PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಶಿಕ್ಷಕರು ಅಧ್ಯಯನಶೀಲ ಪ್ರವೃತ್ತಿಯನ್ನು ಬೆಳಸಿಕೊಳ್ಳುವಂತೆ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ    ಪೂಜಾರ ಹೇಳಿದರು.     ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶಾಂತಿ ನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೫ ದಿನಗಳ ನಲಿ-ಕಲಿ ಪುನಶ್ಚೇತನ ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುತ್ತ, ಶಿಕ್ಷಕರು ಸೇವೆಗೆ ಸೇರಿದ ನಂತರ ಪ್ರತಿದಿನ ಅಧ್ಯಯನ ಮಾಡುವಂತಹ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು.ಕೇವಲ ಪಾಟ ಬೋಧನೆಗೆ ಸಂಬಂದಿಸಿದಂತೆ ತಯಾರಿ ಮಾಡಿಕೊಳ್ಳುವಷ್ಟು ಅಧ್ಯಯನ ಮಾಡಿದರೆ ಸಾಲದು,ಇದರಿಂದ ತರಗತಿಯಲ್ಲಿ ಮಕ್ಕಳಿಗೆ ಹೆಚ್ಚಿನ ವಿಷಯ ಹೇಳಲು ಸಾದ್ಯವಾಗುವುದಿಲ್ಲ.ಪ್ರತಿದಿನದ ಪಾಠ ಬೋಧನೆಯ ವಿಷಯದ ಜೊತೆಯಲ್ಲಿ ವಿಭಿನ್ನವಾದ ಸಾಮಾನ್ಯ ಜ್ಞಾನಕ್ಕೆ ಸಂಬಂದಿಸಿದ್ದು,ಹಾಡು,ಕಥೆ ಮುಂತಾದ ಪುಸ್ತಕಗಳನ್ನು ಅಧ್ಯಯನ ಮಾಡುವಂಹ ಪ್ರವೃತ್ತಿಯನ್ನು ಪ್ರತಿಯೊಬ್ಬ ಶಿಕ್ಷಕರು ಅಳವಡಿಸಿಕೊಳ್ಳಬೇಕು.ಅಂದಾಗ ಮಾತ್ರ ಮಕ್ಕಳ ಮಾನಸಿಕ ಮಟ್ಟಕ್ಕೆ ಇಳಿದು ಪಾಠ ಬೋಧನೆಯನ್ನು ಮಾಡುವುದರ ಜೊತೆಗೆ ತರಗತಿಯನ್ನು  ಸಂತಸದಾಯಕ ಕಲಿಕಾ ವಾತಾವರಣ ಉಂಟು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
 ಪ್ರಾಸ್ತಾವಿಕವಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶರಣಪ್ಪ ಗೌರಿಪುರ ಮಾತನಾಡಿದರು.ಕೊಪ್ಪಳ ವಲಯ ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ ಮಾತನಾಡಿ,ಸಮಾಜವು ಸದಾ ಬದಲಾವಣೆಯನ್ನು ಹೊಂದುತ್ತಿರುತ್ತದೆ,ಅಂತಹ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕಾದರೆ ನಮ್ಮ ಶಿಕ್ಷಣ ರಂಗದಲ್ಲಿ ಹೊಸ ಹೊಸ ಬೋಧನಾ ತಂತ್ರ ಹಾಗೂ ವಿಧಾನವನ್ನು ಅಳವಡಿಸಿಕೊಳ್ಳಬೇಕು.ನವೀನ ರೀತಿಯ ವಿಷಯಗಳ ಕಲಿಕೆಗೆ ತರಬೇತಿಗಳ ಅವಶ್ಯವಿದೆ ಎಂದು ಹೇಳಿದರು.
       ಕಾರ್ಯಕ್ರಮದ ಶಿಕ್ಷಣ ಸಂಯೋಜಕರಾದ ಬಸಪ್ಪ ದೇವರಮನಿ,ಹನುಂತಪ್ಪ ನಾಯಕ,ಶ್ರೀನಿವಾಸ.ಎಸ್.ಪಿ.,ನಲಿ-ಕಲಿ ತರಬೇತಿಯ ಮೇಲ್ವೆಚಾರಕರಾದ ಲೊಕೇಶ ಶಾಂತಿ ನಿಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಎಂ.ಕೆ.ಹಿರೇಮಠ ಇತರರು ಭಾಗವಹಿಸಿದ್ದರು.ಸಿ.ಆರ್.ಪಿ. ದ್ಯಾಮಣ್ಣ ಮುರಡಿ ಕಾರ್ಯಕ್ರಮವನ್ನು ನಿರೂಪಿಸಿದರು.ಸಿ.ಆರ್.ಪಿ. ಸುರೇಶ ಸ್ವಾಗತಿಸಿ,ಮಹೇಶ ಸದ್ರಿ ವಂದಿಸಿದರು.

Advertisement

0 comments:

Post a Comment

 
Top