ಕೊಪ್ಪಳ:ದಲಿತರ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರೋ:ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪದಾಧಿಕಾರಿಗಳಿಂದ ನಗರದ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ರಾಜ್ಯಾ ಮತ್ತು ದೇಶದ್ಯಾಂತ್ಯ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಶಿಕ್ಷಣ,ಭೂಮಿ,ಆರೋಗ್ಯ ಸೇವೆಗಳು,ಸಮಾನ ಶಿಕ್ಷಣ ನೀತಿ ಆಯೋಗ ರಚಿಸಿ ಕೇಂದ್ರ ಸರಕಾರದ ಬಜೆಟ್‌ನಲ್ಲಿ ೨೫% ಹಣ ಮೀಸಿಲಿಟ್ಟು ಸಮರ್ಪಕವಾಗಿ ಖರ್ಚು ಮಾಡಬೇಕು ಸಹಕಾರಿ ಮತ್ತು ಗುತ್ತಿಗೆ ಕ್ಷೇತ್ರಗಳಿಲಿಯೂ ಮೀಸಲಾತಿ ತರಬೇಕು ದೇಶ ಮತ್ತು ರಾಜ್ಯದಲ್ಲಿ ಬೌದ್ದ ಸ್ತೂಪಗಳ ರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ರಚಿಸಿಬೇಕು ಪ್ರತಿ ವರ್ಷವು ಬೌದ್ದ ಪೂರ್ನಿಮೆಯಂದು ದೇಶ್ಯದ್ಯಾಂತ್ಯ ಬೌದ್ದ ಜಯಂತಿ ಆಚರಿಸಿಬೇಕು ಮತ್ತು ಸಾರ್ವತ್ರಿಕ ರಜೆ ಘೋಷಿಸಿಬೇಕು ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಮತ್ತು ಬಹಿಷ್ಕಾರ ಹಾಗೂ ಅತ್ಯಾಚಾರಗಳು ಹೆಚ್ಚಾಗಿದ್ದು ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ನಿಜವಾದ ಅಪಾರಧಿಗಳನ್ನು ಕಂಡುಹಿಡಿದು ಶಿಕ್ಷಿಸಿಬೇಕು ಮತ್ತು ದೌರ್ಜನ್ಯಗಳನ್ನು ಪ್ರತಿಬಂಧಿಸಲು ಟಾಡಾ ಕಾಯ್ದೆ ರೀತಿಯ ಮಾದರಿಯಲ್ಲಿ ಗಡಿಪಾರು ಮಾಡಿ ೩ ತಿಂಗಳು ಒಳಾಗಾಗಿ ವಿಚಾರಣೆ ಪೂರ್ಣಗೊಳಿಸಿ ಕಠಿಣ ಶಿಕ್ಷೆ ವಿಧಿಸಲು ಕಾನೂನು ರೊಪಿಸಿಬೇಕು
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಭೂ ರಹಿತ ಕೃಷಿ ದಲಿತರಿಗೆ ಕೂಡಲೇ ಪ್ರತಿ ಕುಟುಂಬಕ್ಕೂ ಜಮೀನು ಮೂಂಜೂರಾತಿ ಮಾಡಬೇಕು ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ದಲಿರಿಗೆ ಸಮರ್ಪಕವಾಗಿ ಮಂಜೂರು ಮಾಡಬೇಕೆಂದು ಡಾ.ಬಿ.ಆರ್,ಅಂಬೇಡ್ಕರ್ ಸಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಮಂಜುನಾಥ ಕೋಳೂರು ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಲ್ಲಿ ಅಂಗನವಾಡಿ ಕಟ್ಟಡಗಳು ಇರುವುದಿಲ್ಲ ಕೂಡಲೇ ಸರಕಾರ ಅನುದಾನ ಮಂಜೂರು ಮಾಡಿ ಕಟ್ಟಡ ನಿರ್ಮಿಸಿಬೇಕು ಕಾರ್ಯಕರ್ತರಿಗೆ ಹಾಗೂ ಆಯಾಗಳಿಗೆ ವೇತನ ಹೆಚ್ಚಿಸಿ ಕಾಯಂಗೊಳಿಸಿಬೇಕು.ವಿದ್ಯಾರ್ಥಿಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಮೂರಾರ್ಜಿ ದೇಸಾಯಿ ವಸತಿ ನಿಲಯ ನಿರ್ಮಿಸಿಬೇಕು ಹಾಗೂ ಎಲ್ಲಾ ದಿನಗೂಲಿ ನೌಕರರನ್ನು ಕಾಯಂಗೊಳಿಸಿಬೇಕು ಎಂದು ಮಾರ್ಕಂಡೆಪ್ಪ ಹಲಗಿ ಆಗ್ರಹಸಿದ್ದರು.ಪ್ರತಿಭನಾ ಮೆರವಣಿಗೆ ನೇತೃತ್ವವನ್ನು
ಜಿಲ್ಲಾ ಸಂಚಾಲಕ ಹಂಪೇಶ್ ಹರಿಗೋಲ್,ಹೇಮರಾಜ್ ವೀರಾಪುರ,ದುರಗಪ್ಪ ಈ ಕಂದಾರಿ,ಹನುಮಂತಪ್ಪ ನಾಯಕ್,ವೆಂಕಟೇಶ ನೀರಲೂಟಿ,ದುರಗಪ್ಪ ದೊಡ್ಡಮನಿ,ಕೃಷ್ಣಪ್ಪ ಹೆಗೆಡೆ,ಶಿವಪ್ಪ ವಡ್ರಕಲ್,ದುರುಗಪ್ಪ ಜಾಲಿಮರ,ಬಾಷಾಸಾಬ,ಶಿವಪ್ಪ iರಕಟ್ಟ್,ಎಂ.ಕಂದಾರಿ,ಎಮ್ ಪೂಜಾರ ಗಂಗಾವತಿ,ಮುದಿಯಪ್ಪ ನಾಯಕ್, ಶೈಲಾಜಾ ಹುಳ್ಳಿ,ಪಾರ್ವತೆಮ್ಮ ಹರಿಗೋಲು,ದುರಗಮ್ಮ ಇತರರು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
0 comments:
Post a Comment