ಅನ್ನದಾನ ರಕ್ತದಾನ ಎಲ್ಲಾ ದಾನಗಳಲ್ಲಿಯೇ ಶ್ರೇಷ್ಠವಾದ ದಾನವಾಗಿದ್ದು ರಕ್ತದಾನ ಮಾಡುವುದರಮೂಲಕ ಒಂದು ಜೀವ ಉಳಿಸುವಂತ ಪುಣ್ಯದ ಕೆಲಸ ಮಾಡಲು ಯುವಕರು ಮುಂದಾಗಬೇಕು ಏಕೆಂದರೆ ರಕ್ತದಾನ ಶ್ರೇಷ್ಠವಾದ ದಾನವಾಗಿದೆ ಇದರಿಂದ ಒಂದು ಜೀವ ಉಳಿಸುವಂತಹ ಪುಣ್ಯ ಸಿಗುತ್ತದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಜಿ.ಸುರೇಶ್ ದೇಸಾಯಿ ಹೇಳಿದರು.
ಅವರು ಕೊಪ್ಪಳನಗರದ ಬಿ.ಟಿ.ಪಾಟೀಲ್ ನಗರದಲ್ಲಿ ಗೌರಿಸುತ ಮಿತ್ರಮಂಡಳಿವತಿಯಿಂದ ಗೌರಿ ಗಣೇಶ ಚತುರ್ಥಿ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬ್ಲಡ್‌ಬ್ಯಾಂಕ್ ಹಾಗೂ ಗೌರಿಸುತ ಮಿತ್ರಮಂಡಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅರಿಹಂತ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಎಲ್ಲಾ ದಾನಗಳಲ್ಲಿ ರಕ್ತದಾನ ಬಹಳಷ್ಟು ಮಹತ್ವ ಪಡೆದುಕೊಂಡಿದೆ ಯುವಕರು ಇಂಥಹ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಮಾಡಬೇಕು ಇದು ತಮ್ಮ ಆರೋಗ್ಯಕ್ಕೂ ಕೂಡಾ ಒಳ್ಳೆಯದು ಎಂದ ಅವರು ಆರೋಗ್ಯವೇ ಭಾಗ್ಯ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ರಕ್ತವನ್ನು ದಾನಮಾಡಿ ಒಂದು ಜೀವ ಉಳಿಸಿ ಪುಣ್ಯ ಗಳಿಸಿಕೊಳ್ಳಲು ಇಂತಹ ಶಿಬಿರಗಳು ಅತ್ಯಂತ ಸಹಕಾರಿಯಾಗಿವೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಜಿ.ಸುರೇಶ್ ದೇಸಾಯಿ ಹೇಳಿದರು.
ಸಮಾರಂಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಕಾಂತ ಗುಡಿ, ಸಂತೋಷ ದೇಶಪಾಂಡೆ, ಗೌರಿಸುತ ಮಿತ್ರಮಂಡಳಿಯ ಪದಾಧಿಕಾರಿಗಳು ಹಾಗೂ ಲಲಿತ್ ಭಂಡಾರಿ, ರಾಜೀವ ಬಗಾಡೆ, ಸುನೀಲ್ ದೇಶಮುಖ, ಅನೀಲ್ ಜೋಪ್ರಾ, ಶ್ರಾವಣರಾಜ್ ಪುರೋಹಿತ್, ದೇವರಾಜ ಮಡಿವಾಳರ್, ದಯಾ ಖೋಡೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಗೌರಿಸುತ ಮಿತ್ರಮಂಡಳಿಯ ಗಣೇಶೋತ್ಸವ ಆಚರಣೆ
ಕೊಪ್ಪಳ,ಸೆ,೦೧: ಗೌರಿ ಗಣೇಶ ಚತುರ್ಥಿಯ ಪ್ರಯುಕ್ತ ನಗರದ ಬಿ.ಟಿ.ಪಾಟೀಲ್ ನಗರದಲ್ಲಿ ಗೌರಿಸುತ ಮಿತ್ರಮಂಡಳಿ ಪ್ರತಿಷ್ಠಾಪಿತ ಗಣೇಶ ಮೂರ್ತಿಯ ಸ್ಥಳಕ್ಕೆ ಪ್ರತಿದಿನ ಸಂಜೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿ ಸಾರ್ವಜನಿಕ ಪುರುಷ, ಮಹಿಳೆಯರು ಭೇಟಿಮಾಡಿ ದರ್ಶನ ಪಡೆಯುತ್ತಿದ್ದಾರೆ.
ಸೋಮವಾರದಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಸುರೇಶ ದೇಸಾಯಿ ನೇತೃತ್ವದಲ್ಲಿ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿತ ಸ್ಥಳಕ್ಕೆ ಭೇಟಿಮಾಡಿ ದರ್ಶನ ಪಡೆದುಕೊಂಡರು. ಪ್ರತಿವರ್ಷದಂತೆ ಈ ವರ್ಷವೂಸಹ ಆಕರ್ಷಕವಾಗಿ ಮೂರ್ತಿಪ್ರತಿಷ್ಠಾಪನೆ ಮಾಡಲಾಗಿದ್ದು ಈ ಸಂದರ್ಭದಲ್ಲಿ ಅವರೊಂದಿಗೆ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಕಾಂತ ಗುಡಿ, ಸಂತೋಷ ದೇಶಪಾಂಡೆ, ಗೌರಿಸುತ ಮಿತ್ರಮಂಡಳಿಯ ಪದಾಧಿಕಾರಿಗಳು ಹಾಗೂ ಲಲಿತ್ ಬಂಡಾರಿ, ರಾಜೀವ ಬಗಾಡೆ, ಸುನೀಲ್ ದೇಶಮುಖ, ಅನೀಲ್ ಜೋಪ್ರಾ, ಶ್ರಾವಣರಾಜ್ ಪುರೋಹಿತ್, ದೇವರಾಜ ಮಡಿವಾಳರ್, ದಯಾ ಖೋಡೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪ್ರತಿದಿನ ಮಧ್ಯಾನ್ಹ ಅನ್ನ ಸಂತರ್ಪಣೆ ಮತ್ತು ಸಂಜೆವೇಳೆಗೆ ರಸ ಮಂಜರಿ ಕಾರ್ಯಕಾರ್ಯಕ್ರಮ ಯಶಸ್ವಿಯಾಗಿಜರುಗಿದೆ. ಸತತ ೨ ವರ್ಷಗಳಿಂದ ಈ ಗೌರಿಸುತ ಮಿತ್ರಮಂಡಳಿ ಗಣೇಶೋತ್ಸವದ ಸಂದರ್ಭದಲ್ಲಿ ಬಹುಮಾನವನ್ನು ಪಡೆದು ಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
0 comments:
Post a Comment