ಪರೀಕ್ಷಾ ಶುಲ್ಕವನ್ನು ದುಬಾರಿಗೊಳಿಸಿ, ಪದವಿ ವ್ಯಾಸಂಗ ಮಾಡುತ್ತಿರುವ ಬಿ.ಸಿ.ಎಂ (ಹಿಂದುಳಿದ ಹಾಗು ಅಲ್ಪಸಂಖ್ಯಾತ) ವಿದ್ಯಾರ್ಥಿಗಳ ಮೇಲೆ ತಮ್ಮ ವಿ.ವಿ ಮತ್ತೊಮ್ಮೆ ಗಧಾ ಪ್ರಹಾರ ನೀಡಿದೆ. ರೂ.೧೧೦ ಶುಲ್ಕ ಪಾವತಿಸುತ್ತಿದ್ದ ಬಿಸಿಎಂ ವಿದ್ಯಾರ್ಥಿಗಳು ಈಗ ರೂ.೬೦೦ ಪಾವತಿಸಬೇಕಾಗಿದೆ. ದುಬಾರಿ ಶುಲ್ಕಗಳ ಹೊರೆಯಿಂದ ಬಳಲಿದ ಬಡ ವಿದ್ಯಾರ್ಥಿಗಳ ಮೇಲೆ ಈ ಶುಲ್ಕ ಹೇರಿಕೆ ಅತ್ಯಂತ ಅನ್ಯಾಯಯುತವಾದುದು. ಈಗಾಗಲೇ ರಾಜ್ಯ ಸರ್ಕಾರ ಎಲ್ಲಾ ಬಿ.ಸಿ.ಎಂ ವಿದ್ಯಾರ್ಥಿಗಳಿಗೆ ನೇರ ಶುಲ್ಕ ವಿನಾಯಿತಿ ನೀಡುಂತೆ ಅಗಷ್ಟ್’೧೪ ತಿಂಗಳಿನಲ್ಲೇ ಸುತ್ತೋಲೆಯನ್ನೂ ಸಹ ಹೊರಡಿಸಿದೆ. ಹೀಗಿರುವಾಗ ಶುಲ್ಕ ವಿನಾಯಿತಿ ನೀಡುವ ಸರ್ಕಾರದ ನಿರ್ಧಾರವನ್ನು ವಿ.ವಿಯು ಯಾಕೆ ಜಾರಿಗೊಳಿಸಿಲ್ಲ?ಈ ಸಮಸ್ಯೆಗೆ ಯಾರು ಹೊಣೆ? ಬಿಸಿಎಂ ಇಲಾಖೆ ಹಾಗು ವಿ.ವಿಯ ನಡುವೆ ಗೊಂದಲಗಳಿಗೆ ವಿದ್ಯಾರ್ಥಿಗಳು ಬಲಿಯಾಗಬೇಕೇ?.ವಿದ್ಯಾರ್ಥಿಗಳ ಈ ಪ್ರಶ್ನೆಗಳಿಗೆ ತಾವೇ ಉತ್ತರಿಸಬೇಕು. ಸರ್ಕಾರ ಹಾಗು ವಿ.ವಿಯ ನಡುವೆ ಏನೇ ಗೊಂದಲಗಳಿದ್ದರೂ ಮುಂಚಿತವಾಗಿ ಬಗೆಹರಿಸಿಕೊಳ್ಳಬೇಕೇ ವಿನಹ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ತೊಂದರೆಕ್ಕೀಡು ಮಾಡುವುದು ಒಪ್ಪುವಂತದ್ದಲ್ಲ. ಯಾವುದೇ ನಿರ್ಧಾರವಾಗಲಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ತಿಳಿಸಬೇಕೆಂಬುದು ನಿಯಮ. ಆದರೆ ಪರೀಕ್ಷಾ ಸಮಯದಲ್ಲಿ ಧಿಡೀರನೇ ಶುಲ್ಕ ಏರಿಕೆಯ ಹೊಸ ನಿರ್ಧಾರ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯುತ್ತಾ, ಬಿ.ಸಿ.ಎಂ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವ ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸಿ, ದುಬಾರಿ ಪರೀಕ್ಷಾ ಶುಲ್ಕವನ್ನು ಹಿಂಪಡೆಯಲು ವಿ.ಎಸ್.ಕೆ.ವಿ ವಿದ್ಯಾರ್ಥಿ ಹೋರಾಟ ಸಮಿತಿ, ಎಐಡಿಎಸ್‌ಓ ಹಾಗು ಎಐಡಿವೈಓ ಸಂಘಟನೆಗಳು ಮನವಿ ಮಾಡುತ್ತವೆ. ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಮನವಿ.
