ಮುನಿರಾಬಾದ ೨೧: ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಸುರಭಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಮುನಿರಾಬಾದ (ಆರ್.ಎಸ್.) ಇದರ ಪೌರತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನಾ ಭಾಷಣ ಮಾಡಿದ ಮಾಜಿ ಜಿ.ಪಂ.ಅಧ್ಯಕ್ಷರಾದ ಟಿ.ಜನಾರ್ದನಾ ಹುಲಗಿ ಇವರು ಮಾತನಾಡುತ್ತಾ ಶಿಕ್ಷಕರು ಉತ್ತಮ ಸಮಾಜ ನಿರ್ವಹಿಸುವಲ್ಲಿ ಪ್ರಮುಖ ಜವಾಬ್ದಾರಿ ಇದೆ ತಿಳಿಸಿ ಗ್ರಾಮೀಣ ಭಾಗದಲ್ಲಿ ಈ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಪ್ರಾರಂಭಿಸಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಅನೂಕೂಲ ಕಲ್ಪಿಸಿದೆ ಎಂದು ಅವರು ಸಂಸ್ಥೆಯನ್ನು ಶ್ಲಾಘಿಸಿದರು.
ಪ್ರಾಸ್ತಿವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರದಾನ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಾ.ಎಸ್.ಹಿರೇಮಠರವರು ಸಂಸ್ಥೆ ಬೆಳೆದು ಬಂದ ಬಗೆಯನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸಿದ್ದಲಿಂಗಯ್ಯ.ಎಚ್.ಹಿರೇಮಠ ಮಾತನಾಡುತ್ತಾ ಸುರಭಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯವನ್ನು ಹುಲಗಿ ಗ್ರಾಮದಲ್ಲಿ ಪ್ರಾರಂಭಿಸಿದಾಗಿನಿಂದ ಪ್ರತಿವರ್ಷವು ಸಹ ಉತ್ತಮ ಫಲಿತಾಂಶ ನೀಡುತ್ತಿರುವ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಶರಣಪ್ಪ, ಪ್ರಾಚಾರ್ಯರಾದ ಸಿದ್ದಲಿಂಗಸ್ವಾಮಿ ಚಕ್ಕಡಿ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಪ್ರಶಿಕ್ಷಣಾರ್ಥಿಗಳಾದ ಉಳ್ಯಮ್ಮ ಮತ್ತು ದೀಪಾ ಹಿಟ್ನಾಳ ನಿರ್ವಹಿಸಿದರು ವಂದನಾರ್ಪಣೆಯನ್ನು ದೇವಮ್ಮ ಬೈಯ್ಯಾಪುರ ವಂದನೆ ಗೈಯುವದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯವಾಯಿತು.
0 comments:
Post a Comment