ಕ್ಷೇತ್ರದ ಹಂದ್ರಾಳ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ, ವೈಯಕ್ತಿಕ ಶೌಚಾಲಯ ನಿರ್ಮಾಣ, ರಸ್ತೆ, ಚರಂಡಿ, ಅಂಗನವಾಡಿ ಕೇಂದ್ರಗಳ ನಿರ್ಮಾಣ ಮಾಡಲಾಗುವುದು. ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಾಲೂಕು ಅಧಿಕಾರಿಗಳಿಗೆ ಜನಸಾಮಾನ್ಯರ ಸಮಸ್ಯಗಳಿಗೆ ಸ್ಪಂದನೆ ಮಾಡಿ ಕೂಡಲೆ ಸಮಸ್ಯಗಳನ್ನು ಬಗೆಹರಿಸಿಕೊಡಬೇಕು, ಮಳೆಯಿಂದ ಮನೆ ಬಿದ್ದವರಿಗೆ ತಕ್ಷಣವೇ ಪರಿಹಾರ ನೀಡಬೇಕು ಯಾವುದೇ ನೆಪಗಳನ್ನು ನೀಡದೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.
ಈ ಸಂಧರ್ಭದಲ್ಲಿ ಶಿವಣ್ಣ ಹಂದ್ರಾಳ, ಫಕೀರೇಶ ವಕೀಲರು, ಪರಸಪ್ಪ ಶಾಹಪೂರು, ಬಸವರಾಜ ಗಡಾದ, ಬಸವರಾಜ ಮಟ್ಟಪ್ಪನ್ನವರ, ಶಂಕ್ರಪ್ಪ ದೇವರಮನಿ, ಹನಮವ್ವ ತಳವಾರ, ಹಾಗೂ ತಾಲೂಕು ಅಧಿಕಾರಿಗಳು ಗ್ರಾಮೀಣ ಠಾಣೆ ಸಿ.ಪಿ.ಐ. ಸತೀಶ ಪಾಟೀಲ ಉಪಸ್ಥಿತರಿದ್ದರು.
0 comments:
Post a Comment