PLEASE LOGIN TO KANNADANET.COM FOR REGULAR NEWS-UPDATES

       ಶಿಕ್ಷಣಕ್ಕೆ ಹೆಚ್ಚುವರಿ ಹಣ ಮೀಸಲಿಡಲು ಹಾಗೂ ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ


ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೆ ೩೦ ರಷ್ಟು ಹಣ ಮೀಸಲಿಡುವಂತೆ ಒತ್ತಾಯಿಸಿ, ಹಾಗೂ ಮೂಲಸೌಲಭ್ಯ ಮತ್ತು ವಿದ್ಯಾರ್ಥಿನೀಯರ ಮೇಲಿನ ದೌರ್ಜನ್ಯ ವಿರೋಧಿಸಿ ಸೆಪ್ಟಂಬರ್ ೧೦ ರಂದು ಎಸ್.ಎಫ್.ಐ ರಾಜ್ಯವ್ಯಾಪಿ ಶಾಲಾ-ಕಾಲೇಜ್-ವಿ.ವಿ-ಹಾಸ್ಟಲ್ ಬಂದ್ ಗೆ ಕರೆ ನೀಡಿದೆ ಎಂದು ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಹೇಳಿದರು. ಅವರು ನಗರದ ಎಸ್.ಎಫ್.ಐ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ. ರಾಜ್ಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಕಡಿಮೆ ಪ್ರಮಾಣದ ಹಣವನ್ನು ನೀಡುತ್ತಿರುವುದರಿಂದ ಶಾಲಾ-ಕಾಲೇಜ್-ವಿ.ವಿ-ಹಾಸ್ಟೆಲ್ ಗಳು ಸೌಲಭ್ಯಗಳಲಿಲ್ಲದೆ ನರಳುತ್ತಿವೆ. ರಾಜ್ಯದಲ್ಲಿರುವ ಸರಕಾರ ಅರಾಜಕತೆಯಿಂದಿದ್ದು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ವಿದ್ಯಾರ್ಥಿನೀಯರ ಮೇಲಿನ ದೌರ್ಜನ್ಯನ್ನು ತಡೆಗಟ್ಟಲು ಪರಿಹಾರವನ್ನು ಹುಡುಕುವ ಬದಲು ಆಡಳಿತ ಮತ್ತು ವಿರೋಧ ಪಕ್ಷಗಳು ಅತ್ಯಾಚಾರದ ವಿಷಯವನ್ನು ರಾಜಕೀಯಗೊಳಿಸಿರುವುದು ದುರಂತವೆಂದರು. 
ಪದವಿ ಮತ್ತು ಪಿ.ಯು ಕಾಲೇಜುಗಳು ಆರಂಭವಾಗಿ ಮೂರು ತಿಂಗಳು ಕಳದಿವೆ. ಭಾಷಾ ವಿಷಯಗಳ ಪಠ್ಯ ಪುಸ್ತಕವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶೇ ೬೪ ಶಾಲಾ-ಕಾಲೇಜುಗಳು ಶೌಚಾಲಯವಿಲ್ಲದೆ. ಶೇ ೫೮ ರಷ್ಟು ಶಾಲಾ-ಕಾಲೇಜುಗಳಲ್ಲಿ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ೪೨೦೦೦ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ೧೮.೦೦೦ ಉಪನ್ಯಾಸಕ ಹುದ್ದೆಗಳು ಖಾಲಿ ಇವೆ ಅವುಗಳನ್ನು ಭರ್ತಿ ಮಾಡಲು ಸರಕಾರ ಮುಂದಾಗುತ್ತಿಲ್ಲ. ಒ.ಬಿ.ಸಿ. ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಯನ್ನು ನೀಡದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆಯಲ್ಲಿ ಚಲ್ಲಾಟವಾಡುತ್ತಿದೆ. ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿ ಅಧ್ಯಯನ ನಡೆಸುವ ಹಾಸ್ಟೆಲ್ ಗಳನ್ನು ಬಲಪಡಿಸಲು ಸರಕಾರ ಕಾಳಜಿ ತೋರುತ್ತಿಲ್ಲ. ಈಗಿನ ಬೆಲೆ ಏರಿಕೆಗೆ ೩೫೦೦ ರೂ ಆಹಾರ ಭತ್ಯಯನ್ನು ಹಾಸ್ಟಲ್ ವಿದ್ಯಾರ್ಥಿಗಳಿಗೆ ಸರಕಾರ ನೀಡಬೇಕಿದೆ. ಈಗ ಶಾಲಾ ವಿದ್ಯಾರ್ಥಿಗಳಿಗೆ ೧೦೦೦ ರೂ, ಕಾಲೇಜು ವಿದ್ಯಾರ್ಥಿಗಳಿಗೆ ೧೧೦೦ ರೂ ನೀಡಲಾಗುತ್ತಿದೆ. ಇದರಿಂದ ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆ ಸಾಧ್ಯವಿಲ್ಲ.  ಹಾಸ್ಟೆಲ್ ಮತ್ತು ಕಾಲೇಜುಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸರಕಾರ ಜಾಗೃತೆ ವಹಿಸಬೇಕಿದೆ ಎಂದರು.
ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕೇವಲ ಶೇ ೯ ರಷ್ಟು ಮಾತ್ರ. ಅದನ್ನು ಗಣನೀಯವಾಗಿ ಹೆಚ್ಚಿಸುವಲ್ಲಿ ಸರಕಾರ ಆಸಕ್ತಿ ತೋರುತ್ತಿಲ್ಲ. ಸರಕಾರಿ ವಿ.ವಿಗಳನ್ನು ಬಲಪಡಿಸುವ ಬದಲಾಗಿ ಖಾಸಗಿ ವಿ.ವಿಗಳ ಸ್ಥಾಪನೆಗೆ ಹೆಚ್ಚು ಆಧ್ಯತೆ ನೀಡುತ್ತಿರುವುದರಿಂದ ಉನ್ನತ ಶಿಕ್ಷಣ ಕಲೆಯುವವರ ಪ್ರಮಾಣ ಕುಸಿಯುತ್ತಿದೆ ಎಂದ ಅಸಮಧಾನ ವ್ಯಕ್ತ ಪಡಿಸಿದರು. 
ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೆ.೧೦ ರ ಶಾಲಾ ಕಾಲೇಜ್ ಬಂದ್ ಯಶಸ್ವಿಗಾಗಿ ೨೮ ರಿಂದ ಪ್ರಚಾರಾಂದೋಲನ ಕೈ ಗೊಳ್ಳಲಾಗುವುದು. ಸೆ.೦೫ ರಂದು ಸೈಕಲ್ ಜಾಥಾ. ಮತ್ತು ಸೆ.೦೮ ರಂದು ಪಂಜಿನ ಮೆರವಣಿಗೆ ನಡೆಸಿ ಬಂದ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಶಾಲೆಗಳಿಗೆ ವಿತರಣೆ ಮಾಡಲಾಗಿರುವ ಪಠ್ಯಪುಸ್ತಕ  ಮುದ್ರಣ ಕಳಪೆ ಪ್ರಮಾಣದಲ್ಲಿರುವುದರಿಂದ ತನಿಖೆಗೆ ಒತ್ತಾಯಿಸಿದರು. ಆರ್.ಎಮ್.ಎಸ್. ಯೋಜನೆಯಲ್ಲಿ ಆರಂಭಿಸಿದ ಕಟ್ಟಡಗಳು ಒಂದು ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮಳೆ ಬಂದ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಅನೇಕ ಶಾಲಾ-ಕಾಲೇಜುಗಳು ಸೋರುತ್ತಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ನೀಡಲು ಶಾಸಕರು ಮುಂದಾಗಬೇಕಿದೆ.  ಹಾಸ್ಟ್‌ಲ್‌ಗಳಿಗೆ ಸ್ವಂತ ಕಟ್ಟಡ ಇಲ್ಲದ ಪರಿಣಾಮ ಅನೇಕ ವಿದ್ಯಾರ್ಥಿಗಳು ಹಾಸ್ಟಲ್ ವಂಚಿತರಾಗಿದ್ದಾರೆ. ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ದಿಗೆ ಒತ್ತಾಯಿಸಿ ಬಂದ್ ಆಚರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ದುರಗೇಶ್ ಡಗ್ಗಿ, ಹನಮಂತ್ ಭಜಂತ್ರಿ, ಗ್ಯಾನೇಶ್ ಕಡಗದ್, ಮಂಜುನಾಥ್ ಡಗ್ಗಿ, ಶಿವಕುಮಾರ್, ವಿರೇಶ್ ಕುದರಿಮೋತಿ, ಮೇಘನಾ, ಕಾವ್ಯಾ, ಆಶಾ ಸೇರಿದಂತೆ ಅನೇಕರು ಇದ್ದರು. 

Advertisement

0 comments:

Post a Comment

 
Top