ್ನು ಟ್ರೈಬಲ್ ಪಾರ್ಕ್ ಸ್ಥಾಪಿಸಲು ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಮೊತ್ತದ ಷರತ್ತಿಗೊಳಪಟ್ಟು ಮಂಜೂರು ಮಾಡಲು ತೀರ್ಮಾನಿಸಲಾಯಿತು.
ನಗರಾಭಿವೃದ್ಧಿ ಇಲಾಖೆ
31. ನಗರೋತ್ಥಾನ ಯೋಜನೆಯಡಿ ಕಂಪ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಎ.ಪಿ.ಎಂ.ಸಿ. ಕಚೇರಿವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಪಡಿಸುವುದು, ಚರಂಡಿ, ಫುಟ್‌ಬಾತ್ ಮತ್ತು ಡಿವೈಡರ್ ನಿರ್ಮಾಣ ಕಾಮಗಾರಿಗಳನ್ನು ರೂ.600 ಲಕ್ಷಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತಿರ್ಮಾನಿಸಲಾಯಿತು.
32. ನಗರೋತ್ಥಾನ 2ನೇ ಹಂತದ ಯೋಜನೆಯಡಿ 4 ಜಿಲ್ಲೆಗಳ 20 ನಗರ ಸ್ಥಳೀಯ ಸಂಸ್ಥೆಗಳ ಪ್ಯಾಕೇಜ್ ಟೆಂಡರ‍್ಗಳಿಗೆ ಸಂಬಂಧಿಸಿದಂತೆ ಟೆಂಡರ್ ಪ್ರೀಮಿಯಂನಿಂದ ಉಂಟಾದ ಹೆಚ್ಚಿನ ಆರ್ಥಿಕ ಹೊರೆ ರೂ.1981.86 ಲಕ್ಷಗಳು ಸೇರಿ ಒಟ್ಟು ರೂ.127.25 ಕೋಟಿಗಳಿಗೆ ಅನುಮೋದನೆ ನೀಡಲಾಯಿತು. ಮುಂದುವರಿದು, ಇದೇ ಯೋಜನೆಯಡಿ ಕಲಬುರಗಿ ಹಾಗೂ ರಾಯಚೂರು ನಗರ ಸಭೆಯ ಪ್ಯಾಕೇಜುಗಳಲ್ಲಿ ಹೆಚ್ಚಾದ ಟೆಂಡರ್ ಪ್ರೀಮಿಯಮ ರೂ.2007.79 ಲಕ್ಷಗಳು ಸೇರಿದಂತೆ ಒಟ್ಟು ಮೊತ್ತ ರೂ.9110.99 ಲಕ್ಷಗಳಿಗೆ ಅನುಮೋದನೆ ನೀಡಲಾಯಿತು. ಈ ಹಿಂದೆ 6 ಜಿಲ್ಲೆಗಳ ಯೋಜನೆಗೆ ಅನುಮೋದನೆ ನೀಡಿದ್ದಾಗ್ಯೂ ಸಹ ಟೆಂಡರ್ ಪ್ರೀಮಿಯಂ ಹಣದಲ್ಲಿ ಗಣನೀಯ ಹೆಚ್ಚಳ ಇದ್ದುದರಿಂದ ಅವುಗಳನ್ನು ಪರಿಷ್ಕರಿಸಿ ಅನುಮೋದಿಸಲಾಯಿತು.
ಆ) ಹೈದರಾಬಾದ್-ಕರ್ನಾಟಕ ಸೇರಿದಂತೆ ರಾಜ್ಯದ ಇತರೆ ಪ್ರದೇಶಗಳಿಗೆ ಸಂಬಂಧಿಸಿದ ನಿರ್ಣಯಗಳು
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.
1. ಹಾಸನ ಮತ್ತು ಹೊಸಪೇಟೆಯಲ್ಲಿ ಕ್ರಮವಾಗಿ ರೂ 29.37 ಕೋಟಿ ಮತ್ತು ರೂ 8.60 ಕೋಟಿ ವೆಚ್ಚದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಗವರ್ನಮೆಂಟ್ ಟೂಲ್ ರೂಂ ಟ್ರ್ನೈನಿಂಗ್ ಸೆಂಟರ್) ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹೈದ್ರಾಬಾದ ಕರ್ನಾಟಕ ಭಾಗದ ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜಿ.ಟಿ.ಟಿ.ಸಿ. ಇಲ್ಲದೆ ಇರುವುದರಿಂದ ಅವುಗಳನ್ನೂ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ವೈದ್ಯಕೀಯ ಶಿಕ್ಷಣ
2. ಮೈಸೂರು ಮತ್ತು ಕಲಬುರಗಿಯಲ್ಲಿ ಅಪಘಾತ ಚಿಕಿತ್ಸಾ ಕೇಂದ್ರಗಳ (ಟ್ರಾಮಾ ಕೇರ್ ಕೇಂದ್ರ) ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕ್ರಮವಾಗಿ ರೂ. 25.00 ಕೋಟಿ ಮತ್ತು ರೂ. 21.67 ಕೋಟಿಗಳ ಅಂದಾಜು ವೆಚ್ಚದಲ್ಲಿ ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಇ ) ರಾಜ್ಯದ ಸಂಬಂಧಿಸಿದ ಇತರೆ ಪ್ರಮುಖ ನಿರ್ಣಯಗಳು
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.
