ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಇತ್ತೀಚಿಗೆ ತಮ್ಮ ವ್ಯಾಪ್ತಿಯ ಕಾಲೇಜಗಳಿಗೆ ಪರೀಕ್ಷಾ ಶುಲ್ಕ ತಗೆದುಕೊಳ್ಳಲು ಸೂಚಿಸಿದ್ದು, ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಆರ್ಥಿಕ ಪರಿಸ್ಥಿತಿ ಗಮನಿಸಲಾರದೇ ವಿಶ್ವವಿದ್ಯಾಲಯವು ಸರ್ಕಾರದ ಶುಲ್ಕ ವಿನಾಯತಿಯ ಆದೇಶವನ್ನು ಉಲ್ಲಂಘನೆ ಮಾಡಿ ತನ್ನ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಎಲ್ಲಾ ಕಾಲೇಜುಗಳಿಗೂ ಎಸ್.ಸಿ/ಎಸ್.ಟಿ/ಪ್ರ-೧/ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೊದಲನೇ, ಮೂರನೇ, ಐದನೇಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ೨೫೦.ರೂ ದಿಂದ ೬೫೦.ರೂ ರವರೆಗೂ ವಸೂಲಿ ಮಾಡುತ್ತಿರುವುದು ಖಂಡನಾರ್ಹ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕಡಿಮೆಯಿದ್ದು, ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಈ ವಿಶ್ವವಿದ್ಯಾಲಯವು ಈ ಭಾಗದ ಜನರ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳಲಾರದೇ ಹಾಗೂ ಬೇರೆ ವಿಶ್ವವಿದ್ಯಾಲಯಗಳಿಗಿಂತ ಐದುಪಟ್ಟು ಅಧಿಕ ಶುಲ್ಕ ವಸೂಲಿ ಮಾಡುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಆದ್ದರಿಂದ ಕೊಪ್ಪಳ ಮತ್ತು ಬಳ್ಳಾರಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಏರಿಕೆಯಾದ ಶುಲ್ಕವನ್ನು ಕಟ್ಟಬಾರದು ಮತ್ತು ಕಳೆದ ವರ್ಷ ಹೋರಾಟ ಮಾಡಿದ ನಂತರ ಶುಲ್ಕವನ್ನು ಅಂದಿನ ಕುಲಪತಿಗಳು ಕಡಿತ ಮಾಡಿದ್ದು ವಿ,ವಿ ತಿಳಿದುಕೊಳ್ಳಬೇಕು ಹಾಗೂ ಪರೀಕ್ಷಾ ಶುಲ್ಕ ಕೈಬಿಟ್ಟು ಕೇವಲ ಅಂಕಪಟ್ಟಿ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಬೇಕು ಮತ್ತು ರಜೆಗಳು ಬಂದಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಶುಲ್ಕವನ್ನು ಕಟ್ಟಿರುವುದಿಲ್ಲ ಕೂಡಲೇ ದಂಡರಹಿತ ಶುಲ್ಕದ ದಿನಾಂಕವನ್ನು ವಿಸ್ತರಿಸಬೇಕು. ಇಲ್ಲದಿದ್ದಲ್ಲಿ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆಂದು ಎಸ್.ಎಫ್.ಐ ಸಂಘಟನೆ ಎಚ್ಚರಿಸಿದೆ.
0 comments:
Post a Comment