ಕೊಪ್ಪಳ ಸೆ,೦೧:s ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆ ಸಹಾಯಕ ಪ್ರಭಾಕರ ರೆಡ್ಡಿಯವರು ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ವಿಶೇಷ ಗೌರವ ಸನ್ಮಾನ ಪಡೆದಿರುವುದಕ್ಕೆ ಅವರಿಗೆ ಮಿಲ್ಲತ್ ಶಾಲೆಯಲ್ಲಿ ಸಂಸ್ಥೆಯವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಯಾವುದೇ ಕ್ಷೇತ್ರ ಅಥವಾ ಯಾವುದೇ ಸಮಾಜ ಸಮಗ್ರವಾಗಿ ಅಭಿವೃದ್ದಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದೆ. ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ದಿಯಾಗಲು ಸಾಧ್ಯ. ಎಲ್ಲಾ ಕ್ಷೇತ್ರದ ಅಭಿವೃದ್ದಿ ಶಿಕ್ಷಣ ರಂಗದಲ್ಲಿ ಅಡಗಿದೆ ಎಂದು ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಎಂ.ಪಾಷಾ ಕಾಟನ್ ಹೇಳಿದರು.
ಅವರು ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆ ಸಹಾಯಕ ಪ್ರಭಾಕರ ರೆಡ್ಡಿಯವರು ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ವಿಶೇಷ ಗೌರವ ಸನ್ಮಾನ ಪಡೆದಿರುವುದಕ್ಕೆ ಅವರಿಗೆ ಶಾಲೆಯಲ್ಲಿ ಸಂಸ್ಥೆಯವತಿಯಿಂದ ಏರ್ಪಡಿಸಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ನಮ್ಮ ಸಂಸ್ಥೆ ಮತ್ತು ಶಾಲೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ದಿಸೆಯಲ್ಲಿ ಕೊಂಡೊಯಲು ಸರ್ವ ಪದಾಧಿಕಾರಿ ಸದಸ್ಯರು ಶ್ರಮಿಸಲಿದ್ದಾರೆ. ಶೈಕ್ಷಣಿಕ ಅಭಿವೃದ್ದಿಗೆ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿಗಳು ಒಳ್ಳೆಯ ಅಭಿವೃದ್ದಿಪರ ಚಿಂತಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಭಾಕರ ರೆಡ್ಡಿಯವರು ಕೂಡ ಈ ಇಲಾಖೆಯಲ್ಲಿ ಒಳ್ಳೆಯ ನೌಕರಸ್ಥರಾಗಿ ಕೆಲಸ ಮಾಡುತ್ತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದಾರೆ. ಮತ್ತು ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತ ಬಂದಿದ್ದಾರೆ ಎಂದು ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಎಂ.ಪಾಷಾ ಕಾಟನ್ ಶ್ಲಾಘಿಸಿದರು.
ಸಂಸ್ಥೆಯ ಮುಖ್ಯ ಸಲಹೆಗಾರ ಎಂ.ಸಾದಿಕ ಅಲಿ ಮಾತನಾಡಿ, ಪ್ರಭಾಕರ ರೆಡ್ಡಿಯವರಿಗೆ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಅವರ ಶೈಕ್ಷಣಿಕ, ಉತ್ತಮ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ಸನ್ಮಾನವನ್ನು ಉತ್ಸವದಲ್ಲಿ ಮಾಡಲಾಗಿದೆ. ಬರುವ ದಿನಗಳಲ್ಲಿ ಇವರು ಇದೇ ರೀರಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ, ಪ್ರಭಾಕರ ರೆಡ್ಡಿಯವರು ಸನ್ಮಾನದಿಂದ ಜವಾಬ್ದಾರಿ ಹೆಚ್ಚಿಸುತ್ತಿದೆ. ನಾನು ನನ್ನ ಕರ್ತವ್ಯ ಮತ್ತು ಸೇವೆ ಮಾಡಿದ್ದೇನೆ ವಿನಃ ಯಾರ ಮೇಲೆ ಯಾವುದೇ ರೀತಿಯ ಉಪಕಾರ ಮಾಡಿಲ್ಲ. ಆದರೂ ಕೂಡ ನನ್ನ ಕೆಲಸ, ಸೇವೆ ಪರಿಗಣಿಸಿ ನನಗೆ ಜಿಲ್ಲಾ ಉತ್ಸವದಲ್ಲಿ ವಿಶೇಷ ಸನ್ಮಾನ ಹಾಗೂ ಮಿಲ್ಲತ್ ಶಾಲೆಯಲ್ಲಿ ವಿಶೇಷ ಸನ್ಮಾನ ನೀಡಿರುವುದಕ್ಕೆ ಅಭಿನಂದಿಸುವುದಾಗಿ ಹೇಳಿದ ಅವರು, ನಮ್ಮ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನನ್ನ ಕಾರ್ಯ ಮತ್ತು ಸೇವೆ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಪ್ರಭಾಕರ ರೆಡ್ಡಿ ಹೇಳಿದರು.
ಉರ್ದು ಶಿಕ್ಷಣ ಸಂಯೋಜಕ ಮೈನುದ್ದೀನ್‌ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದಲ್ಲಿ ಶೈಕ್ಷಣಿಕ ಕೊರತೆ ಹೆಚ್ಚಾಗಿದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಮಿಲ್ಲತ್ ಶಿಕ್ಷಣ ಸಂಸ್ಥೆ ಪ್ರಾಮಾಣಿಕವಾಗಿ ಶ್ರಮಿಸಲಿ ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಸಯ್ಯದ್ ಯಜದಾನಿ ಪಾಷಾ ಖಾದ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಈ ಸಂದರ್ಭದಲ್ಲಿ ಶಾಲೆಯ ಪರವಾಗಿ ಪ್ರಭಾಕರ ರೆಡ್ಡಿಯವರಿಗೆ ಸನ್ಮಾನಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ನೈನಾಜ್ ಬೇಗಂರವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
0 comments:
Post a Comment