ಬೇಡಿಕೆಗಳು:
೧. ಪದವಿ ವ್ಯಾಸಂಗ ಮಾಡುವ ಬಿ.ಸಿ.ಎಂ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ನೀಡುವ ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸಿ. ದುಬಾರಿ ಶುಲ್ಕ ಏರಿಕೆಯನ್ನು ಹಿಂಪಡೆಯಿರಿ.
೨. ಬಿಸಿಎ ಹಾಗ ಬಿಬಿಎಂ ಕೋರ್ಸುಗಳ ವಿದ್ಯಾರ್ಥಿಗಳಿಗೆ ಫೇಲಾದ ವಿಷಯಗಳಿಗೆ ಪರೀಕ್ಷಾ ಶುಲ್ಕವನ್ನು
ದುಬಾರಿಗೊಳಿಸದೆ, ಇತರೆ ಕೋರ್ಸುಗಳಿಗಿರುವಂತೆ ನಿಗಧಿಗೊಳಿಸಿ.
ಇಂದು ವಿ.ಎಸ್.ಕೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಹೋರಾಟ ಸಮಿತಿ, ಎ.ಐ.ಡಿ.ಎಸ್.ಒ. ಹಾಗೂ ಎ.ಐ.ಡಿ.ವೈ.ಒ.ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ನಂತರ ವಿ.ಎಸ್.ಕೆ. ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ: ಶಿವಪ್ರಸಾದ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರ ಸ್ವೀಕರಿಸಿದ ಕುಲಪತಿಗಳು ಬಿ.ಸಿ.ಎಂ. ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಕುರಿತಂತೆ ಸರ್ಕಾರದ ಆದೇಶವನ್ನು ಜಾರಿಗೊಳಿಸಲಾಗುವುದು ಮತ್ತು ಬಿ.ಸಿ.ಎಂ. ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಕೇವಲ ೧೧೦/- ರೂ. ಮಾತ್ರ ಸ್ವೀಕರಿಸಲಾಗುವುದೆಂದು ಘೋಷಿಸಿದರು.
೨೮.೧೦.೨೦೧೪ ರಂದು ಪರೀಕ್ಷಾ ಶುಲ್ಕವನ್ನು ಕಟ್ಟುವ ಕೊನೆಯ ದಿನಾಂಕವನ್ನು ೩.೧೧.೨೦೧೪ ರ ವರೆಗೆ ವಿಸ್ತರಿಸಲಾಗುವುದೆಂದು ತಿಳಿಸಿದರು.
ಈ ಪ್ರತಿಪಭಟಯಲ್ಲಿ ವಿ.ಎಸ್.ಕೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಸಂಚಾಲಕರು ಹಾಗೂ ಎ.ಐ.ಡಿ.ಎಸ್.ಒ. ರಾಜ್ಯ ಕಾರ್ಯದರ್ಶಿಗಳಾದ ಡಾ: ಪ್ರಮೋದ್ ಮತ್ತು ಎ.ಐ.ಡಿ.ಎಸ್.ಒ. ಬಳ್ಳಾರಿ ಜಿಲ್ಲಾಧ್ಯಕ್ಷ ಗೋವಿಂದ್ ಮತ್ತು ಬಳ್ಳಾರಿ ಎ.ಐ.ಡಿ.ವೈ.ಒ. ಜಿಲ್ಲಾ ಕಾರ್ಯದರ್ಶಿಗಳು ಎಸ್.ಉಮೇಶ್ ಹಾಗೂ ಎ.ಐ.ಡಿ.ಎಸ್.ಒ. ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ವಿದ್ಯಾರ್ಥಿ ಮುಖಂಡರಾದ ರಫಿಕ್, ಕೀರಣ್ , ಕಿಶೋರ್ ಇನ್ನಿತರರು ಭಾಗವಹಿಸಿದರು.
0 comments:
Post a Comment