PLEASE LOGIN TO KANNADANET.COM FOR REGULAR NEWS-UPDATES


-ಕುಮಾರ್ ಕೇತ್ಕರ್
ಮೋದಿ ಮ್ಯಾಜಿಕ್ ಜನರನ್ನು ನಿರಂತರವಾಗಿ ಆಕ ರ್ಷಿಸುತ್ತಿದೆ ಹಾಗೂ ಇಂದು ಇನ್ನೊಂದು ಚುನಾವಣೆ ನಡೆದರೆ ಮತ್ತೆ ಮೋದಿ ಅಲೆ ಮತಗಳನ್ನು ಗುಡಿಸಿ ತೆಗೆಯುತ್ತದೆ ಎಂಬ ‘ಮೂಡ್ ಆಫ್ ದಿ ನೇಶನ್’ (ದೇಶದ ಮನೋಸ್ಥಿತಿ) ಸಮೀಕ್ಷೆ ಇತ್ತೀಚೆಗೆ ಪ್ರಕಟಗೊಂಡಿತ್ತು. ಆದರೆ, ಅದು ಪ್ರಕಟಗೊಂಡ 48 ಗಂಟೆಗಳಲ್ಲಿ ಆಘಾತ ಎದುರಾಗಿತ್ತು. ಇಂಡಿಯಾ ಟುಡೆ ಗ್ರೂಪ್‌ನ ಹಂಸರಾಜ ರಿಸರ್ಚ್ ಏಜನ್ಸಿ ಈ ಸಮೀಕ್ಷೆ ನಡೆಸಿತ್ತು. ಲೋಕಸಭಾ ಚುನಾವಣೆಗೆ ಮೊದಲು ಇದೇ ತಂಡ ನಡೆಸಿದ ಸಮೀಕ್ಷೆ ಕೆಲವು ರಾಜ್ಯಗಳಲ್ಲಿ ಅಂಕಿಸಂಖ್ಯೆಗಳಲ್ಲಿನ ಕೊಂಚ ಏರಿಳಿಕೆಯನ್ನು ಹೊರತುಪಡಿಸಿದರೆ ಸರಿಯಾಗಿತ್ತು. ಜನರ ನಾಡಿಯನ್ನು ಪ್ರಧಾನಿ ನರೇಂದ್ರ ಮೋದಿ ಸರಿಯಾಗಿಯೇ ಗ್ರಹಿಸಿದ್ದಾರೆ ಹಾಗೂ ಅವರ ಪ್ರಭಾವ ಸಮಾಜದ ಎಲ್ಲ ವರ್ಗಗಳಿಗೆ ಹರಡಿದೆ ಎಂದು ಸಮೀಕ್ಷೆ ಹೇಳಿತ್ತು.
  ರಾಷ್ಟ್ರೀಯ ಮನಸ್ಥಿತಿ ಅದಾಗಿದ್ದರೆ ಬಿಹಾರ, ಪಂಜಾಬ್, ಮಧ್ಯಪ್ರದೇಶ ಮತ್ತು ಕರ್ನಾಟಕ- ಈ ನಾಲ್ಕು ರಾಜ್ಯಗಳಲ್ಲಿ 18 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯನ್ನು ಬಿಜೆಪಿ ಗುಡಿಸಿಹಾಕಬೇಕಾಗಿತ್ತು. ಆದರೆ, ಈ 18 ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಸೋಲನುಭವಿಸಿತು. ಬಿಹಾರದಲ್ಲಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಹೆಚ್ಚಿನ ಹಿನ್ನಡೆಯನ್ನು ಪಡೆಯಿತು. ಅಲ್ಲಿನ 10 ಸ್ಥಾನಗಳಲ್ಲಿ ಬಿಜೆಪಿ 6ರಲ್ಲಿ ಸೋಲನುಭವಿಸಿತು. ಬಿಹಾರದ 40 ಲೋಕಸಭಾ ಸ್ಥಾನಗಳ ಪೈಕಿ 31ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಅದು ನಿಜವಾಗಿಯೂ ಅವಿಸ್ಮರಣೀಯ ವಿಜಯವಾಗಿತ್ತು. ಅದು ಒಂದೇ ಪೆಟ್ಟಿಗೆ ಲಾಲುಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್‌ರ ಸಾಮ್ರಾಜ್ಯಗಳನ್ನು ಉರುಳಿಸಿತ್ತು ಹಾಗೂ ಕಾಂಗ್ರೆಸ್‌ಗೂ ದೊಡ್ಡ ಹೊಡೆತ ನೀಡಿತ್ತು. ಅದೇ ಪ್ರವೃತ್ತಿ ಮುಂದುವರಿದಿದ್ದರೆ ಅಥವಾ ಇನ್ನಷ್ಟು ಬಲಗೊಂಡಿದ್ದರೆ, ಬಿಜೆಪಿ ಅಲ್ಲಿ ಎಲ್ಲ 10 ಅಥವಾ ಕನಿಷ್ಠ 8 ಸ್ಥಾನಗಳನ್ನಾದರೂ ಗೆಲ್ಲಬೇಕಾಗಿತ್ತು.

