ಕೊಪ್ಪಳ: ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಖಾಲಿ ಇರುವ ಅಂಗವಿಕಲರ ಕಲ್ಯಾಣ ಇಲಾಖೆಗೆ ಖಾಯಂ ಅಧಿಕಾರಿಗಳನ್ನು ನೇಮಿಸುವಂತೆ ಒಂದು ಅಂಗವಿಕಲ ಕಲ್ಯಾಣಾಧಿಕಾರಿಗಳ ಹುದ್ದೆಯನ್ನು ಸೃಷ್ಟಿಸಬೇಕು,ಸರ್ಕಾರಿ ಅಂಗವಿಕಲ ನೌಕರರರಿಗೆ ಸುಪ್ರೀಂ ಕೋರ್ಟನ ಆದೇಶದಂತೆ ಶೇಕಡಾ ೩ ರಷ್ಟು ಬಡ್ತಿಯಲ್ಲಿ ಮಿಸ ಹಾಗೂ ಅಂಗವಿಕಲರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಉಮಾಶ್ರೀಯವರಿಗೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಕೊಪ್ಪಳ ಜಿಲ್ಲೆಯ ಅಂಗವಿಕಲ ಕಲ್ಯಾಣ ಇಲಾಖೆಗೆ ಸುಮಾರು ಎರಡು ವರ್ಷದಿಂದ ಖಾಯಂ ಅಧಿಕಾರಿ ಇಲ್ಲದೇ ಅಂಗವಿಕಲರ ಅನೇಕ ಸಮಸ್ಯೆಗಳು ಪರಿಹಾರವಾಗದೆ ಹಾಗೇ ಉಳಿದಿವೆ.ಅಲ್ಲದೇ ಹಾಸನ ಜಿಲ್ಲೆ ಸೇರಿದಂತೆ ರಾಜ್ಯ ನಾನಾ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೇ ಖಾಯಂ ಅಧಿಕಾರಿಯನ್ನು ನೇಮಿಸಬೇಕು.ಪ್ರತಿ ತಾಲೂಕಿಗೆ ತಿಯನ್ನು ನೀಡುವುದನ್ನು ಶೀಘ್ರವೇ ಜಾರಿಗೊಳಿಸಬೇಕು,ನಿರುದ್ಯೋಗಿ ಅಂಗವಿಕಲರಿಗೆ ನೀಡಲಾಗುವ ರಿಯಾಯತಿ ದರದ ಬಸ್ಸ್ ಪಾಸಿನ ದರವನ್ನು ಹೆಚ್ಚಿಸಲಾಗಿದ್ದು ಇದರಿಂದ ನಿರುದ್ಯೋಗಿ ಅಂಗವಿಕಲರಿಗೆ ತುಂಬಾ ತೊಂದರೆಯಾಗುತ್ತಿದ್ದು ಹೆಚ್ಚಿಸಿರುವ ದರವನ್ನು ಕಡಿಮೆ ಮಾಡಬೇಕು,ವಿ.ಆರ್.ಡಬ್ಲೂ ಹಾಗೂ ಎಂ.ಆರ್.ಡಬ್ಲೂ ಗಳನ್ನು ಖಾಯಂಗೊಳಿಸಬೇಕು,ಕೊಪ್ಪಳ ಜಿಲ್ಲೆಯಲ್ಲಿನ ಅಂಗವಿಕಲರ ಪುನರ್ ವಸತಿ ಕೇಂದ್ರವನ್ನು ಉದ್ಘಾಟಿಸಲಾಗಿದೆ.ಆದರೆ ಕಾರ್ಯ ಇನ್ನೂ ಆರಂಭವಾಗಿಲ್ಲ ಎಂಬುದಾಗಿ ವಿವರಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಪುನರ್ ವಸತಿ ಕೆಂದ್ರವನ್ನು ಸಮರ್ಪಕ ರೀತಿಯಲ್ಲಿ ಪ್ರಾರಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಲ್ಲದೆ ಅಂಗವಿಲರ ರಿಯಾಯತಿ ದರದ ಪಾಸಿನ ದರವನ್ನು ಕಡಿಮೆ ಮಾಡುವ ವಿಚಾರ ಮುಂತಾದ ಎಲ್ಲಾ ಬೇಡಿಕೆಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಕ್ಷೇತ್ರ ಶಾಸಕರಾದ ರಾಘವೇಂದ್ರ ಹಿಟ್ನಾಳ,ಜಿಲ್ಲಾ ಪಂಚಾಯತ ಸಿ.ಇ.ಓ.ಕೃಷ್ಣಾ ಉದಪುಡಿ,ಶಿಕ್ಷಕರಾದ ಸುರೇಶ ಕುಂಬಾರ ಮುಂತಾದವರು ಹಾಜರಿದ್ದರು.
0 comments:
Post a Comment