PLEASE LOGIN TO KANNADANET.COM FOR REGULAR NEWS-UPDATES


  ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನವತಿಯಿಂದ ಪ್ರತಿ ಜಿಲ್ಲೆಯಲ್ಲೂ ಜಾನಪದ ಅಧ್ಯಯನ ಕೇಂದ್ರಗಳನ್ನು ನಿರ್ಮಿಸಬೇಕು. ಪಿಆರ್‌ಟಿ ಕಲಾ ಸಂಭ್ರಮ ನಾಡಿನಾದ್ಯಾಂತ ನಡೆಯುವಂತಾಗಬೇಕು. ಅದಕ್ಕೆ ಬೇಕಾದ ಪೂರಕ ಸಹಕಾರವನ್ನು ಸರ್ಕಾರ ಮೂಲಕ ನೀಡಲಾಗುವುದು ಎಂದು ಸಹಕಾರ ಸಚಿವ ಮಹದೇವ ಪ್ರಸಾದ್ ಹೇಳಿದರು.
ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಆವರಣದಲ್ಲಿ ನಡೆಯುತ್ತಿರುವ ಪಿಆರ್‌ಟಿ ಕಲಾ ಸಂಭ್ರಮದ ಎರಡನೇ ದಿನದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಸಿ ಮಾತನಾಡಿದರು.ಪಿಆರ್‌ಟಿ ಕಲಾ ಸಂಭ್ರಮವನ್ನು ಎಲ್ಲರೂ ತಮ್ಮ ಹಬ್ಬದಂತೆ ಆಚರಿಸುತ್ತರುವುದು ಸಂತಸದ ವಿಷಯ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡುವಲ್ಲಿ ಕಲಾವಿದ ಪಿ. ಆರ್. ತಿಪ್ಪೇಸ್ವಾಮಿ ಅವರು ಯಶಸ್ವಿಯಾಗಿದ್ದಾರೆ. ಅದೇ ರೀತಿ ಇಂದು ಕಲೆ ಎಂಬುದು ದೂರಾಗುತ್ತಿದ್ದು ಪೋಷಕರು ತಮ್ಮ ಮಕ್ಕಳಲ್ಲಿ ಕಲಾ ಪ್ರವೃತಿಯನ್ನು ರೂಢಿಸಬೇಕೆಂದರು.
 ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಮಾತನಾಡಿ, ಇಂದು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ ಇದನ್ನು ದೌರ್ಜನ್ಯ ನಿಯಂತ್ರಣಕ್ಕಾಗಿ ಕಲಾವಿದರು ಕಲೆಗಳ ಮೂಲಕ ಜಾಗೃತಿ ಮೂಡಿಸಬೇಕು. ಏಕೆಂದರೆ ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಈ ಹಿನ್ನೆಲೆಯಲ್ಲಿ ಚಿತ್ರಗಳ ಮೂಲಕ ಸಮಾಜಿಕ ಕಳಕಳಿ ಬಿತ್ತರಿಸಬೇಕೆಂದರು.
ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ ದಯಾನಂದ್ ಮಾತನಾಡಿ , ಇಂತಹ ಕಾರ್ಯಕ್ರಮಗಳ ಮೂಲಕ ನಾಡಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೋರಿಸಬಹುದು ನಿಜಕ್ಕೂ  ಇಲ್ಲಿ ಹಿರಿಯ ಮತ್ತು  ಕಿರಿಯ ಕಲಾವಿದ ಸಂಗಮ ಕಂಡ ಸಂತಸವಾಗುತ್ತಿದೆ. ಮಕ್ಕಳ ಪ್ರತಿಭೆಗೆ ಪಾಲಕರು ನೀರೆರೆಯಬೇಕುಎಂದರು.
ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ನಿರ್ದೇಶಕರಾದ ಬಾಬುರಾವ್ ಮಾತನಾಡಿ, ನಾವು ಪಿಆರ್‌ಟಿ ಅವರೊಂದಿಗೆ ಮನೆ ಮನೆ ಅಲೆದಿದ್ದೇವೆ. ಊರುರು ಅಲೆದು ಜಾನಪದ ವಸ್ತುಗಳ ಸಂಗ್ರಹಿಸಿದ್ದೇವೆ.  ಈ ಕಲಾನಿಕೇತ ಇಂದು ಅವರ ತಪಸ್ಸಿನಿಂದ ಆಗಿದೆ. ಹಲವೆಡೆ ವಸ್ತು ಸಂಗ್ರಹಾಲಯ ನಿರ್ಮಿಸಿದ್ದು ನಾವುಇನ್ನೂ ಅದನ್ನು ಕಾಪಾಡಬೇಕು ಎಂದರು.
ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ,ವಿಶ್ರಾಂತ ಕಾರ್ಯಪಾಲಕ ಅಭಿಯಂತರ ಲಿಂಗಪ್ಪ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ, ಕಾರ್ಯದರ್ಶಿ ಕೆ.ಸಿ ಮಹದೇವ ಶೆಟ್ಟಿ, ಕೋಶಾಧ್ಯಕ್ಷ ಪ್ರೋ ಎಚ್.ಎಂ ಪರಮೇಶ್ವರಯ್ಯ, ಸಂಚಾಲಕರಾದ ರುದ್ರಣ್ಣ ಹರ್ತಿಕೋಟೆ ಉಪಸ್ಥಿತರಿದ್ದರು.

Advertisement

0 comments:

Post a Comment

 
Top