PLEASE LOGIN TO KANNADANET.COM FOR REGULAR NEWS-UPDATES

 ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಶಿಕ್ಷಣದ ಅವಶ್ಯಕತೆ ಹೆಚ್ಚಿದ್ದು, ಶಿಕ್ಷಣದಿಂದ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಹಲಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಸರ್ವಶಿಕ್ಷಣ ಅಭಿಯಾನದಲ್ಲಿ ಶಾಲಾ ಕೊಠಡಿ ಮತ್ತು ಕಂಪೌಂಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ
ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ, ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಯ ಜೀವನ ವಿಕಾಸವಾಗುದರೊಂದಿಗೆ ಸಮಾಜದ ಪ್ರಗತಿಯೂ ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ತಮ್ಮದೆ ಸಾಧನೆ ತೋರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸನ್ಮಾನ: ಇದೇ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಶಾಲಾ ಸುಧಾರಣಾ ಸಮಿತಿವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ದೇವಪ್ಪ ಗುಡ್ಲಾನೂರ, ತಾ.ಪಂ.ಮಾಜಿ ಸದಸ್ಯ ಮಹಾಂತೇಶ ಮೈನಳ್ಳಿ, ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ ಮ್ಯಾಗಳಮನಿ, ಉಪಾಧ್ಯಕ್ಷೆ ಸುಜಾತ ತಳವಾರ, ಎಸ್‌ಡಿಎಂಸಿ ಅಧ್ಯಕ್ಷರಾದ ಹಾಲಪ್ಪ ನಾಗರಳ್ಳಿ, ಹುಚ್ಚಪ್ಪ ಮೊರಗೇರಿ, ಹೊನ್ನಪ್ಪ ಅಬ್ಬಿಗೇರಿ, ಬಿಇಓ ಉಮೇಶ ಪೂಜಾರ, ಶಾಲಾ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಅಡವಿ, ಗ್ರಾ.ಪಂ.ಸದಸ್ಯರಾದ ಶರಣಪ್ಪ ಚಿಂತಾಮಣಿ, ಕರಿಯಪ್ಪ ಹಳ್ಳಿಕೇರಿ, ಯಮನೂರಪ್ಪ ಹಳ್ಳಿಕೇರಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಕುಬೇರಪ್ಪ ಗೊರವರ, ಉಪಾಧ್ಯಕ್ಷ ದೇವಪ್ಪ ದದೇಗಲ್, ನಿರ್ದೇಶಕ ಹನುಮಂತ ಹಳ್ಳಿಕೇರಿ, ಎಸ್‌ಡಿಎಂಸಿ ಸದಸ್ಯರಾದ ದೇವಪ್ಪ ಹಳ್ಳಿಕೇರಿ, ಪರಮೇಶಗೌಡ ಪಾಟೀಲ್, ಶಿವಪ್ಪ ಗುಡ್ಲಾನೂರ, ಶರಣಪ್ಪ ತಳವಾರ ಮತ್ತಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top