- ಗೊಂಡಬಾಳ
ಕೊಪ್ಪಳ, ಸೆ. ೬. ನಮ್ಮ ಪರಿಸರ ಶುದ್ಧವಾಗಿದ್ದರೆ ನಮ್ಮ ಆರೋಗ್ಯ ಸಹ ಉತ್ತಮವಾಗಿರುತ್ತೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ನಗರದ ಗಾಂಧಿನಗರ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಅಲ್ಲಿನ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ನೀಡಲು ತಮ್ಮ ಪರಿಸರ ಹಾಗೂ ಮನೆಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಜೊತೆಗೆ ಮಕ್ಕಳನ್ನು ಸ್ವಚ್ಛವಾಗಿ ಇರುವಂತೆ ಎಚ್ಚರಿಕೆವಹಿಸಬೇಕು ಅದರಿಂದ ಆಸ್ಪತ್ರೆಗೆ ಮಾಡುವ ಖರ್ಚನ್ನು ತಪ್ಪಿಸಬಹುದು ಎಂದ ಅವರು ಪರಿಸರ ಉಳಿಸಲು ಗಿಡಮರಗಳನ್ನು ಬೆಳೆಸಬೇಕು ಎಂದು ಸಹ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಶಿಕ್ಷಕ ಶರಣಬಸನಗೌಡ ಪಾಟೀಲ, ಗಾಂಧಿನಗರ ಇಂದು ಸ್ಲಂ ಎಂದು ಕರೆಸಿಕೊಳ್ಳುತ್ತಿದೆ, ಕಳೆದ ಒಂದು ದಶಕದಲ್ಲಿ ಬದಲಾವಣೆ ಕಂಡಿರುವ ವಾರ್ಡ ಈಗ ವೇಗ ಪಡೆದುಕೊಳ್ಳಬೇಕು, ಇಲ್ಲಿನ ಜನರು ಮಿತ ಸಂತಾನದ ಕಡೆಗೆ ಗಮನ ಕೊಡಬೇಕು ಎಂದು ಸಲಹೆ ನೀಡಿದ ಅವರು, ಶಾಲೆಯನ್ನು ಸುಂದರವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಮಕ್ಕಳೀಗೆ ಉತ್ತಮ ಶಿಕ್ಷಣ ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವದು ಅಗತ್ಯ ಎಂದರು. ನಗರಸಭೆ ಸದಸ್ಯೆ ಜನಾಬಾಯಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಲತಾ ಏಳುಬಾವಿ ಅಧ್ಯಕ್ಷತೆವಹಿಸಿ ಮಾತನಾಡಿದರು. ವೇದಿಕಯಲ್ಲಿ ಪತ್ರಕರ್ತ ಪರಮಾನಂದ ಯಾಳಗಿ, ಎಸ್‌ಕೆಡಿಆರ್‌ಡಿಪಿ ಮ್ಯಾನೇಜರ್ ಸಾಗರ, ಹನುಮಂತಪ್ಪ ಚಿಂತಾಮಣಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಪರಿಸರದ ಕುರಿತು ಕಿರುನಾಟಕ ಪ್ರದರ್ಶನ ಮಾಡಲಾಯಿತು. ಶಿವಲೀಲಾ ಸಂಗಡಿಗರು ಪ್ರಾರ್ಥಿಸಿದರು, ಸೇವಾ ಪ್ರತಿನಿಧಿ ಗಂಗಮ್ಮ ಸ್ವಾಗತಿಸಿದರು, ಸಂಸ್ಥೆಯ ಮೇಲ್ವಿಚಾರಕ ರಾಘವೇಂದ್ರ ಎಸ್. ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿದ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.
0 comments:
Post a Comment