PLEASE LOGIN TO KANNADANET.COM FOR REGULAR NEWS-UPDATES

ರಂಗಭೂಮಿ ನೈಜ ಕಲೆ. ಪ್ರೇಕ್ಷಕ ಮತ್ತು ನೇರಾ ನೇರ ಸಂಬಂಧಕಲ್ಪಿಸುತ್ತದೆ. ಸಮಾಜದ ಓರೆ-ಕೋರೆಗಳನ್ನು ನೇರವಾಗಿ ತಿಳಿಸುತ್ತದೆ ಎಂದು ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾದ ಶೇಖಮಾಸ್ತರ್ ಅಭಿಪ್ರಾಯಪಟ್ಟರು. ಅವರು ನಗರದ ಸಾಹಿತ್ಯಭವನದಲ್ಲಿ ನಾಟಕ ಅಕಾಡಮಿ ಬೆಂಗಳೂರು ಇವರ ಸಹಯೋಗದಲ್ಲಿ ಶಿಕ್ಷಕರ ಕಲಾವೃಂದದಿಂದ ಆಯೋಜಿಸಿದ್ದ ಸಿಂಹಾಸನ ಖಾಲಿ ಇದೆ ನಾಟಕ ಉದ್ಘಾಟಿಸಿ ಮಾತನಾಡಿದರು.



ಅಧ್ಯಕ್ಷತೆವಹಿಸಿದ್ದ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಂಜುನಾಥ ಬಿ, ಮಾತನಾಡಿ, ರಂಗಕಲೆ ಇಂದು ದೃಶ್ಯ ಮತ್ತು ಸಿನಿಮಾ ಮಾಧ್ಯಮಗಳಿಂದ ಹಿನ್ನೆಡೆ ಅನುಭವಿಸುತ್ತಿದ್ದು, ಶಿಕ್ಷಕರ ಕಲಾವೃಂದದವರು ರಂಗ ಕಲೆ ಆಯ್ಕೆ ಮಾಡಿಕೊಂಡು ಹಲವಾರು ನಾಟಕಗಳನ್ನ ಪ್ರದರ್ಶಿಸುತ್ತಾ ಬರುತ್ತಿರುವುದು ಶ್ಲಾಘನೀಯ. 
ವೇದಿಕೆಯ ಮೇಲೆ ಬಿ,ಇ,ಓ ಉಮೇಶ ಪೂಜಾರ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಸುಭಾಷರಡ್ಡಿ, ಪದಾಧಿಕಾರಿಗಳಾದ ಮಹೇಶ ಟಂಕಸಾಲಿ, ಸಾಹಿತಿ ವಿಠ್ಠಪ್ಪ ಗೊರಂಟ್ಲಿ, ಮೈಸೂರು ವಿ.ವಿ ವಿಶ್ರಾಂತ ಪ್ರಾಧ್ಯಾಪಕ ತಿಪ್ಪೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ರಮೇಶ ಬಿ ಸ್ವಾಗತಿಸಿದರು. ವಿರೇಶ ಮೇಟಿ ಕಾರ್ಯಕ್ರಮ ನಿರೂಪಿಸಿದರು. ವೀರೇಶ ಹುಲ್ಲೂರು ವಂದಿಸಿದರು.

Advertisement

0 comments:

Post a Comment

 
Top