ನಗರದ ಪ್ರವಾಸಿ ಮಂದಿರದಲ್ಲಿ ಎಸ್.ಎಫ್.ಐ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಖಾಸಗಿ ಶಾಲೆಗಳ ಶುಲ್ಕ ನೀತಿಯ ಅಪಾಯಗಳು ಎಂಬ ವಿಷಯದ ಮೇಲೆ ನಡೆದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ ಖಾಸಗಿ ಶಾಲೆಗಳಿಗೆ ಶುಲ್ಕ ನೀತಿ ಜಾರಿ ಮಾಡುವ ಮೂಲಕ ಸರಕಾರ ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯಗೊಳಿಸಲು ಮುಂದಾಗಿರುವುದು ಅಪಾಯಕಾರಿ ಸಂಗತಿ ಎಂದರು. ಮುಂದುವರಿದು ಮಾತನಾಡಿ ಶಾಲಾ ಶುಲ್ಕ ಮತ್ತು ಅಭಿವೃದ್ದಿ ಶುಲ್ಕ, ಬೋದಕೇತರ ಶುಲ್ಕ ಎಂದು ಮೂರು ರೀತಿಯಲ್ಲಿ ಶುಲ್ಕಗಳನ್ನು ಪಡೆಯುಲು ಹೇಳಲಾಗಿದೆ. ಅಭಿವೃದ್ಧಿ ಶುಲ್ಕವನ್ನು ಕಡ್ಡಾಯವಾಗಿ ಪಡೆಯಬೇಕು ಎನ್ನುವ ಮೂಲಕ ಕೋಠಾರಿ ಆಯೋಗದ ಶಿಫಾರಸ್ಸುಗಳನ್ನು ಉಲ್ಲಂಘಿಸಲಾಗಿದೆ ಎಂದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರ್, ಹುಬ್ಬಳ್ಳಿ, ಧಾರವಾಢ, ಮಹಾನಗರ ಪಾಲಿಕೆ, ಜಿಲ್ಲಾ ಕೇಂದ್ರ, ತಾಲ್ಲೂಕ ಕೇಂದ್ರ, ಗ್ರಾಮೀಣ ಭಾಗ ಎಂದು ವಿಂಗಡಿಸಿ ಶಾಲಾ ಶುಲ್ಕವನ್ನು ನಿಗದಿ ಮಾಡಲಾಗಿದೆ. ಮೂಲಸೌಲಭ್ಯಗಳ ಆಧಾರದಲ್ಲಿ ಎ.ಬಿ.ಸಿ.ಡಿ.ಎ ಎಂದು ಖಾಸಗಿ ಶಾಲೆಗಳನ್ನು ವಿಂಗಡಿಸಿ ಶ್ರೇಷ್ಟ ಮತ್ತು ಕನಿಷ್ಠ ಎಂಬ ಕಲ್ಪನೆಯನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುರುಕಲು ಮುಂದಾಗಿದೆ. ಅಚ್ಚರಿಯೇನಂದರೆ ಕರಡು ವರದಿಯ ಕೊನೆಯಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಹೆಚ್ಚಿನ ಸೌಲಭ್ಯ ನೀಡಿದರೆ ಪಾಲಕರೆ ಅನುಮತಿಯ ಮೇರೆಗೆ ಎಷ್ಟಾದರೂ ಹಣ ಪಡೆಯ ಬಹುದು ಎಂದು ಹೇಳಲಾಗಿದೆ. ಈಜುಕೊಳ, ಕುದರೆ ಸವಾರಿ, ಪ್ರವಾಸ ಇತ್ಯಾದಿಗಳಿಗೆ ಪ್ರತ್ಯೇಕ ಶುಲ್ಕ ಎಂದು ವಿವರಿಸಲಾಗಿದೆ. ಇದು ಅನಗತ್ಯ ಹೊರೆಯಾಗುವುದಿಲ್ಲವೆ? ಇದಿರಿಂದ ಖಾಸಗಿ ಶಾಲೆಗಳು ಹಣ ಉಳ್ಳವರಿಗೆ ಮಾತ್ರ ಶಿಕ್ಷಣ ಎಂದು ಹೇಳಲು ಮುಂದಾಗಲೂ ಬಹುದು! ಪೂರ್ವ ಪ್ರಾಥಮಿಕ ಶಾಲೆಗಳಿಗೆ ಯಾವುದೆ ನಿಯಮ ಮತ್ತು ಪಠ್ಯಕ್ರಮ ಇಲ್ಲವೆಂದು ಒಪ್ಪಕೊಂಡಿರುವ ಸರಕಾರ ಪೂರ್ವಪ್ರಾಥಮಿಕ ಶಾಲೆಗಳಿಗೆ ಶುಲ್ಕವನ್ನು ಯಾವ ಆಧಾರದಲ್ಲಿ ನಿಗದಿ ಮಾಡಿದೆ? ಇದು ಖಾಸಗಿ ಶಾಲೆಗಳಿಗೆ ಹಣ ಲೂಟಿ ಮಾಡಿಕೊಡಲು ದಾರಿ ಮಾಡಿಕೊಟ್ಟಂತಾಗುವುದಿಲ್ಲವೆ? ಶುಲ್ಕ ನಿಗದಿ, ಶಾಲೆಗಳ ಸೌಲಭ್ಯವನ್ನು, ಶಿಕ್ಷಕರ ವೇತನವನ್ನು, ಅವರ ಅರ್ಹತೆಯನ್ನು ಪರೀಕ್ಷೆ ಮಾಡುವವರು ಯಾರು? ತಪ್ಪೆಸಗಿದ ಖಾಸಗಿ ಶಾಲೆಗಳಿಗೆ ಕ್ರಮವೇನು? ಇದರ ಬಗ್ಗೆ ಉತ್ತರವೇ ಇಲ್ಲ. ಒಟ್ಟಾರೆ ಇದನ್ನೆಲ್ಲಾ ಗಮನಿಸಿದರೆ ರಾಜ್ಯ ಸರಕಾರ ಖಾಸಗಿ ಶಾಲೆಗಳಿಗೆ ನಾಯಕತ್ವನ್ನು ನೀಡಿ, ಶಿಕ್ಷಣ ಇಲಾಖೆ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮನಸೋ ಇಚ್ಚೆ ಹಣ ಪಡೆಯಬೇಕೆಂಬ ನಿಯಮವನ್ನು ರೂಪಿಸಿ ಕೊಡಲು ಹೊರಟಿದೆ. ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಾತೃಭಾಷೆಗೆ ದಕ್ಕೆ : ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ ಮಾತನಾಡಿ ಖಾಸಗಿ ಶಾಲೆಗಳ ಶುಲ್ಕ ನೀತಿ ಜಾರಿಯಾದರೆ ಮಾತೃಭಾಷೆಗೆ ದಕ್ಕೆಯಾಗಲಿದೆ ಎಂದರು. ಈಗಾಗಲೆ ಪಾಲಕರಿಂದ ಹೆಚ್ಚುವರಿ ಹಣ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಅಧಿಕೃತವಾಗಿ ಹಣ ಪಡೆದುಕೊಳ್ಳಿ ಎಂದರ ಖಾಸಗಿ ಶಿಕ್ಷಣ ಸಂಸ್ಥೆಗಳು ರೆಕ್ಕೆ ಬಲಿತ ಹಕ್ಕಿಗಳಾಗುತ್ತಿವೆ. ಇಂಗ್ಲೀಷ್ ಮಾಧ್ಯಮದ ಹೆಸರಿನಲ್ಲಿ ಶಿಕ್ಷಣ ಸಸಂಸ್ಥೆಗಳು ಲೂಟಿ ಮಾಡಲು ಮುಂದಾಗುವ ಸಾಧ್ಯತೆ ಇದ್ದು ಇದರಿಂದ ಮಾತೃಭಾಷಾ ಮಾಧ್ಯಮಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಹಾಗಾಗಿ ಈ ವರದಿಯನ್ನು ತಿರಸ್ಕರಿಸಭೆಕೆಂದರು. ಹಿರಿಯ ಸಾಹಿತಿಗಳಾದ ಎಚ್.ಎಸ್.ಪಾಟೀಲ್, ಮಹಾಂತೇಶ್ ಮಲ್ಲನಗೌಡರ್, ಪಾಲಕರ ಮುಖಂಡರಾದ ರಾಮಸೂರ‍್ಯ ಕಾಂಬ್ಳೆಕರ್, ಆಂಜನೇಯ್, ಸುಂಕಪ್ಪ ಗದಗ್, ಕಿರ್ಮಾನಿ, ಉಪನ್ಯಾಸಕರಾದ ಶಿವಪ್ರಸಾದ ಹಾದಿಮನಿ, ವಿರೇಶ್ ಮಾತನಾಡಿ ವರದಿಯನ್ನು ತಿರಸ್ಕರಿಸಲು ಪ್ರಭಲ ಚಳುವಳಿ ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿ ಮುನಿರಾಜು ಎಂ, ಎಸ್.ಎಫ್.ಐ ಮುಖಂಡರಾದ ದುರಗೇಶ್ ಡಗ್ಗಿ, ಗ್ಯಾನೇಶ್ ಕಡಗದ್, ಹನ್ಮಂತ ಭಜಂತ್ರಿ, ಮಂಜನಾಥ ಡಗ್ಗಿ, ಹನಮಂತ ಬಂಡಿಹರ‍್ಲಾಪುರ, ರಮೇಶ ನಾಯಕ್ ಹನಮೇಶ್ ರಾಠೋಡ ಮರಿನಾಗ್ ಸೇರಿದಂತೆ ಅನೇಕರಿದ್ದದರು.
ನಿರ್ಣಯಗಗಳು : ದುಂಡುಮೇಜಿನ ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
೧) ಕರಡು ವರದಿಯಲ್ಲಿರುವ ದೋಷಗಳನ್ನು ಸರಿ ಪಡಿಸಲು ಕೂಡಲೇ ಸರಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸುವುದು.
೨) ದಿನಾಂಕ ೨೧.೧.೨೦೧೪ ರಂದು ಕರಡು ವರದಿಯನ್ನು ಸುಟ್ಟು ಹಾಕುವ ಹೋರಾಟವನ್ನು ನಡೆಸುವುದು.
೩) ಪಾಲಕರ ಮಧ್ಯೆ ಜಾಗೃತಿಗಾಗಿ ೧ ಲಕ್ಷ ಕರಪತ್ರ ಹಂಚುವುದು.
0 comments:
Post a Comment