PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳಿಂದ ಗಾಂಧೀಜಿ - ಶಾಸ್ತ್ರೀಜಿ ಜಯಂತಿ
ಸ್ವಚ್ಛತಾ ಆಂದೋಲನ ಮತ್ತು ಜನ ಜಾಗೃತಿ ಮೆರವಣಿಗೆ
ಕೊಪ್ಪಳ ೦೧: ಲಯನ್ಸ್ ಕ್ಲಬ್ ಕೊಪ್ಪಳ, ಮತ್ತು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕೊಪ್ಪಳ ಘಟಕ ಇವರ ಸಹಕಾರದಲ್ಲಿ ನಾಳೆ ದಿನಾಂಕ ೦೨/೧೦/೨೦೧೪ ರಂದು ಬೇಳಗ್ಗೆ ೦೮:೦೦ ಗಂಟೆಗೆ ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ. ಗಾಂಧೀಜಿ ಮತ್ತು ಶಾಸ್ತ್ರಿಜಿ ಭಾವಚಿತ್ರಕ್ಕೆ, ಪೂಜೆ ಮತ್ತು ಮಾಲಾರ್ಪಣೆಯ ನಂತರ ಸ್ವಾಮಿ ವಿವೇಕಾನಂದ ಶಾಲೆಯ ಕಬ್ಸ್, ಸ್ಕೌಟ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳಿಂದ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಮಕ್ಕಳಿಗೆ ಸುಸಜ್ಜಿತವಾದ ಮಾಸ್ಕ್, ಕೈ ಕವಚ ಮತ್ತು ಸಮವಸ್ತ್ರಗಳನ್ನು ಲಯನ್ಸ್ ಕ್ಲಬ್ ಮತ್ತು ಶಾಲೆಯ ವತಿಯಿಂದ ಒದಗಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಚೈತನ್ಯಾನಂದ ಸ್ವಾಮಿಜಿ, ಶ್ರೀ ರಾಮಕೃಷ್ಣ - ವಿವೇಕಾನಂದ ಆಶ್ರಮ, ಕೊಪ್ಪಳ ಇವರು ಸಾನಿಧ್ಯ ವಹಿಸುವರು. ಲಯನ್ ಶ್ರೀನಿವಾಸ ಗುಪ್ತಾ ಅಧ್ಯಕ್ಷರು ಲಯನ್ಸ್ ಕ್ಲಬ್ ಕೊಪ್ಪಳ, ಲಯನ್ ಲಲಿತ್ ಜೈನ್ ಕಾರ್ಯದರ್ಶಿಗಳು ಲಯನ್ಸ್ ಕ್ಲಬ್ ಕೊಪ್ಪಳ, ಲಯನ್ ವಿ.ಎಸ್. ಅಗಡಿ ಅಧ್ಯಕ್ಷರು ಶಾಲಾ ಆಢಳಿತ ಮಂಡಳಿ, ಲಯನ್ ಬಸವರಾಜ ಬಳ್ಳೊಳ್ಳಿ ಕಾರ್ಯದರ್ಶಿಗಳು ಶಾಲಾ ಆಢಳಿತ ಮಂಡಳಿ, ಪಿ.ಜಿ. ಪಾರ್ಥಸಾರಥಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ.ಕ.ರ.ಸಾ.ಸಂ. ಕೊಪ್ಪಳ ಘಟಕ, ಕೆ. ಬಸವರಾಜ ವಿಭಾಗೀಯ ವ್ಯವಸ್ಥಾಪಕರು, ಈ.ಕ.ರ.ಸಾ.ಸಂ. ಕೊಪ್ಪಳ ಘಟಕ ಹಾಗೂ ಎಲ್ಲ ಲಯನ್ಸ್ ಕ್ಲಬ್ ಸದಸ್ಯರು, ಶಾಲಾ ಪ್ರಾಚಾರ್ಯರಾದ ಎ. ಧನಂಜಯನ್ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸುವರು.
ಈ ಮೂಲಕ ಗಾಂಧೀಜಿ ಮತ್ತು ಶಾಸ್ತ್ರಿಜಿ ಜಯಂತಿಯನ್ನು ಸ್ವಚ್ಛತಾ ಆಂದೋಲನವನ್ನಾಗಿ ಆಚರಿಸಿ ಜನ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಸ್ವಚ್ಛತಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಆಂದೋಲದ ಬಿತ್ತಿ ಪತ್ರಗಳ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಲಾಗುವುದು.


Advertisement

0 comments:

Post a Comment

 
Top