ಕೊಪ್ಪಳ,ಸೆ.೨೩: ವಿವಿಧ ಸಮಾಜದ ಅಗತ್ಯ ವಸ್ತುಗಳ ತಯಾರಿಕೆ ಸೇರಿದಂತೆ ಶಿಲ್ಪಕಲೆ, ಬಡಗಿತನ, ಕಮ್ಮಾರಿಕೆ, ಅಕ್ಕಸಾಲಿಗರ ವಿವಿಧ ವಸ್ತುಗಳ ತಯಾರಿಕೆಗಳಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ಮಹಾತ್ಮಪೀಠ ಆಸ್ಥಾನ ಮಂಡಿತರಾದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು ಹೇಳಿದರು.
ಅವರು ನಗರದ ಸಿರಸಪ್ಪಯ್ಯ ಸ್ವಾಮಿ ಮಠದ ಆವರಣದಲ್ಲಿ ಇತ್ತಿಚಿಗೆ ಶ್ರೀ ವಿಶ್ವಕರ್ಮ ಸೇವಾ ಸಮಿತಿ ನಗರ ಘಟಕದಿಂದ ಶ್ರೀಮಾತೆ ಕಾಳಿಕಾದೇವಿ, ಶ್ರೀ ಸಿರಸಪ್ಪಯ್ಯ ಸ್ವಾಮಿ ಕತೃ ಗದ್ದುಗೆಗೆ ಅಭಿಷೇಕ ಹಾಗೂ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ವಿಶ್ವಕರ್ಮ ಸಮುದಾಯ ಮತ್ತು ಸಂಘಟನೆ ಅಭಿವೃದ್ದಿಗಾಗಿ ಶ್ರಮಿಸಬೇಕು. ಪ್ರತಿಯೊಬ್ಬರು ತಮ್ಮ ಸಮಾಜದ ಅಭಿವೃದ್ದಿ ಜೊತೆಗೆ ಇತರ ಹಿತ ಬಯಸುವುದು ಮುಖ್ಯ. ಈ ದೀಸೆಯಲ್ಲಿ ನಮ್ಮ ವಿಶ್ವಕರ್ಮ ಸಮಾಜ ಪ್ರತಿಯೊಬ್ಬ ಸಮಾಜ ಬಾಂಧವರು ತಮ್ಮ ಜೀವನ ಸಾಗಿಸುವುದರ ಜೊತೆಗೆ ಸಮಾಜದ ಹೇಳಿಗೆಗಾಗಿ ಒಗ್ಗಟ್ಟಾಗಿ ಶ್ರಮಿಸಬೇಕು. ಯಾವುದೇ ಸಮಾಜ ಅಭಿವೃದ್ದಿ ಹೊಂದಬೇಕಾದರೆ. ಶಿಕ್ಷಣ ಅತ್ಯವಶ್ಯಕವಾಗಿದೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಶಾಖಾ ಮಠದ ಲೆಕ್ಕಿಹಾಳದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು, ಮುದ್ದಾಬಳ್ಳಿಯ ಗುರುನಾಥ ಸ್ವಾಮಿಗಳು, ಗಿಣಗೇರಿಯ ನರಸಿಂಹ ದಿವಾಕರ ಸ್ವಾಮಿಗಳು, ಶ್ರೀಕಂಠ ಸ್ವಾಮಿಗಳು, ಗಿಣಗೇರಿಯ ಸುಬ್ಬಣ್ಣಾಚಾರ್ಯ ವಿದ್ಯಾನಗರ, ವಿಶ್ವಕರ್ಮ ಸೇವಾ ಸಮಿತಿಯ ನಗರ ಘಟಕದ ಅಧ್ಯಕ್ಷರಾದ ಮಂಜುನಾಥ ವಾಸಪ್ಪ ಬನ್ನಿಕೊಪ್ಪ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅಶೋಕ ವೇದಪಾಠಕ, ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶೇಖರಪ್ಪ ಬಡಿಗೇರ, ಗಂಗಾವತಿ ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರಭು ಗಂಗಪ್ಪ ಬಡಿಗೇರ, ಜಿಲ್ಲಾ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಜಿಲ್ಲಾ ವಕೀಲರ ಸಂಘದ ಮಾಜಿ ಉಪಾಧ್ಯಕ್ಷರಾದ ಐ.ವಿ.ಪತ್ತಾರ, ಕೊಪ್ಪಳ ತಾಲೂಕ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷರಾದ ಪಿ.ವಿಶ್ವನಾಥ, ವಿ.ವಿ.ಸ.ಸಂಘದ ವೀರಭದ್ರಪ್ಪ ಸೋ.ಜಂತಕಲ್, ವಿಶ್ವಕರ್ಮ ನಗರ ಘಟಕದ ಉಪಾಧ್ಯಕ್ಷ ಚಂದ್ರಶೇಖರ ಪತ್ತಾರ, ಕಾರ್ಯದರ್ಶಿ ರಮೇಶ ಅಕ್ಕಸಾಲಿ, ಉಪಕಾರ್ಯದರ್ಶಿ ಉಮೇಶ ಪತ್ತಾರ, ಸದಸ್ಯರಾದ ಕಾಶಿನಾಥ ಬಡಿಗೇರ, ಈರಪ್ಪ ಅಗಡಿ, ಮೌನೇಶ ಬನ್ನಿಮಟ್ಟಿ, ಈರಣ್ಣ ದೊತ್ರಗಾವಿ, ಸುರೇಶ ಬಡಿಗೇರ, ಭಾಸ್ಕರ ಅರ್ಕಸಾಲಿ, ಮಹಾಂತೇಶ ಕೆ.ಪತ್ತಾರ, ನಾಗಲಿಂಗಪ್ಪ ಬಡಿಗೇರ, ಮೌನೇಶ ಬಡಿಗೇರ, ಮಂಜುನಾಥ, ಪ್ರಭುರಾಜ ಕರ್ಕಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ವಿಜಯ ಭಾರತಿ ಪ್ರಾರ್ಥಿಸಿದರು. ಶ್ರೀನಿವಾಸ ಪಂಡಿತ ನಿರೂಪಿಸಿದರು. ಕೊನೆಯಲ್ಲಿ ಉಮೇಶ ಪತ್ತಾರ ವಂದನಾರ್ಪಣೆಗೈದರು.
0 comments:
Post a Comment