ಜಿಲ್ಲೆಯಲ್ಲಿನ ಎಲ್ಲ ಬಿಪಿಎಲ್ ಪಡಿತರ ಚೀಟಿದಾರರು ಕೂಡಲೆ ತಮ್ಮ ಭಾವಚಿತ್ರವಿರುವ ಮತದಾರರ ಗುರುತಿನ ಕಾರ್ಡ್ (ಎಪಿಕ್) ಸಂಖ್ಯೆಯನ್ನು 9731979899 ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮಾಡುವ ಮೂಲಕ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯ ಅರ್ಹ ಬಿಪಿಎಲ್ ಪಡಿತರ ಚೀಟಿಗಳಲ್ಲಿ 21 ವರ್ಷಕ್ಕೂ ಮೆಲ್ಪಟ್ಟ ಒಟ್ಟು 7,63,452 ಸದಸ್ಯರಿದ್ದು, ಈ ಪೈಕಿ ಇದುವರೆಗೂ 3,99,997 ಸದಸ್ಯರು ಮಾತ್ರ ತಮ್ಮ ಎಪಿಕ್ (ಚುನಾವಣಾ ಗುರುತಿನ ಚೀಟಿ) ಸಂಖ್ಯೆಯನ್ನು ನೀಡಿದ್ದಾರೆ. ಇನ್ನೂ 3,63,455 ಸದಸ್ಯರು ಎಪಿಕ್ ಗುರುತಿನ ಕಾರ್ಡ್ ಸಂಖ್ಯೆಯನ್ನು ಎಸ್.ಎಂ.ಎಸ್. ಮಾಡಬೇಕಾಗಿದ್ದು, ಅರ್ಹ ಪಡಿತರ ಚೀಟಿದಾರರು ತಮ್ಮ ಎಪಿಕ್ ಸಂಖ್ಯೆಯನ್ನು ಸಂಬಂಧಿಸಿದ ಗ್ರಾ.ಪಂ.ಗಳಿಗೆ ಸಲ್ಲಿಸಬೇಕು.
ಈ ಕುರಿತಂತೆ ಹಲವು ಬಾರಿ ಸೂಚನೆ ನೀಡಿ ಕಾರ್ಡುದಾರರಿಗೆ ಕಾಲಾವಕಾಶ ನೀಡಲಾಗಿದೆ. ಚುನಾವಣಾ ಗುರುತಿನ ಚೀಟಿ ನೀಡದ ಪಡಿತರ ಚೀಟಿದಾರರಿಗೆ ಈಗಾಗಲೆ, ಆಗಸ್ಟ್ ತಿಂಗಳಿಗೆ ಸೀಮೆ ಎಣ್ಣೆ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಕಾರ್ಡುದಾರರು ತಮ್ಮ ಎಪಿಕ್ ಸಂಖ್ಯೆಯನ್ನು 9731979899 ಗೆ ಎಸ್‍ಎಂಎಸ್ ಮೂಲಕ ನೋಂದಾಯಿಸಿಕೊಳ್ಳಬೇಕು. ಅಥವಾ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಎಪಿಕ್ ಸಂಖ್ಯೆಯನ್ನು ನೊಂದಾಯಿಸಿಕೊಳ್ಳಬೇಕು. ಮಾಹಿತಿ ನೀಡದವರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು. ಆದ್ದರಿಂದ ಪಡಿತರ ಚೀಟಿದಾರರು ಸರ್ಕಾರ ನೀಡಿದ ಕಾಲಾವಕಾಶದ ಸದುಪಯೋಗಪಡಿಸಿಕೊಂಡು ಅಗತ್ಯ ಮಾಹಿತಿ ನೀಡಿ ತಮ್ಮ ಪಡಿತರ ಚೀಟಿಗಳನ್ನು ಚಾಲ್ತಿಯಾಗಿರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ಆರ್.ಜನ್ನು ತಿಳಿಸಿದ್ದಾರೆ.
0 comments:
Post a Comment