ಕಳೆದ ತಿಂಗಳು, ಉತ್ತರಾಖಂಡದಲ್ಲಿ ಕಾಂಗ್ರೆಸ್ ಎಲ್ಲ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದಿತ್ತು. ಉಪಚುನಾವಣೆಗಳ ಈ ಸುತ್ತಿನಲ್ಲಿ, ಕರ್ನಾಟಕದಲ್ಲಿ ಬಿಜೆಪಿ 3 ಕ್ಷೇತ್ರಗಳ ಪೈಕಿ ಎರಡರಲ್ಲಿ ಸೋತಿತು ಹಾಗೂ ಒಂದರಲ್ಲಿ ಬಿಜೆಪಿ ತೀರಾ ಕಡಿಮೆ ಅಂತರದಿಂದ ಗೆದ್ದಿತು. ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದ ಕ್ಷೇತ್ರ ಪ್ರಭಾವಿ ಬಿ.ಎಸ್. ಯಡಿಯೂರಪ್ಪರ ಮಗ ರಾಘವೇಂದ್ರ ಸ್ಪರ್ಧಿಸಿದ್ದ ಕ್ಷೇತ್ರ. ಯಡಿಯೂರಪ್ಪ ಹೇಳಿಕೆಯೊಂ ದನ್ನೂ ನೀಡಿ, ಇದು ನಿಜವಾದ ಗೆಲುವಲ್ಲ ಹಾಗೂ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪಂಜಾಬ್‌ನಲ್ಲಿ ಕಾಂಗ್ರೆಸ್ ಪಾಟಿಯಾಲ ಕ್ಷೇತ್ರವನ್ನು ಉಳಿಸಿಕೊಂಡಿತು ಹಾಗೂ ತಲವಾಂಡಿ ಸಾಬೊ ಕ್ಷೇತ್ರವನ್ನು ಅಕಾಲಿಗಳಿಗೆ ಬಿಟ್ಟುಕೊಟ್ಟಿತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಹೋರಿಬಂದ್ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡಿತು.
ಉಪಚುನಾವಣೆ 90 ದಿನಗಳ ಮೋದಿ ಆಳ್ವಿಕೆ ಮೇಲಿನ ಜನಾಭಿಪ್ರಾಯವಲ್ಲ ಎಂಬುದಾಗಿ ವಾದಿಸಬಹುದು. ಆದರೆ, ಒಂದು ವೇಳೆ ಎಲ್ಲ 18 ಸ್ಥಾನಗಳು ಅಥವಾ 14 ಸ್ಥಾನಗಳನ್ನಾದರೂ ಬಿಜೆಪಿ ಗೆದ್ದಿದ್ದರೆ ಈ ವಿಜಯವನ್ನು ಮಾಧ್ಯಮಗಳು ಯಾವ ರೀತಿಯಲ್ಲಿ ಬಿಂಬಿಸುತ್ತಿದ್ದವು! ಬಿಜೆಪಿ ಒಂದೇ ಒಂದು ಉಪಚುನಾವಣೆಯಲ್ಲಿ ಜಯ ಗಳಿಸಿದ್ದರೂ ಅದನ್ನು ಮೋದಿಯ ಮುನ್ನಡೆ ಹಾಗೂ ಮೋದಿ ಅಲೆಯ ಪ್ರಭಾವ ಎಂಬುದಾಗಿ ಮಾಧ್ಯಮಗಳು ಬಣ್ಣಿಸುತ್ತಿದ್ದವು.
ಮುಂದಿನ ಎರಡು ತಿಂಗಳುಗಳಲ್ಲಿ ನಡೆಯಲಿರುವ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಇದೇ ಮಾದರಿಯ ಫಲಿತಾಂಶ ಬಾರದಿರಬಹುದು. ಆದರೆ, ವಿಷಯ ಅದಲ್ಲ. ನೋಮ್ ಚೋಮ್‌ಸ್ಕಿಯ ಮಾತುಗಳಲ್ಲಿ ಹೇಳುವುದಾದರೆ, ‘ಅನುಮೋದನೆ’ ಮತ್ತು ‘ರೂಪಿಸಿದ ಅನುಮೋದನೆ’ಗಳ ನಡುವೆ ದೊಡ್ಡ ಅಂತರವಿದೆ ಎನ್ನುವುದೇ ಇಲ್ಲಿನ ವಿಷಯ. ಇಂದಿನ ಮಾಧ್ಯಮ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳು ರಾಜಕೀಯ ನಿಯಂತ್ರಣದ ತಂತ್ರಗಾರಿಕೆಗೆ ಯಾವ ರೀತಿಯಲ್ಲಿ ಬಲಿಯಾಗುತ್ತವೆಂದರೆ ಯಾವುದು ‘ರೂಪಿತ’ ಹಾಗೂ ಯಾವುದು ‘ಸಹಜ’ ಎಂಬುದನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ, ‘ರಾಷ್ಟ್ರೀಯ ಮನೋಸ್ಥಿತಿ’ ಸಮೀಕ್ಷೆಯನ್ನು ಬಿಜೆಪಿ ನಾಯಕರು ಹೇಗೆ ಹೆಚ್ಚಾಗಿ ಅವಲಂಬಿಸಬಾರದೋ, ಹಾಗೆಯೇ ಮೋದಿ ಅಲೆ ಇನ್ನಷ್ಟು ತಗ್ಗುತ್ತದೆ ಎಂದು ಕಾಂಗ್ರೆಸ್ ಅಥವಾ ಇತರ ಬಿಜೆಪಿಯೇತರ ಪಕ್ಷಗಳು ನಿರೀಕ್ಷಿಸಬಾರದು. ಬ್ಲಾಗೊಂದರಲಿ ಹಿಂದೆಯೇ ಹೇಳಿರುವಂತೆ ಮೋದಿಯ ನಿಜವಾದ ‘ವೈರಿಗಳು’ ಸಂಘ ಪರಿವಾರದ ಒಳಗೆಯೇ ಇದ್ದಾರೆ ಹಾಗೂ ವಾಸ್ತವವಾಗಿ ಅವರೇ ಅವರ ಅತ್ಯಂತ ದೊಡ್ಡ ವೈರಿ.
ಆಕ್ರಮಣಕಾರಿ ಮನೋಧರ್ಮ ಹಾಗೂ ಅತಿವಿಶ್ವಾಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶೀಘ್ರದಲ್ಲೇ ಚುನಾವಣೆ ನಡೆಯಲಿ ರುವ ಎಲ್ಲ ನಾಲ್ಕು ರಾಜ್ಯಗಳಲ್ಲಿ ಹಿಂದೂತ್ವ ಚಟುವಟಿಕೆಗಳನ್ನು ಹರಿ ಯಬಿಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಉಪಚುನಾವಣೆಗೆ ಯಾವುದೇ ಮಹತ್ವ ಇಲ್ಲ ಎಂದು ಅವರು ಈಗಾಗಲೇ ಹೇಳಿ ದ್ದಾರೆ. ಆದರೆ, ಬಿಹಾರದ ಸ್ಥಳೀಯ ಬಿಜೆಪಿ ಘಟಕಗಳು ಪರಿಣಾ ಮವನ್ನು ಎದುರಿಸಲು ಆರಂಭಿಸಿವೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವ ಬೆದರಿಕೆ ಯನ್ನು ಬಿಜೆಪಿ ಹಾಕುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿ ದೆ. ಮೋದಿ ಮತ್ತು ಶಾ ಜೋಡಿ ನೂರು ಪ್ರತಿಶತ ಬಿಜೆಪಿ ವಿಜಯ ವನ್ನು ಎದುರುನೋಡುತ್ತಿತ್ತು. ಹಾಗಾಗಿ, ಮಹಾರಾಷ್ಟ್ರದ ಎಲ್ಲ 288 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುವ ಬಗ್ಗೆ ಅವರು ಯೋಜಿಸಿದ್ದರು. ಆದರೆ, ಈ ತಂತ್ರಗಾರಿಕೆ ಈಗ ತಿರುಗುಬಾಣವಾಗಿದೆ.

