PLEASE LOGIN TO KANNADANET.COM FOR REGULAR NEWS-UPDATES

 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಗ್ರಾಮೀಣ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಯಲಬುರ್ಗಾ ತಾಲೂಕಿನ ರಾಜೂರು, ಹಿರೇಬಿಡನಾಳ ಮತ್ತು ಮುರಡಿ ಗ್ರಾಮ ಪಂಚಾಯತಿಗಳಲ್ಲಿ ರೋಜಗಾರ್ ದಿನಾಚರಣೆ ಆಚರಿಸಲಾಯಿತು.
  ಉದ್ಯೋಗಖಾತ್ರಿ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಯೂ ವರ್ಷಕ್ಕೆ ಕನಿಷ್ಟ 100 ದಿನ ಕೂಲಿ ಕೆಲಸ ಪಡೆಯಬೇಕೆಂಬ ಸದುದ್ದೇಶದಿಂದ ಭಾರತ ಸರ್ಕಾರ ಪ್ರತಿ ಗುರುವಾರ ರೋಜಗಾರ ದಿನ ಆಚರಿಸಲು ಆದೇಶಿಸಿದೆ. ಅದರಂತೆ  ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಕಾಯಕ ಸಂಘಗಳನ್ನು ರಚಿಸಲಾಗಿದ್ದು ಅದರಲ್ಲಿ ಕಾಯಕ ಬಂಧುಗಳನ್ನು ಆಯ್ಕೆ ಮಾಡಲಾಗಿದೆ ಕಾಯಕ ಬಂಧುಗಳ ಸಹಯೋಗದೊಂದಿಗೆ ಪ್ರತಿ ಗುರುವಾರ ನಮೂನೆ-6 ತೆಗೆದುಕೊಳ್ಳುವುದರ ಜೊತೆಗೆ ನಮೂನೆ-9 ಅನ್ನು ರೋಜಗಾರಿಗಳಗೆ ಪುನಃ ದಿನಾಂಕ ಸಹಿತ ವಿತರಣೆ ಮಾಡಲು ಆದೇಶಿಸಿದೆ.   ವೈಯಕ್ತಿಕ ಫಲಾನುಭವಿಗಳ ಸಸಿನೆಡುವ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು ಆ ಎಲ್ಲಾ ಫಲಾನುಭವಿಗಳನ್ನು ಸಸಿ ನೆಡುವಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿಯ ಸದಸ್ಯರು, ಹಾಗೂ ಕಾಯಕ ಬಂಧುಗಳ ಮುಖಾಂತರ ಪ್ರೇರೇಪಣೆ ಮಾಡಲಾಗುತ್ತಿದ್ದು ವೈಯಕ್ತಿಯ ಶೌಚಾಲಯ ನಿರ್ಮಾಣ ಮಾಡುವ ರೋಜಗಾರಿಗಳಿಗೆ ಯಾವುದೇ ತೊಂದರೆ ಇಲ್ಲದೆ ಕೂಲಿ ಹಣ ಸಂದಾಯ ಮಾಡುವಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಎಲ್ಲಾ ಗ್ರಾಮ ಪಂಚಾಯತಿಗಳಿಗೂ ಆದೇಶ ನೀಡಲಾಗಿದೆ ಇಂಥ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮುಖಾಂತರ ಜನಸಾಮಾನ್ಯರಿಗೆ ಮಾಹಿತಿ ನೀಡುವಲ್ಲಿ ಗ್ರಾಮ ಪಂಚಾಯತಿ ಮಹತ್ವದ ಪಾತ್ರ ವಹಿಸಬೇಕು ಎಂಧು ಗ್ರಾಮ ಪಂಚಾಯತಿಯ ಹಿರೇಬಿಡನಾಳ ಗ್ರಾ.ಪಂ. ಪಿ.ಡಿ.ಓ ಯಮನೂರಪ್ಪ ಗ್ರಾ.ಪಂ ಹಿರೇಬೀಡನಾಳ,  ರಾಜೂರು ಪಿಡಿಓ ಗವಿಸಿದ್ದಯ್ಯ ಗಂಧದ, ಮುರಡಿ ಗ್ರಾ.ಪಂ. ಪಿಡಿಓ ನಾಗರತ್ನ ಬಿ ಹಾಗೂ ತಾಲೂಕ ಐ.ಇ.ಸಿ ಸಂಯೋಜಕರು ರೋಜಗಾರ್ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top