1. ರಾಜ್ಯದ ಸಿ.ದರ್ಜೆಯ ಗಣಿ ಗುತ್ತಿಗೆ ಹಕ್ಕುಗಳನ್ನು ಹರಾಜು ಮಾಡಲು ಯೋಜನೆಯೊಂದನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸರ್ವೋಚ್ಛ ನ್ಯಾಯಾಲಯ ರಚಿಸಿರುವ ಸಿ.ಇ.ಸಿ. ಸದಸ್ಯರು ಇತ್ತೀಚಿಗೆ ಬೆಂಗಳೂರಿಗೆ ಬಂದು ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸಿ ಕೆಲವು ಸಲಹೆಗಳನ್ನು ನೀಡಿದ್ದರು. ಇಂದಿನ ಸಚಿವ ಸಂಪೂಟ ಸಭೆಯಲ್ಲಿ ಗಣಿ ಗುತ್ತಿಗೆ ಹಕ್ಕಿನ ಹರಾಜು ಬಗ್ಗೆ ಯೋಜನೆಯೊಂದನ್ನು ಸಿ.ಇ.ಸಿ.ಮುಖಾಂತರೆ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲು ತಿರ್ಮಾನಿಸಲಾಯಿತು. ಸರ್ವೋಚ್ಛ ನ್ಯಾಯಾಲಯವು ಈ ಯೋಜನೆಗೆ ಅನುಮೊದನೆ ನೀಡಿದ್ದಲ್ಲಿ ಡಿಸೆಂಬರ-2014 / ಜನೆವರಿ-2015 ತಿಂಗಳೂಗಳಲ್ಲಿ 6 ಗಣಿಗಳ ಹರಾಜು ಮಾಡಲಾಗುವುದು. ಇನ್ನೂಳಿದ 9 ಗಣಿಗಳನ್ನು ಮುಂದಿನ ವರ್ಷ ಏಪ್ರೀಲ-ಮೇ-2015 ತಿಂಗಳೂಗಳಲ್ಲಿ ಹರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು.
2. ಗಣಿಗಾರಿಕೆಯಿಂದ ಹಾನಿಗಿಡಾಗಿರುವ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪರಿಸರ ಹಾಗೂ ಮೂಲಭೂತ ಸೌಕರ್ಯಗಳ ಪುನಶ್ಚೇತನಕ್ಕಾಗಿ ಸುಮಾರು ರೂ.2000 ಕೋಟಿಯ ಪ್ರಸ್ತಾವನೆಯನ್ನು ಸಚಿವ ಸಂಪೂಟ ಸಭೆ ಅನುಮೋದಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲು ತಿರ್ಮಾನಿಸಲಾಗಿದೆ. ಇದನ್ನು ಕರ್ನಾಟಕ ಮೈನಿಂಗ ರೆಸ್ಟೋರೆಷನ ಕಾರ್ಪೋರೆಷನ ಮೂಲಕ ಅನುಷ್ಟಾನಗೊಳಿಸಲಾಗುವುದು. ಈ ಯೋಜನೆಯಲ್ಲಿ ಸಾರಿಗೆ ಮತ್ತು ಸಂಪರ್ಕ ಪರಿಸರ ಮತ್ತು ಅರಣ್ಯ, ಕುಡಿಯುವ ನೀರು ಆರೋಗ್ಯ, ಶಿಕ್ಷಣ, ಕೌಶಲ್ಯ ತರಬೇತಿ ಹಾಗೂ ಕೃಷಿಗೆ ಸಂಬಂಧಿಸಿದಂತಹ ಯೋಜನೆಗಳನ್ನು ಸೇರಿಸಲಾಗಿದೆ. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ತಿರ್ಮಾನಿಸಲಾಗಿದೆ.
3. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮವು ದುಡಿಮೆಯ ಬಂಡವಾಳಕ್ಕಾಗಿ ರೂ.27.00 ಕೋಟಿಗಳನ್ನು ಬ್ಯಾಂಕುಗಳ ಒಕ್ಕೂಟದಿಂದ ಸಾಲ ಪಡೆಯಲು ಅಗತ್ಯವಾದ ಸರ್ಕಾರಿ ಖಾತರಿಯನ್ನು ನೀಡಲು ಸಂಪೂಟ ನಿರ್ಧರಿಸಿತ್ತು.
ಕಂದಾಯ ಇಲಾಖೆ
4. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಧಾರವಾಡದಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ಇನ್‌ಫಾರ್ಮೇಷನ್ ಟೆಕ್ನಾಲಜಿ ಸಂಸ್ಥೆಯನ್ನು ಸ್ಥಾಪಿಸಲು ಧಾರವಾಡ ಜಿಲ್ಲೆ, ಧಾರವಾಡ ತಾಲ್ಲೂಕು, ತಡಸಿನಕೊಪ್ಪ ಗ್ರಾಮದ ರಿ.ಸ.ನಂ. 110/2 ರಲ್ಲಿ 61.06 ಎಕರೆ ಜಮೀನನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ಇವರಿಗೆ ಮಾರ್ಗಸೂಚಿ ಬೆಲೆಯ ಶೇಕಡಾ 50ರಷ್ಟನ್ನು ವಿಧಿಸುವ ಷರತ್ತಿಗೆ ಒಳಪಟ್ಟು ಮಂಜೂರು ಮಾಡಲಾಯಿತು.
5. ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಂದ ಗಂಗಾಕಲ್ಯಾಣ ಯೋಜನೆಯಡಿ ಕ್ರಮವಾಗಿ 12618, 6352 ಮತ್ತು 5374 ಕೊಳವೆ ಬಾವಿಗಳನ್ನು ಕೊರೆದು ಪಂಪ್‌ಸೆಟ್ ಮತ್ತು ವಿದ್ಯುದ್ದೀಕರಣ ಸೌಲಭ್ಯವನ್ನು ರೂ. 223.33 ಕೋಟಿ, ರೂ. 112.25 ಕೋಟಿ ಹಾಗೂ ರೂ. 94.35 ಕೋಟಿಗಳ ವೆಚ್ಚದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಸಹಕಾರ ಇಲಾಖೆ
6. ಕರ್ನಾಟಕ ರಾಜ್ಯ ಉಗ್ರಾನ ನಿಗಮವು ಮೂಲಭೂತ ಅಭಿವೃದ್ಧಿ ಬಂಡವಾಳ ನಿಧಿ (Warehousing Infrastructure Fund) 2013-14ನೇ ಯೋಜನೆಯಡಿ ನಬಾರ್ಡನಿಂದ ಸಾಲ ಪಡೆದು ಗೋಧಾಮುಗಳನ್ನು ನಿರ್ಮಾಣ ಮಾಡಲು ರೂ.9357.00 ಲಕ್ಷಗಳ ಸಾಲಕ್ಕೆ ಸರ್ಕಾರವು ನಿರ್ಭಂಧವಿಲ್ಲದ ಖಾತರಿ (Unconditional Guarantee) ನೀಡಲಾಯಿತು.
ಶಿಕ್ಷಣ ಇಲಾಖೆ – ಉನ್ನತ ಶಿಕ್ಷಣ
7. ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಟೆಲಿ ಶಿಕ್ಷಣ ಕಾರ್ಯಕ್ರಮವನ್ನು ಐಐಎಂಬಿ ಬೆಂಗಳೂರು ಮತ್ತು ಅದರ ಒಕ್ಕೂಟ ಸಂಸ್ಥೆಗಳ ಸಂಯೋಜನೆಯೊಡನೆ ಕಾರ್ಯಗತಗೊಳಿಸಲು ತಗಲುವ ವೆಚ್ಚ ಅಂದಾಜು ರೂ.29.07 ಕೋಟಿ ಅನುಮೋದಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
8. ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ನೀಡುತ್ತಿರುವ ಗೌರವ ಧನವನ್ನು ಇಮ್ಮಡಿಗೊಳಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಪ್ರಸ್ತುತ ಸಾಲಿನಲ್ಲಿ ರೂ. 69.78 ಕೋಟಿ ಅನುದಾನವನ್ನು ಒದಗಿಸಲು ತೀರ್ಮಾನಿಸಲಾಯಿತು.
0 comments:
Post a Comment