ಅಗಸ್ಟ ೭: ನಗರದ ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಅಗಸ್ಟ ೫ರಂದು ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ ೨೦೧೪-೧೫ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿವಿಧ ವಿಭಾಗಗಳ ಪಕ್ಷಿನೋಟದ ನಾವು ನಮ್ಮಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ.ಶೈಲಜಾ.ಎಸ್. ರವರು ಮಾತನಾಡಿ, ವಿದ್ಯಾರ್ಥಿಗಳು ಮೊದಲು ಗುರಿಯನ್ನು ನಿರ್ಧರಿಸಿಕೊಂಡ ನಂತರ ಅವರ ಜ್ಞಾನದ ಪಯಣವನ್ನು ಮುನ್ನೆಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾಲೇಜಿನ ಕನ್ನಡ ಅದ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಕಾಲೇಜಿನ ಪದವಿ ವಿಭಾಗದಲ್ಲಿ ಬಿ.ಎ, ಬಿ.ಕಾಮ್, ಬಿ.ಬಿ.ಎಮ್, ಬಿ.ಎಸ್ಸಿ ಮತ್ತು ಬಿ.ಎ. ಪತ್ರಿಕೋದ್ಯಮ ಕೋರ್ಸ್‌ಗಳಿವೆ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಎಮ್.ಎ., ಎಮ್.ಕಾಮ್., ಎಮ್.ಎಸ್ಸಿ. ಹೀಗೆ ಹಲವು ಕೋರ್ಸ್‌ಗಳಿದ್ದು ವಿದ್ಯಾರ್ಥಿಗಳು ಕೋರ್ಸ್‌ಗಳ ಕಾಯ್ಕೆಯ ವಿಚಾರದಲ್ಲಿ ಸರಿಯಾದ ಮಾಹಿತಿಯನ್ನು ತೆಗೆದಕೊಂಡು ತಮ್ಮ ಇಚ್ಚೆಯ ಕೋರ್ಸ್‌ಗಳಿಗೆ ದಾಖಲಾತಿಯನ್ನು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ.ಅಬ್ದುಲ್ ರೆಹಮಾನ್, ಡಾ.ಹಸನ್ಮಿಯಾ, ಡಾ.ವಗ್ಗಿ, ವಿಠ್ಠೋಬ ಮತ್ತಿತರ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 comments:
Post a Comment