ಹಾಗಾಗಿ, ಉಪಚುನಾವಣೆ ಸುತ್ತು ಮಹತ್ವ ಹೊಂದಿಲ್ಲ ಎಂದು ಹೇಳಲಾಗದು. ಅದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ತಂತ್ರಗಾರಿಕೆಯಲ್ಲಿ ಬದಲಾವಣೆಗೆ ಕಾರಣವಾಗಿದೆ.
ಅದೇ ವೇಳೆ, ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಪತನ ಹಾಗೂ ಉಪಚುನಾವಣೆಗಳಲ್ಲಿ ಗಳಿಸಿದ ಯಶಸ್ಸಿನಿಂದ ಕಾಂಗ್ರೆಸ್ ಪಾಠ ಕಲಿತಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಸ್ಥಳೀಯ ಕಾಂಗ್ರೆಸ್ ನಾಯಕತ್ವ ಧೃತಿಗೆಟ್ಟಿದೆ, ದಿಕ್ಕು ತೋಚ ದಂತಾಗಿದೆ ಹಾಗೂ ಹತಾಶವಾಗಿದೆ. ಅದೇ ವೇಳೆ, ಅಹಂಕಾ ರದಿಂದ ವಿಜೃಂಭಿಸುತ್ತಿರುವ ಬಿಜೆಪಿ, ತನ್ನ ಬೃಹತ್ ವಿಜಯ ಸಾ ಧ್ಯವಾಗಿದ್ದು ರಾಷ್ಟ್ರೀಯ ಮತ ಹಂಚಿಕೆಯ ಕೇವಲ 31 ಶೇ.ದಷ್ಟು ಮತಗಳಿಂದ ಎಂಬುದನ್ನು ಮರೆತಂತಿದೆ. ಉಭಯ ಬಣಗಳಲ್ಲೂ ಜ್ಞಾನೋದಯವಾಗಬೇಕಾಗಿದೆ.
ಕೃಪೆ:ಎನ್ ಡಿಟಿವಿ
varthabharati

Advertisement

0 comments:

Post a Comment

 
Top