: ನಾಳೆಯ ಸತ್ಪ್ರಜೆಗಳನ್ನು ನಿರ್ಮಿಸುವ ಶಿಕ್ಷಕರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ. ಪಠ್ಯೇತರ ಓದನ್ನು ಶಿಕ್ಷಕರು ಪ್ರೋತ್ಸಾಹಿಸಬೇಕು. ಸಿದ್ದಮಾದರಿಯ ಶಿಕ್ಷಣವನ್ನು ಮೀರಿ ಹೊಸತನ್ನು ಮಕ್ಕಳಲ್ಲಿ ಮೂಡಿಸಬೇಕು. ಶಿಕ್ಷಕ ದಾರಿ ತಪ್ಪಿದರೆ ಸಮಾಜವೇ ದಾರಿ ತಪ್ಪುತ್ತದೆ. ಉತ್ತಮ ಶಿಕ್ಷಕ ಉತ್ತಮ ಸಮಾಜ ನಿರ್ಮಾಣ ಮಾಡುತ್ತಾನೆ ಎಂದು ಸಾಹಿತಿ ಪ್ರಮೋದ ತುರ್ವಿಹಾಳ ಹೇಳಿದರು.
ಕಿನ್ನಾಳದ ಸೇವಾ ವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರಮೋದ ತುರ್ವಿಹಾಳರು ಶಿಕ್ಷಕರಿಗೆ ವೃತ್ತಿಯ ಬಗೆಗಿನ ಬದ್ದತೆ,ಗೌರವ ಅದರಾಚೆಗೆ ಸಮಾಜದೆಡೆಗಿನ ಜವಾಬ್ದಾರಿ ಮುಖ್ಯ. ಎಸ್.ರಾಧಾಕೃಷ್ಣನ್‌ರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ಮಾಡುವ ಮೂಲಕ ಶಿಕ್ಷಕರಿಗೆ ಗೌರವ ನೀಡುವಂತೆ ಮಾಡಿದರು. ಸಾಮಾಜಿಕ ಬದುಕಿಗೆ ಪೂರಕವಾದ ಶಿಕ್ಷಣದ ಮೂಲಕ ಮಕ್ಕಳನ್ನು ತಯಾರಿಸಬೇಕು. ಶಿಕ್ಷಕರನ್ನು ಈ ದಿನ ಮಾತ್ರವಲ್ಲ ನಿರಂತರವಾಗಿ ಗೌರವಿಸಬೇಕು. ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು. ಶಿಕ್ಷಕರಕ್ಕೆ ಕ್ರಿಯೇಟಿವಿಟಿ ಇರಬೇಕು. ನಮ್ಮ ಶಿಕ್ಷಣ ಮನುಷ್ಯತ್ವವನ್ನು ರೂಪಿಸುವಂತಾಗಬೇಕು. ಶಿಕ್ಷಕ ನಮ್ಮ ಸಾಮಾಜಿಕ ನಂಬಿಕೆಯ ಪ್ರತೀಕ ಎಂದು ಹೇಳಿದರು.
ಎಸ್.ರಾಧಾಕೃಷ್ಣನ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯ ಮೇಲಿದ್ದ ಶಿಕ್ಷಣ ಪ್ರೇಮಿ,ಮುಖಂಡ ಬಸವರಾಜ ಚಿಲವಾಡಗಿ ಮಾತನಾಡಿ ಶಿಕ್ಷಕರು ಸಮಾಜದ ಮುಕುಟದಂತೆ ಅವರಿಗೆ ಪ್ರಶಸ್ತಿ,ಬಹುಮಾನಗಳೇ ಮುಖ್ಯವಲ್ಲ. ಸಮಾಜ ಅವರಿಗೆ ಅದಕ್ಕೂ ಮೀರಿದ ಉನ್ನತ ಸ್ಥಾನ ನೀಡಿದೆ ಎಂದರು. ಇನ್ನೊರ್ವ ಅತಿಥಿ ಸಿರಾಜ್ ಬಿಸರಳ್ಳಿ ಮಾತನಾಡಿದರು. ಸಂಸ್ಥೆಯ ಎಲ್ಲ ಶಿಕ್ಷಕ,ಶಿಕ್ಷಕಿಯರಿಗೆ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಹೆಚ್.ವಿ.ರಾಜಾಬಕ್ಷಿ ವಹಿಸಿದ್ದರು. ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ‍್ಯಕ್ರಮದ ನಿರೂಪಣೆಯನ್ನು ಶ್ರೀಕಾಂತ ದೇಶಪಾಂಡೆ,ಸ್ವಾಗತವನ್ನು ದಾವಲಸಾಬ ಬೆಟಗೇರಿ,ವಂದನಾರ್ಪಣೆಯನ್ನು ದುರ್ಗಾ ಆರೇರ್ ನೆರವೇರಿಸಿದರು.
0 comments:
Post a Comment