ಕೊಪ್ಪಳ : ತಾಲೂಕ ಫೋಟೋ
ಮತ್ತು ವಿಡಿಯೋಗ್ರಾಫರ‍್ಸ್ ಸಂಘದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಶ್ರೀ ಗವಿಸಿದ್ದೇಶ್ವರ ಮಠದಿಂದ ಆರಂಬಿಸಿ ಭಾಗ್ಯನಗರ ಮತ್ತು ಕೊಪ್ಪಳದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಿರಸಪ್ಪಯ್ಯನಮಠದವರೆಗೆ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಿರಸಪ್ಪಯ್ಯನಮಠದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ‍್ಯಕ್ರಮಕ್ಕೆ ದಾವಣಗೆರೆಯ ಹಿರಿಯ ಛಾಯಾಗ್ರಾಹಕರಾದ ಹೆಚ್.ಬಿ.ಮಂಜುನಾಥರು ಚಾಲನೆ ನೀಡಿ ಛಾಯಾಗ್ರಹಣ ಇತಿಹಾಸ ಹಾಗೂ ವರ್ತಮಾನದ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಗೋವಿಂದರಾವ್ ಪದಕಿ ವಹಿಸಿದ್ದರು. ಕಮಲಾಪುರದ ವನ್ಯಜೀವಿ ಛಾಯಾಗ್ರಾಹಕರಾದ ಪಂಪಯ್ಯ ಮಳಿಮಠರು ತಮ್ಮ ಚಿತ್ರಗಳ ಪ್ರದರ್ಶನ ಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರಾದ ಎಂ.ವಿ.ಹೋರಿ ಹಾಗೂ ಎ.ಕೆ.ವಾಸುದೇವನ್ ರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಫೋಟೋ ಮತ್ತು ವಿಡಿಯೋಗ್ರಾಫರ‍್ಸ್ ಸಂಘದ ಉಪಾಧ್ಯಕ್ಷರಾದ ಕನಕೂಸಾ ದಲಬಂಜನ, ವಿಜಯ ವಸ್ತ್ರದ,ಇಮಾಮಸಾಬ ಜಾಫರ್, ಬಸವರಾಜ ಕಂಪ್ಲಿ, ಅಶೋಕ ಹುಣಸಿಗಿಡದ ಹಾಗೂ ತಾಲೂಕಿನ ಸಮಸ್ತ ಫೋಟೋಗ್ರಾಫರ‍್ಸ್ ಮತ್ತು ವಿಡಿಯೋಗ್ರಾಫರ‍್ಸ್ ಉಪಸ್ಥಿತರಿದ್ದರು.
0 comments:
Post a Comment