ಮುನಿರಾಬಾದ:ವಿನೂತನ ಶಿಕ್ಷಣ ಸೇವಾ ಸಂಸ್ಥೆಯು ಗ್ರಾಮಾಂತರ ಭಾಗದಲ್ಲಿ ಮಹಿಳೆಯರಿಗಾಗಿ ಈ ಶಿಕ್ಷಣ ಮಹಾವಿದ್ಯಾಲಯವನ್ನು ಪ್ರಾರಂಭಿಸಿ ಉತ್ತಮ ಫಲಿತಾಂಶ ನೀಡುವಲ್ಲಿ ಗಣನೀಯ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ತಿಳಿಸಿದರು.
ಅವರು ಮುನಿರಾಬಾದ ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಸುರಭಿ ಶಿಕ್ಷಣ ಮಹಾವಿದ್ಯಾಲಯದ ಮೂರನೇ ದಿನದ ಪೌರತ್ವ ತರಬೇತಿ ಶಿಬಿರದ ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿ ಸನ್ಮಾನ ಸ್ವಿಕರಿಸಿ ಅವರು ಮಾತನಾಡುತ್ತಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿಯುತ್ತಿರುವ ಸಂಸ್ಥೆಗೆ ಸದಾ ತಮ್ಮ ಸಹಕಾರ ಇರುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಾ ಹಿರೇಮಠ ಅವರು ಸಂಸ್ಥೆಯ ಬೆಳವಣಿಗೆಯಲ್ಲಿ ಸರ್ವರ ಸಹಕಾರವನ್ನು ನೆನೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಿದ್ದಲಿಂಗಯ್ಯ ಹಿರೇಮಠ ಅವರು ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಜಿ.ಪ ಸದಸ್ಯರಾದ ರಮೇಶ ಹಿಟ್ನಾಳ, ಈರಪ್ಪ ಕುಡಗುಂಟಿ, ಗ್ರಾ.ಪಂ. ಸದಸ್ಯರಾದ ಹುಲಗಪ್ಪ, ಪ್ರಾಚಾರ್ಯರಾದ ಸಿದ್ದಲಿಂಗಸ್ವಾಮಿ ಚಕ್ಕಡಿ ಮೊದಲಾದವರು ಉಪಸ್ಥಿತರಿದ್ದರು.ಪ್ರಶಿಕ್ಷಣಾರ್ಥಿಗಳಾದ ಕು. ಸುನಿತಾ ಮತ್ತು ದೇವಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 comments:
Post a Comment