ಕೊಪ್ಪಳ , ೧೮- ಮಾನವ ಸಮಾಜದಿಂದ ಬೆಳೆದ ನಮ್ಮ ಮಠದಿಂದ ಮರಳಿ ಮಾನವ ಸಮಾಜಕ್ಕೆ ಮಹತ್ತರ ಕೊಡುಗೆ ನೀಡುವ ಸಲುವಾಗಿ ಭಕ್ತ ಸಮೂಹದಿಂದ ರಕ್ತದಾನದಿಂದ ತಮ್ಮ ತುಲಾಭಾರ ಏರ್ಪಡಿಸ ಲಾಗುವುದು ಎಂದು ಸುಳೇಕಲ್ಲ ಗ್ರಾಮದ ಬ್ರಹನ್ಮಠದ ಶ್ರೀ ಭುವನೇಶ್ವರಯ್ಯ ತಾತನವರು ನುಡಿದರು.
ಅವರು ಇಂದು ಮಠದಲ್ಲಿ ಏರ್ಪಡಿಸಿದ್ದ ರಕ್ತದಾನದ ತುಲಾ ಭಾರ ನಿಮಿತ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಈವರೆಗೆ ಭಕ್ತರು ತಮಗೆ ೨೨ ತುಲಾಭಾರ ನೆರವೇರಿಸಿದ್ದಾರೆ. ಆದರೆ ಅವುಗಳಿಗಿಂತ ಮಹತ್ವ ಪೂರ್ಣ ಕೆಲಸ ವಾಗಬೇಕು ಎಂಬ ಭಕ್ತರ ಕೋರಿಕೆ ಯಂತೆ ನವೆಂಬರ್‌ನಲ್ಲಿ ಭಕ್ತರು ತಮ್ಮ ರಕ್ತದಾನದಿಂದ ತುಲಾಭಾರ ನಡೆಸಿ ಒಂದು ಸಮಾಜ ಮುಖಿ ಕಾರ್ಯಕ್ಕೆ ನನ್ನನ್ನು ಪ್ರೇರೆಪಿಸಿ ದ್ದಾರೆ. ಇಲ್ಲಿ ನಾನು ನೆಪ ಮಾತ್ರ. ರಕ್ತ ದಾನದಿಂದ ಕಷ್ಟದಲ್ಲಿರು ವವರಿಗೆ ಸಹಾಯ ಮಾಡಿದ ತೃಪ್ತಿ ಸಿಗುತ್ತದೆ ಎಂದರು.
ಕೊಪ್ಪಳ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯ ದರ್ಶಿ ಡಾ|| ಶ್ರೀವಾಸ ಹ್ಯಾಟಿ ಮಾತನಾಡಿ ರಕ್ತದಾನದ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವುದಲ್ಲದೆ ರಕ್ತದಾನ ಮಾಡುವುದರಿಂದ ದಾಗಳು ಸಂಭವನೀಯ ಹೃದ ಯಾಘಾತ ದಿಂದ ಪಾರಾಗುತ್ತಾರೆ. ಬಿಪಿ ಸೇರಿದಂತೆ ವಿವಿಧ ರೋಗಗಳನ್ನು ರಕ್ತದಾನದಿಂದ ತಡೆಗಟ್ಟಬಹುದು ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇ ಶಕ ಸಂತೋಷ ದೇಶಪಾಂಡೆ ಮಾತನಾಡಿ, ಬೃಹನ್ಮಠದ ಭಕ್ತರು ರಕ್ತದಾನದ ಮೂಲಕ ತಾತನವರ ತುಲಾಭಾರ ನೆರವೇರಿಸಿಕೊಡುವ ನಿರ್ಧಾರ ರಾಜ್ಯದಲ್ಲಿ ಕ್ರಾಂತಿಕಾರ ಹೆಜ್ಜೆ. ಇದು ಸರ್ವ ಶ್ರೀಗಳಿಗೆ ಮಾದರಿಯಾಗಲಿ ಎಂದರು.
ಗಂಗಾವತಿಯ ಶರಣ ಚಿಂತಕ ಸಿ.ಹೆಚ್. ನಾರಿನಾಳ ಪ್ರಾಸ್ತಾವಿಕ ವಾಗಿ ಮಾತನಾಡಿ ಶ್ರೀಗಳ ಈ ವಿಚಾರ ಕ್ರಾಂತಿಕಾರಿ ಬದಲಾವಣೆ ತರಲಿದ್ದರು. ಸಮಾಜಕ್ಕೆ ಕೂಡುಗೆ ನೀಡುವ ಇವರ ಚಿಂತನೆ ಪ್ರತಿಯೋಭರಿಗೂ ಮಾದರಿಯಾಗಲಿದ್ದು ಈ ಮಠದ ಬಕ್ತರಸೇವೆ ಅನೂಕರಣಿಯ ಎಂದರು.
ವೇದಿಕೆಯಲ್ಲಿ ಪ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಸುಧೀರ್ ಅವರಾದಿ ಹಾಗೂ ಸುಳೇಕಲ್ಲ ಗ್ರಾಮದ ಗಣ್ಯರು ಉಪಸ್ಥಿತರಿ ದ್ದರು. ರಕ್ತದಾನದ ತುಲಾಭಾರ ಕುರಿತು ಗ್ರಾಮದ ವಿವಿಧ ಗಣ್ಯರು ಸಲಹೆ ನೀಡಿದರು. ವಾಗೀಶ ಕಾರ್ಯಕ್ರಮ ನಿರ್ವಹಿಸಿದರು.
0 comments:
Post a Comment