PLEASE LOGIN TO KANNADANET.COM FOR REGULAR NEWS-UPDATES

 ಇತಿಹಾಸ ಪ್ರಸಿದ್ದ, ಐತಿಹಾಸಿಕ, ವಿಶ್ವವಿಖ್ಯಾತ ಪ್ರೇಕ್ಷಣೀಯ ಕ್ಷೇತ್ರದಲ್ಲಿ ಇಡೀ ರಾಜ್ಯ ಹಾಗು ದೇಶ ತಲೆತಗ್ಗಿಸುವಂತಹ ಅಮಾನವೀಯವಾದ ಸಂಗತಿಯಿದೆ. ಅಂದರೆ ಉತ್ತರ ಕರ್ನಾಟಕ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಾತರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಣ್ಣೇರಿ ಎಂಬ ಗ್ರಾಮವಿದೆ. ನಾಡಿನ ಹೆಸರಾಂತ ನದಿಗಳಲ್ಲೊಂದಾದ ಮಲಪ್ರಭ ನದಿಯ ದಂಡೆಯಲ್ಲಿದ್ದು ಭೌಗೋಳಿಕವಾಗಿ ಸುಂದರವಾದ ಗ್ರಾಮವಾಗಿದೆ. ಆದರೆ ಈ ಗ್ರಾಮದಲ್ಲಿ ಪ್ರತಿಯೊಬ್ಬ ನಾಗರೀಕನೂ ತಲೆ ತಗ್ಗಿಸುವಂತಹ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಅದೆನೆಂದರೆ ಇಲ್ಲಿ ಇಂದಿಗೂ ಅಸ್ಪೃಶ್ಯತೆ ಜಾರಿಯಲ್ಲಿದೆ. ಸುಮಾರು ೭೦ ಕುಟುಂಬ ದಲಿತ ಸಮುದಾಯಕ್ಕೆ ಸೇರಿದರಿದ್ದು ಇವರನ್ನು ಗ್ರಾಮದ ಬೇರೆ ಜಾತಿಯವರು ಮುಟ್ಟುವಂತಿಲ್ಲ ಮತ್ತು ಅವರನ್ನು ಮನೆಹತ್ತಿರ ಸೇರಿಸಿಕೊಳ್ಳುವಂತಿಲ್ಲ ಏಕೆಂದರೆ ಅವರನ್ನು ತಮ್ಮ ಮನೆಗಳ ಹತ್ತಿರ ಸೇರಿಸಿಕೊಂಡರೆ ಅಥವಾ ಕರದರೆ ಹಾವು ಚೇಳು ಬರುತ್ತವಂತೆ ಈ ನಂಬಿಕೆಯಿಂದ ದಲಿತರನ್ನು ಶಪಿಸುತ್ತಾರೆ ಮತ್ತು ದಲಿತ ಸಮುದಾಯದವರಿಗೆ ಕ್ಷೌರ ಮಾಡುತ್ತಿಲ್ಲ ಮೇಲ್ವರ್ಗದ ಸಮುದಾಯದವರು ಹಾಗೂ ಕ್ಷೌರಿಕರು ನೀಷೆದ ಹಾಕಿದ್ದಾರೆ. ಹೀಗಾಗಿ ಮಣ್ಣೇರಿ ಗ್ರಾಮದ ಜನತೆ ಗ್ರಾಮೀಣ ಪ್ರದೇಶದಿಂದ ನಗರಪ್ರದೇಶ ಬಾದಮಿಗೆ ೧೧ ಕಿ ಮೀ ಪ್ರಯಾಣ ಮಾಡಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಅನ್ಯ ಜಾತಿ ಅಥವಾ ಈ ಗ್ರಾಮದಲ್ಲಿ ದಲಿತರಲ್ಲದವರ ಮನೆ ಕೆಲಸ, ವ್ಯವಸಾಯ, ದನ ಕಾಯುವುದು, ಸಗಣಿ ತೆಗೆಯುವುದು, ರಸ್ತೆ ಸ್ವಚ್ಚತೆ ಇಂತಹ ಕೆಲಸಗಳನ್ನೆಲ್ಲಾ ಮಾಡುವುದು ಇದೇ ಜನರು!. ಈ ಎಲ್ಲಾ ಕೆಲಸಗಳಿಗಾಗಿ ಇಲ್ಲಿಯ ದಲಿತರನ್ನು ಅವಲಂಬಿಸಿದ್ದಾರೆ. ಪ್ರಶ್ನೆಯೆಂದರೆ ದಲಿತರನ್ನು ದುಡಿಸಿಕೊಳ್ಳುವಾಗ ಇಲ್ಲದ ಮಡಿ ಮೈಲಿಗೆ, ಸಭ್ಯತೆ ಇವರನ್ನು ಮುಟ್ಟುವಾಗ, ಇವರ ಮನೆಗಳ ಹತ್ತಿರ ಬಂದಾಗ ಮಾತ್ರ ಪ್ರಜ್ಞೆಮೂಡುತ್ತದೆ. ಅದೇಕೊ ಗೊತ್ತಿಲ್ಲ ಇಂತಹ ಕೃತ್ಯಗಳು ಇಂದೂ ಸಹ ನೈಜವಾಗಿದ್ದರು ಉತ್ತರ ಕರ್ನಾಟಕದ ದಲಿತ ಸಂಘಟನೆಗಳು ಕೂಡ ಮೌನವಾಗಿರುವುದು ನನಗೆ ಬೇಸರ ತಂದಿದೆ. ಬಹುಶಃ ನಾವೆಲ್ಲರೂ ಇಂತಹ ವ್ಯವಸ್ಥೆಯನ್ನು ಸಹಜವೆಂದು ಪರಿಗಣಿಸಿ, ಒಪ್ಪಿಕೊಂಡು ನಮ್ಮ ಅಸಹಾಯಕತೆಯನ್ನು ಮೆರೆದಿದ್ದೇವೆಯೇ ಗೊತ್ತಿಲ್ಲ. ಇದು ಸರ್ಕಾರಿ ಅಧಿಕಾರಿಗಳಿಗೆ ಗೊತ್ತಿದ್ದರೂ ತೆಪ್ಪಗಿದ್ದಾರೆ ಇಂಥ ಅವಮಾನವನ್ನು ನಾವು ಇನ್ನೆಷ್ಟುದಿನ ಸಹಿಸಬೆಕು. 


ರೇಣುಕಾ ಮ ಮಾದರ 
ಬದಾಮಿ ತಾಲುಕು ಮಣ್ಣೇರಿ 
ಪತ್ರಿಕೊದ್ಯಮದ ವಿದ್ಯಾರ್ಥಿ
renukabadami@gmail.com



Advertisement

0 comments:

Post a Comment

 
Top